Advertisement

ಮೋದಿ ಮೈತ್ರಿಗೆ ಯಾವುದೇ ಪಕ್ಷ ಸಿದ್ಧವಿಲ್ಲ: ತ.ನಾ.ಕಾಂಗ್ರೆಸ್‌ ಟಾಂಗ್‌

10:49 AM Jan 16, 2019 | Team Udayavani |

ಚೆನ್ನೈ : ಲೋಕಸಭಾ ಚುನಾವಣೆಗಾಗಿ ಭಾರತೀಯ ಜನತಾ ಪಕ್ಷ ಯಾವುದೇ ಸಮಾನ ಮನಸ್ಕ ಪಕ್ಷಗಳೊಂದಿಗೆ ಮೈತ್ರಿಗೆ ಸಿದ್ದವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಹಿಂದೆ ನೀಡಿದ್ದ ಹೇಳಿಕೆಗೆ ತಮಿಳು ನಾಡು ಕಾಂಗ್ರೆಸ್‌ ಘಟಕ ವ್ಯಂಗ್ಯದ ಪ್ರತಿಕ್ರಿಯೆ ನೀಡಿದೆ.

Advertisement

“ಮೋದಿ ಅವರು ತಮ್ಮ ಪಕ್ಷದ ಬಾಗಿಲನ್ನು ತೆರಿದಿಟ್ಟಿರಬಹುದು; ಆದರೆ ಯಾವುದೇ ಪಕ್ಷ ಒಳಹೋಗಲು ಸಿದ್ಧವಿಲ್ಲ; ಬದಲು ಬಿಜೆಪಿಯೊಳಗಿಂದಲೇ ಅದರ ಮಿತ್ರ ಪಕ್ಷಗಳು ಹೊರ ಬರುತ್ತಿವೆ’ ಎಂದು ತಮಿಳು ನಾಡು ಕಾಂಗ್ರೆಸ್‌ ಘಟಕದ ಅಧ್ಯಕ್ಷ ಸು ತಿರುನವಕ್ಕರಸರ್‌ ಹೇಳಿದ್ದಾರೆ. 

ತಮಿಳು ನಾಡು ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಪ್ರಧಾನಿ ಮೋದಿ ಅವರು ಪಕ್ಷದ ಹಳೇ ಮಿತ್ರರು ಮತ್ತೆ ಒಳಬರಬೇಕೆಂದು ಬಿಜೆಪಿ ಹಾರೈಸುತ್ತದೆ; ಅವರಿಗಾಗಿ ಬಿಜೆಪಿ ಬಾಗಿಲನ್ನು ತೆರಿದಿಡಲಾಗಿದೆ ಎಂದು ಹೇಳಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next