Advertisement

ಮರಳು ಸಮಸ್ಯೆ ನಿವಾರಣೆಗೆ ಆಗ್ರಹಿಸಿ ಜೆಡಿಎಸ್‌ ನಿರಶನ

02:57 PM Apr 14, 2017 | Team Udayavani |

ಧಾರವಾಡ: ಜಿಲ್ಲೆಯ ಮರಳು ಸಮಸ್ಯೆ ನಿವಾರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಜೆಡಿಎಸ್‌ ಪಕ್ಷದ ಜಿಲ್ಲಾ ಘಟಕದಿಂದ ನಗರದ ಡಿಸಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಲಾಯಿತು. ನಗರದ ಕಲಾಭವನ ಮೈದಾನದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಅಂಜುಮನ್‌ ಸರ್ಕಲ್‌, ಟಿಪ್ಪು ಸರ್ಕಲ್‌, ಗಾಂಧಿಚೌಕ್‌, ಜುಬ್ಲಿ ಸರ್ಕಲ್‌ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಸಮಾವೇಶಗೊಂಡಿತು. 

Advertisement

ಈ ವೇಳೆ ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ, ಕಳೆದ ಹಲವಾರು ತಿಂಗಳಿಂದ ಧಾರವಾಡ ಸೇರಿದಂತೆ ರಾಜ್ಯಾದ್ಯಂತ ಮರಳು ಅಭಾವ ಉಂಟಾಗಿದೆ. ಕಟ್ಟಡ ಕಾರ್ಮಿಕರು, ಗುತ್ತಿಗೆದಾರರು ಹಾಗೂ ಕಟ್ಟಡ ಸಾಮಗ್ರಿ ವ್ಯಾಪಾರಸ್ಥರು ನಿರುದ್ಯೋಗಿಗಳಾಗಿದ್ದಾರೆ ಎಂದು ದೂರಿದರು. 

ಮರಳು ಲಾರಿಗಳಿಗೆ ಒಂದೇ ತೆರನಾದ ಜಿಪಿಎಸ್‌ (ಗ್ಲೋಬಲ್‌ ಪೊಜಿಸ್ಸಿಂಗ್‌ ಸಿಸ್ಟಮ್‌) ಅಳವಡಿಸಬೇಕು. ಅಳವಡಿಕೆ ಮಾಡಿದ  ಜಿಪಿಎಸ್‌ ರಾಜ್ಯದ ಎಲ್ಲ ಜಿಲ್ಲೆಗಳಿಗೂ ಅನ್ವಯವಾಗಬೇಕು. ಗದಗ ಮತ್ತು ಇನ್ನಿತರ ಮರಳು ಸಿಗುವ ಜಿಲ್ಲೆಗಳಲ್ಲಿ ಮರಳು ಟೆಂಡರ್‌ ಪ್ರಕ್ರಿಯೆ ಜಾರಿಯಲ್ಲಿದ್ದು, ಅದನ್ನೂ ಬೇಗ ಮುಗಿಸಿ ಕಡಿಮೆ ದರದಲ್ಲಿ ಜಿಲ್ಲೆಯ ಜನರಿಗೆ ಮರಳು ದೊರೆಯುವಂತೆ ಮಾಡಬೇಕು.

ಒಂದು ವೇಳೆ ಮರಳು ಸಮಸ್ಯೆಯನ್ನು ಜಿಲ್ಲಾಡಳಿತ ಹಾಗೂ  ಜಿಲ್ಲಾ ಉಸ್ತುವಾರಿ ಸಚಿವರು ಕೂಡಲೇ ಬಗೆಹರಿಸದೇ ಹೋದಲ್ಲಿ ಮುಂಬರುವ ದಿನಗಳಲ್ಲಿ ಜೆಡಿಎಸ್‌ ಪಕ್ಷದ ವತಿಯಿಂತ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು  ಎಚ್ಚರಿಸಿದರು. ಪಿಡಬ್ಲೂ$Âಡಿ ಇಲಾಖೆಯಿಂದ ಮರಳು ಸಂಗ್ರಹಣೆ ಮತ್ತು ವಿತರಣೆ ಕೆಲವನ್ನು ಕೂಡಲೇ ಹಿಂಪಡೆಯಬೇಕು.

ಮರಳು ಮಾμಯಾದಲ್ಲಿ ತೊಡಗಿರುವ ಇಲಾಖೆ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ಸರಕಾರ ಆದಾಯದ ಸೋರಿಕೆಗೆ ಕಾರಣರಾದ ಅಧಿಕಾರಿಗಳನ್ನು ಗುರುತಿಸಿ ಅವರ ಮೇಲೆ ಕಾನೂನು ಪ್ರಕಾರ ಶಿಕ್ಷೆ ವಿಧಿಸಬೇಕು. ಹೊಸ ಮರಳು ನೀತಿ ಜಾರಿಗೆ ತರುವ ಪ್ರಕ್ರಿಯೆ ಕೈಬಿಟ್ಟು ಪಾರದರ್ಶಕ ಹಾಗೂ ಕಾನೂನಾತ್ಮಕವಾಗಿ ಟೆಂಡರ್‌ ಕರೆದ ಧಾರವಾಡ ಜಿಲ್ಲೆಗೆ ಮರಳು ಸಿಗುವಂತೆ ಮಾಡಬೇಕು

Advertisement

ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆಆಗ್ರಹಿಸಿ ಜಿಲ್ಲಾಧಿಕಾರಿ ಮೂಲಕ ರಾಜ್ಯ  ಸರಕಾರಕ್ಕೆ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವರಿಗೆ ಮನವಿ ಸಲ್ಲಿಸಲಾಯಿತು. ಮಾಜಿ ಸಚಿವ ಆಲ್ಕೋಡ ಹನುಮಂತಪ್ಪ, ಜೆಡಿಎಸ್‌ ಮುಖಂಡರಾದ ರಾಜಣ್ಣ ಕೋರವಿ, ಗುರುರಾಜ ಹುಣಸೀಮ, ಬಸವರಾಜ ಭಜಂತ್ರಿ, ಅಲ್ತಾಫ್‌ ಕಿತ್ತೂರ, ರಾಜು ಅಂಬೋರೆ, ಜೀಲಾನಿ ಎಂ. ಸೇರಿದಂತೆ ಹಲವರು ಇದ್ದರು.  

Advertisement

Udayavani is now on Telegram. Click here to join our channel and stay updated with the latest news.

Next