ಪಣಜಿ: ಶಾಸಕರನ್ನು ಮಾರಾಟ ಮಾಡುವುದು, ಮತಗಳನ್ನು ಒಡೆಯುವುದು ಇಂತಹ ಕೆಲಸದಲ್ಲಿ ಕಾಂಗ್ರೆಸ್ ಪಕ್ಷ ತೊಡಗಿಸಿಕೊಂಡಿದೆ ಎಂದು ತೃಣಮೂಲ ಕಾಂಗ್ರೇಸ್ ನಾಯಕ ಹಾಗೂ ಗೋವಾದ ಮಾಜಿ ಮುಖ್ಯಮಂತ್ರಿ ಲುಯಿಜಿನ್ ಫಾಲೆರೊ ಆರೋಪಿಸಿದರು.
ಇವರು ಶುಕ್ರವಾರ ತೃಣಮೂಲ ಕಾಂಗ್ರೆಸ್ ಪಕ್ಷದ ವತಿಯಿಂದ ರಾಜ್ಯಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಿದ ನಂತರ ಮಾತನಾಡಿದರು.
ತೃಣಮೂಲ ಕಾಂಗ್ರೆಸ್ ಪಕ್ಷವು ಶಾಶ್ವತ ಹಾಗೂ ಕಾಯ್ದೆ ಸಹಿತ ಗಣಿಗಾರಿಕೆ ಆರಂಭಕ್ಕೆ ಹೆಚ್ಚಿನ ಒತ್ತು ನೀಡಲಿದೆ. ಗೋವಾದಲ್ಲಿ ಗಣಿಗಾರಿಕೆ ಶೀಘ್ರವಾಗಿ ಆರಂಭಗೊಳ್ಳಲು ಟಿಎಂಸಿ ಪಕ್ಷವು ಹೋರಾಟ ನಡೆಸಲಿದೆ ಎಂದು ಹೇಳಿದರು.
ಇದನ್ನೂ ಓದಿ:ಕೃಷಿ ಕಾಯ್ದೆಗಳು ಹಿಂಪಡೆದಿರುವುದು ಪಶ್ಚಾತಾಪದ ಮೊದಲ ಹೆಜ್ಜೆ: ಎಚ್.ಕೆ.ಪಾಟೀಲ
ಟಿಎಂಸಿ ಪಕ್ಷದಲ್ಲಿ ನನಗೆ ಈ ಅವಕಾಶ ನೀಡಿರುವುದಕ್ಕೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ ರವರಿಗೆ ನಾನು ಧನ್ಯವಾದ ಸಲ್ಲಿಸುತ್ತೇನೆ. ಗೋವಾದಲ್ಲಿ ಗುಜರಾತ್ ಮೋಡೆಲ್ ಅಥವಾ ಬಂಗಾಲದ ಮೋಡೆಲ್ ಬೇಡ, ಗೋವಾದಲ್ಲಿ ಗೋವಾದ ಮೋಡೆಲ್ ಬೇಕು. ಗೋವಾದಲ್ಲಿ ಏನು ಬೇಕು ಎಂಬುದನ್ನು ಜನತೆಯೇ ನಿರ್ಧಾರ ಮಾಡಲಿದ್ದಾರೆ. ಗೋವಾದಲ್ಲಿ ಉತ್ತಮ ಪಕ್ಷ ಅಧಿಕಾರಕ್ಕೆ ಬರಬೇಕು ಎಂಬುದು ಟಿಎಂಸಿ ಪಕ್ಷದ ಉದ್ದೇಶವಾಗಿದೆ ಎಂದರು.