Advertisement

ಕೋವಿಡ್ ಮಹಾಮಾರಿಗೆ ಬಲಿಯಾದ ತೃಣಮೂಲ ಕಾಂಗ್ರೆಸ್ ಶಾಸಕ: ಸಂತಾಪ ಸೂಚಿಸಿದ ಮಮತಾ ಬ್ಯಾನರ್ಜಿ

01:01 PM Jun 26, 2020 | Mithun PG |

ಕೊಲ್ಕತ್ತಾ: ಕೋವಿಡ್ ಮಹಾಮಾರಿ ಸೊಂಕಿಗೆ ತುತ್ತಾಗಿ ಪಶ್ಚಿಮಬಂಗಾಳದ ತೃಣಮೂಲ ಕಾಂಗ್ರೆಸ್ ಶಾಸಕ ತಮೋನಾಶ್ ಘೋಷ್ (60) ಇಂದು ನಿಧನರಾಗಿದ್ದಾರೆ. ಆ ಮೂಲಕ ವೈರಸ್ ಆರ್ಭಟಕ್ಕೆ ಮತ್ತೊಬ್ಬ ಜನಪ್ರತಿನಿಧಿ ಬಲಿಯಾದಂತಿದೆ.
ಘೋಷ್ ಅವರಲ್ಲಿ ಮೇ 23ರಂದು ಕೋವಿಡ್ ಇರುವುದು ದೃಢಪಟ್ಟಿತ್ತು. ಸತತ ಒಂದು ತಿಂಗಳಿನಿಂದ ಚಿಕಿತ್ಸೆ ಪಡೆಯುತ್ತಿದ್ದ ಅವರ ಆರೋಗ್ಯ ಕೆಲವು ದಿನಗಳಿಂದ ತೀವ್ರ ಹದಗಟ್ಟಿತ್ತು. ಆದರೇ ಇಂದು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ಮಾಧ್ಯಮದ ವರದಿ ತಿಳಿಸಿದೆ.

Advertisement

ಫಾಲ್ಟಾ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಿ ಮೂರು ಬಾರಿ ಶಾಸಕರಾಗಿದ್ದ ತಮೋನಾಶ್ ಘೋಷ್  1998ರಿಂದಲೂ ಪಕ್ಷದ ಖಜಾಂಚಿಯಾಗಿದ್ದರು.

ತಮೋನಾಶ್ ಘೋಷ್ ಸಾವಿಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಂತಾಪ ಸೂಚಿಸಿದ್ದಾರೆ. 35 ವರ್ಷಗಳಿಂದಲೂ ನಮ್ಮ ಜೊತೆ ಇದ್ದ ಅವರೀಗ ಎಲ್ಲರನ್ನೂ ಅಗಲಿದ್ದಾರೆ. ಪಕ್ಷ ಮತ್ತು ಜನರ ಒಳಿತಿಗಾಗಿ ತಮ್ಮನ್ನು ಸಮರ್ಪಿಸಿಕೊಂಡಿದ್ದರು. ಅವರ ಸ್ಥಾನವನ್ನು ಯಾರಿಂದಲೂ ತುಂಬಲಾಗದು. ಅವರ ಪತ್ನಿ ಮತ್ತು ಮಕ್ಕಳಿಗೆ ದುಃಖ ಭರಿಸುವ ಶಕ್ತಿ ಆ ದೇವರು ನೀಡಿಲಿ ಎಂದು ಟ್ವಿಟ್ ಮಾಡಿದ್ಧಾರೆ.

ಕೋವಿಡ್ ವೈರಸ್ ಗೆ ಪಶ್ಚಿಮ ಬಂಗಾಳದಲ್ಲಿ ಮೃತಪಟ್ಟ ಮೊದಲ ಜನಪ್ರತಿನಿಧಿ ಇವರು. ಘೋಷ್ ನಿಧನಕ್ಕೆ ಪಕ್ಷದ ಎಲ್ಲಾ ನಾಯಕರು ಸಂತಾಪ ಸೂಚಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next