ತಿ.ನರಸೀಪುರ: ಪಟ್ಟಣದ ಪುರಸಭಾ ಅಧಿಕೃತವಾಗಿ ಘೋಷಣೆಯಾಗಿದ್ದು ಪುರಸಭೆಯ 23 ವಾರ್ಡ್‌ಗಳಲ್ಲಿ ಕೆಲವು ವಾರ್ಡ್‌ಗಳಲ್ಲಿ ಮೀಸಲಾತಿಯನ್ನು ಬದಲಾವಣೆ ಮಾಡಿ ಅಂತಿಮ ಮೀಸಲಾತಿ ಪಟ್ಟಿ ಹೊರ ಬಿದ್ದಿದೆ.
ಪಟ್ಟಣ ಪಂಚಾಯಿತಿಯಲ್ಲಿ ಭೈರಾಪುರ ಮತ್ತು ಆಲಗೂಡು ಗ್ರಾಪಂಗಳನ್ನು ಪುರಸಭೆಯಾಗಿ ಮೇಲ್ದಜೇìಗೇರಿಸಿದ ನಂತರ ಕಳೆದ ಬಾರಿ ಪ್ರಕಟಗೊಂಡಿದ್ದ ಕೆಲವು ವಾರ್ಡ್‌ಗಳ ಮೀಸಲಾತಿಯ ಬಗ್ಗೆ ರಾಜಕೀಯ ಮುಖಂಡರು, ಆಕಾಂಕ್ಷಿಗಳು ಆಕ್ಷೇಪಣೆ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ವಾರ್ಡ್‌ಗಳ ಮೀಸಲಾತಿ ಬದಲಾಯಿಸಿ ಅಂತಿಮ ಮೀಸಲಾತಿ ಪಟ್ಟಿ ಪ್ರಕಟಲಿಸಲಾಗಿದೆ.
ಪುರಸಭೆಯ ನೂತನ 23 ವಾರ್ಡ್‌ಗಳಲ್ಲಿ ಸಾಮಾನ್ಯಕ್ಕೆ 6 ಕ್ಷೇತ್ರ, ಸಾಮಾನ್ಯ ಮಹಿಳೆಯರಿಗೆ 6, ಪ.ಜಾತಿಗೆ 2, ಪ.ಜಾತಿ ಮಹಿಳೆಗೆ 2, ಪ.ಪಂಗಡಕ್ಕೆ 3, ಪ.ಪಂಗಡ ಮಹಿಳೆಗೆ 3 ಹಾಗೂ ಹಿಂದುಳಿವ ವರ್ಗ “ಎ’ಗೆ 1 ಕ್ಷೇತ್ರದಲ್ಲಿ ಮೀಸಲು ನಿಗಧಿಗೊಳಿಸಲಾಗಿದೆ.
ಕ್ಷೇತ್ರವಾರು ಮೀಸಲಾತಿ ವಿವರ: ವಾರ್ಡ್ 1- ಪರಿಶಿಷ್ಟ ಪಂಗಡ ಮಹಿಳೆ, ವಾರ್ಡ್ 2 – ಪರಶಿಷ್ಟ ಪಂಗಡ, ವಾರ್ಡ್ 3- ಪರಿಶಿಷ್ಟ ಜಾತಿ ಮಹಿಳೆ, ವಾರ್ಡ್ 4 – ಪ.ಜಾತಿ, ವಾರ್ಡ್ 5- ಸಾಮಾನ್ಯ, ವಾರ್ಡ್ 6 – ಪರಿಶಿಷ್ಟ ಜಾತಿ ಮಹಿಳೆ, ವಾರ್ಡ್ 7- ಸಾಮಾನ್ಯ, ವಾರ್ಡ್ 8 – ಸಾಮಾನ್ಯ ಮಹಿಳೆ, ವಾರ್ಡ್ 9 – ಸಾಮಾನ್ಯ, ವಾರ್ಡ್ 10 % ಸಾಮಾನ್ಯ ಮಹಿಳೆ, ವಾರ್ಡ್ 11 % ಸಾಮಾನ್ಯ,
ವಾರ್ಡ್ 12 – ಸಾಮಾನ್ಯ ಮಹಿಳೆ, ವಾರ್ಡ್ 13- ಹಿಂದುಳಿದ ವರ್ಗ ಎ, ವಾರ್ಡ್ 14- ಪರಿಶಿಷ್ಟ ಜಾತಿ, ವಾರ್ಡ್ 15 – ಪರಿಶಿಷ್ಟ ಪಂಗಡ ಮಹಿಳೆ, ವಾರ್ಡ್ 16 – ಪರಿಶಿಷ್ಟ ಪಂಗಡ, ವಾರ್ಡ್ 17 – ಪರಿಶಿಷ್ಟ ಪಂಗಡ ಮಹಿಳೆ, ವಾರ್ಡ್ 18 – ಸಾಮಾನ್ಯ ಮಹಿಳೆ, ವಾರ್ಡ್ 19- ಸಾಮಾನ್ಯ ಮಹಿಳೆ, ವಾರ್ಡ್ 20- ಪರಿಶಿಷ್ಟ ಪಂಗಡ, ವಾರ್ಡ್ 21- ಸಾಮಾನ್ಯ ಮಹಿಳೆ, ವಾರ್ಡ್ 22- ಸಾಮಾನ್ಯ, ವಾರ್ಡ್ 23- ಸಾಮಾನ್ಯ.