Advertisement

ತಮಿಳು ನಾಡು ಸಾರಿಗೆ ನಿಗಮ ನೌಕರರಿಗೆ ಶೇ.20 ಬೋನಸ್‌ ಘೋಷಣೆ

05:22 PM Oct 26, 2018 | Team Udayavani |

ಚೆನ್ನೈ : ತಮಿಳು ನಾಡು ಮುಖ್ಯಮಂತ್ರಿ ಕೆ ಪಳನಿಸ್ವಾಮಿ ಅವರು ಇಂದು ಶುಕ್ರವಾರ ರಾಜ್ಯ ಸಾರಿಗೆ ನಿಗಮದ ಸುಮಾರು 1.44 ಲಕ್ಷ ನೌಕರರಿಗೆ ಲಾಭವಾಗುವ ಹಾಗೆ 215.99 ಕೋಟಿ ರೂ. ಮೊತ್ತದ ದೀಪಾವಳಿ ಬೋನಸ್‌ ಪ್ರಕಟಿಸಿದ್ದಾರೆ. 

Advertisement

ಮುಖ್ಯಮಂತ್ರಿ ಪಳನಿಸ್ವಾಮಿ ಅವರು ಇಂದು ಹೊರಡಿಸಿರುವ ಆದೇಶದ ಪ್ರಕಾರ 1.44 ಲಕ್ಷ ರಾಜ್ಯ ಸಾರಿಗೆ ನಿಗಮದ ನೌಕರರಿಗೆ ಶೇ.11.67ರ ಎಕ್ಸ್‌ ಗ್ರೇಶಿಯಾ ಸಹಿತ  ಶೆ.20 ಬೋನಸ್‌ ಸಿಗಲಿದೆ ಎಂದು ಅಧಿಕೃತ ಪ್ರಕಟನೆ ತಿಳಿಸಿದೆ. 

ಇದೇ ವೇಳೆ ಸಿಎಂ ಪಳನಿಸ್ವಾಮಿ ಅವರು ಸಾರಿಗೆ ನಿಗಮಗಳಿಗೆ ಹೆಚ್ಚುತ್ತಿರುವ ಇಂಧನ ವೆಚ್ಚವನ್ನು ಭರಿಸುವುದಕ್ಕಾಗಿ ಸಹಾಯಧನ ನೀಡುವುದನ್ನು ಮುಂದುವರಿಸಿದ್ದಾರೆ. ಅಂತೆಯೇ 2018ರ ಜನವರಿ 20 ಮತ್ತು ಸೆ.30ರ ನಡುವಿನ ಅವಧಿಗೆಂದು 198.66 ಕೋಟಿ ರೂ. ಸಬ್ಸಿಡಿಯನ್ನು ಸರಕಾರ ಪ್ರಕಟಿಸಿದೆ ಎಂದು ಪ್ರಕಟನೆ ತಿಳಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next