Advertisement

Robbery: ಸ್ಕೂಟಿ ನಿಲ್ಲಿಸಿ ವಡಾಪಾವ್ ತರಲು ಹೋಗಿ 5 ಲಕ್ಷದ ಚಿನ್ನಾಭರಣ ಕಳೆದುಕೊಂಡ ದಂಪತಿ

05:08 PM Aug 31, 2024 | Team Udayavani |

ಪುಣೆ: ವೃದ್ಧ ದಂಪತಿಗಳು ತಮ್ಮ ದ್ವಿಚಕ್ರ ವಾಹನವನ್ನು ರಸ್ತೆ ಬದಿ ನಿಲ್ಲಿಸಿ ವಡಾಪಾವ್ ತರಲು ಹೋಗಿ ಬರುವಷ್ಟರಲ್ಲಿ ಸ್ಕೂಟಿಯಲ್ಲಿದ್ದ ಐದು ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳರ ಪಾಲಾಗಿದೆ.

Advertisement

ಈ ಘಟನೆ ಕಳೆದ ಗುರುವಾರ (ಆಗಸ್ಟ್ 29) ರಂದು ಮಧ್ಯಾಹ್ನ ನಾಲ್ಕು ಗಂಟೆಯ ಸುಮಾರಿಗೆ ನಡೆದಿದೆ. ವೃದ್ಧ ದಂಪತಿಗಳು ಬ್ಯಾಂಕಿನಲ್ಲಿದ್ದ ತಮ್ಮ ಆಭರಣಗಳನ್ನು ಪಡೆದುಕೊಂಡು ಮನೆಗೆ ಬರುತ್ತಿದ್ದ ವೇಳೆ ದಾರಿ ಮಧ್ಯೆ ದಂಪತಿಗೆ ವಡಾಪಾವ್ ತಿನ್ನುವ ಆಸೆಯಾಗಿದೆ ಅದರಂತೆ ದಂಪತಿ ಹೋಟೆಲ್ ಬಳಿ ತಮ್ಮ ಸ್ಕೂಟಿ ನಿಲ್ಲಿಸಿ ಪತಿ ವಡಾಪಾವ್ ತರಲು ಹೋಗಿದ್ದಾರೆ ಆದರೆ ಪತ್ನಿ ಸ್ಕೂಟಿ ಬಳಿಯೇ ನಿಂತಿದ್ದು ಆದರೆ ಇದನ್ನು ಗಮನಿಸಿದ ಇಬ್ಬರು ಕಳ್ಳರ ತಂಡದಲ್ಲಿ ಓರ್ವ ಸ್ಕೂಟಿ ಬಳಿ ಹೊಂಚು ಹಾಕುತ್ತಿದ್ದ ಆದರೆ ಇದು ವೃದ್ಧ ಮಹಿಳೆಯ ಗಮನಕ್ಕೆ ಬಂದಿಲ್ಲ ಅಷ್ಟೋತ್ತಿಗಾಗಲೇ ಕಳ್ಳರ ತಂಡದಲ್ಲಿದ್ದ ಇನ್ನೋರ್ವ ಬೈಕಿನಲ್ಲಿ ಬಂದು ವೃದ್ಧ ಮಹಿಳೆಯ ಬಳಿ ಹಣ ಬಿದ್ದಿದೆ ಎಂದು ಹೇಳುತ್ತಾನೆ ಯುವಕನ ಮಾತು ನಂಬಿ ಸ್ಕೂಟಿಯ ಹಿಂಬದಿಗೆ ಮಹಿಳೆ ಹೋದದ್ದನ್ನು ಗಮನಿಸುತ್ತಿದ್ದ ಇನ್ನೋರ್ವ ಕೂಡಲೇ ಸ್ಕೂಟಿಯ ಎದುರು ಇರಿಸಿದ್ದ ಚಿನ್ನಾಭರಣಗಳ ಬ್ಯಾಗ್ ಎಗರಿಸಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ.

ಇತ್ತ ಕಳ್ಳ ಬ್ಯಾಗ್ ಎಗರಿಸುತ್ತಿರುವುದನ್ನು ಗಮನಿಸಿದ ಮಹಿಳೆ ಬೊಬ್ಬೆ ಹೊಡೆದು ಅಲ್ಲಿದ್ದ ಜನರಲ್ಲಿ ಹೇಳಿಕೊಂಡಿದ್ದಾರೆ ಆದರೆ ಅಷ್ಟೋತ್ತಿಗಾಗಲೇ ಕಳ್ಳರು ಅಲ್ಲಿಂದ ಜಾಗ ಖಾಲಿ ಮಾಡಿದ್ದಾರೆ.

ಘಟನೆಯ ದೃಶ್ಯ ಅಲ್ಲಿನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ.

 

Advertisement

Advertisement

Udayavani is now on Telegram. Click here to join our channel and stay updated with the latest news.