Advertisement

ರೀಲ್ಸ್‌ ಮಾಡಲು DSLR ಕ್ಯಾಮೆರಾ ಬೇಕೆಂದು ಕೆಲಸಕ್ಕಿದ್ದ ಮನೆಯಿಂದ ಚಿನ್ನಾಭರಣ ಲೂಟಿಗೈದ ಮಹಿಳೆ

03:24 PM Jul 21, 2024 | Team Udayavani |

ದೆಹಲಿ: ಕೆಲಸಕ್ಕಿದ್ದ ಮನೆಯಲ್ಲೇ ಲಕ್ಷಾಂತರ ರೂ. ಬೆಳೆಬಾಳುವ ಚಿನ್ನಾಭರಣಗಳನ್ನು ಕಳ್ಳತನ ಮಾಡಿ ಪರಾರಿ ಆಗಲು ಯತ್ನಿಸಿದ ಮಹಿಳೆಯನ್ನು ಬಂಧಿಸಿರುವ ಘಟನೆ ದೆಹಲಿಯ ದ್ವಾರಕಾದಲ್ಲಿ ನಡೆದಿದೆ.

Advertisement

ನೀತು ಯಾದವ್(30)‌ ಬಂಧಿತ ಮಹಿಳೆ. ಈಕೆಯಿಂದ ಕದ್ದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ಏನಿದು ಘಟನೆ?:  ನೀತು ಯಾದವ್‌ ದ್ವಾರಕಾದಲ್ಲಿ ಮನೆಕೆಲಸಗಾರ್ತಿಯಾಗಿ ಕೆಲಸ ಮಾಡುತ್ತಿದ್ದಳು. ಈ ಐಷಾರಾಮಿ ಬಂಗಲೆಯ ಮಾಲೀಕರು ಜು.15ರಂದು ತಮ್ಮ ಮನೆಯಿಂದ  ಚಿನ್ನದ ಬಳೆ, ಬೆಳ್ಳಿ ಸರ ಮತ್ತು ಬೆಳ್ಳಿ ಆಭರಣಗಳನ್ನು ಕಳವು ಆಗಿದೆ. ತಮಗೆ ಕೆಲಸದಾಕೆಯ ಮೇಲೆ ಸಂಶಯವಿರುವುದಾಗಿ ಹೇಳಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ದೂರು ದಾಖಲಿಸಿ ಪೊಲೀಸರು ನೀತು ಅವರನ್ನು ಸಂಪರ್ಕಿಸಲು ಕರೆ ಮಾಡಿದಾಗ, ಅವರ ಫೋನ್‌ ಸ್ವಿಚ್ಡ್‌ ಆಫ್‌ ಬಂದಿದೆ. ಕೊಟ್ಟಿರುವ ವಿಳಾಸ ಕೂಡ ನಕಲಿ ಎನ್ನುವುದು ಗೊತ್ತಾಗಿದೆ. ಇದಾದ ಬಳಿಕ ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿ ನೀತು ಇರುವ ಸ್ಥಳವನ್ನು ಪತ್ತೆ ಮಾಡಿದ್ದಾರೆ.

ಪೊಲೀಸರು ನೀತುರನ್ನು ಬಂಧಿಸಲು ತೆರಳುವಾಗ ಅವರು ಬ್ಯಾಗ್‌ ಹಿಡಿದುಕೊಂಡು ದೆಹಲಿಗೆ ಹೋಗಲು ಸಿದ್ಧರಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.

Advertisement

ರೀಲ್ಸ್‌ ಗಾಗಿ ಮಾಡಲು ಕ್ಯಾಮೆರಾ ಖರೀದಿಗೆ ಮುಂದಾಗಿದ್ದ ನೀತು: ನೀತು ಮೂಲತಃ ನಿವಾಸಿಯಾಗಿದ್ದು, ತನ್ನ ಪತಿ ಮಾದಕ ವ್ಯಸನಿಯಾಗಿದ್ದಾನೆ. ಗಂಡನ ಕಿರುಕುಳ ತಾಳಲಾರದೆ, ಅದರಿಂದ ತಪ್ಪಿಸಿಕೊಂಡು ದೆಹಲಿಗೆ ಬಂದು ಬಂಗಲೆಗಳಲ್ಲಿ ಮನೆ ಕೆಲಸ ಮಾಡಲು ಆರಂಭಿಸಿರುವುದಾಗಿ ವಿಚಾರಣೆ ವೇಳೆ ನೀತು ಹೇಳಿದ್ದಾರೆ.

ನಾನೊಂದು ಯೂಟ್ಯೂಬ್‌ ಚಾನೆಲ್‌ ಹೊಂದಿದ್ದೇನೆ. ಬಿಡುವಿನ ವೇಳೆ ರೀಲ್ಸ್‌ ವಿಡಿಯೋಗಳನ್ನು ಮಾಡಿ ಅದರಲ್ಲಿ ಪೋಸ್ಟ್‌ ಮಾಡುತ್ತಿದ್ದೆ. ಈ ವೇಳೆ ನನಗೆ ನೀವು ಡಿಎಸ್‌ಎಲ್‌ಆರ್ ಕ್ಯಾಮೆರಾ ಖರೀದಿಸಿ ಅದರಲ್ಲಿ ವಿಡಿಯೋ ಗುಣಮಟ್ಟ ಉತ್ತಮವಾಗಿ ಬರುತ್ತದೆನ್ನುವ ಸಲಹೆವೊಂದು ಬಂತು. ಡಿಎಸ್‌ಎಲ್‌ಆರ್ ಕ್ಯಾಮೆರಾಕ್ಕೆ ಲಕ್ಷ ಲಕ್ಷ ಹಣ ಬೇಕಾಗಿತ್ತು. ಹೀಗಾಗಿ ನಾನು ನನ್ನ ಕುಟುಂಬವರ ಬಳಿ ಸಾಲ ಕೇಳಿದ್ದೆ. ಆದರೆ ಯಾರೂ ಕೂಡ ಸಾಲ ನೀಡಿಲ್ಲ. ಹೀಗಾಗಿ ಈ ಬಂಗಲೆಯಲ್ಲಿ ಲಕ್ಷಾಂತರ ಮೌಲ್ಯದ ಚಿನ್ನ, ಬೆಳ್ಳಿ ಇರುವುದು ಗೊತ್ತಾಯಿತು. ಕ್ಯಾಮೆರಾ ಖರೀದಿಗಾಗಿ ಅದನ್ನು ಕಳವು ಮಾಡುವ ಪ್ಲ್ಯಾನ್‌ ಮಾಡಿದೆ ಎಂದು ನೀತು ಪೊಲೀಸರು ಮುಂದೆ ಹೇಳಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next