Advertisement

West Bengal bypolls; ಟಿಎಂಸಿ ಕ್ಲೀನ್ ಸ್ವೀಪ್: ಪ್ರತಿಭಟನೆಗಳು ಬಿಜೆಪಿಗೆ ಸಹಕಾರಿಯಾಗಲಿಲ್ಲ

06:42 PM Nov 23, 2024 | Team Udayavani |

ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ನಡೆದ ವಿಧಾನಸಭಾ ಉಪಚುನಾವಣೆಯಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ 6 ಕ್ಕೆ 6 ಸ್ಥಾನಗಳನ್ನು ಭರ್ಜರಿಯಾಗಿ ಗೆದ್ದಿದೆ. ಬಿಜೆಪಿ ಗೆದ್ದಿದ್ದ ಒಂದು ಸ್ಥಾನವನ್ನೂ ಕಸಿದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

Advertisement

ಆರ್‌ಜಿ ಕರ್ ಮೆಡಿಕಲ್ ಕಾಲೇಜು ಟ್ರೈನಿ ವೈದ್ಯೆ ಅ*ತ್ಯಾಚಾರ ಮತ್ತು ಹ*ತ್ಯೆ ಘಟನೆಯ ಕುರಿತು ನಡೆಯುತ್ತಿರುವ ಭಾರೀ ಪ್ರತಿಭಟನೆಗಳು ಮತದಾರರ ಮನಸ್ಥಿತಿ ಬದಲಿಸುವಲ್ಲಿ ವಿಫಲವಾಗಿದೆ.ಪಶ್ಚಿಮ ಬಂಗಾಳದಲ್ಲಿ ಸಿಎಂ ಮಮತಾ ಬ್ಯಾನರ್ಜಿ ಅವರು ತನ್ನ ರಾಜಕೀಯ ಪ್ರಾಬಲ್ಯವನ್ನು ಮತ್ತಷ್ಟು ಗಟ್ಟಿಗೊಳಿಸಿದ್ದಾರೆ.

ಬಿಜೆಪಿ ಪ್ರತಿನಿಧಿಸುತ್ತಿದ್ದ ಮದರಿಹತ್ ಕ್ಷೇತ್ರವನ್ನೂ ಟಿಎಂಸಿ ವಶಪಡಿಸಿಕೊಂಡು ಶಾಕ್ ನೀಡಿದೆ. 2024 ರ ಲೋಕಸಭೆ ಚುನಾವಣೆಯಲ್ಲಿ ವಿಜಯ ಸಾಧಿಸಿದ ನಂತರ ತಮ್ಮ ಅಸೆಂಬ್ಲಿ ಸ್ಥಾನಗಳಿಗೆ ಶಾಸಕರು ರಾಜೀನಾಮೆ ನೀಡಿದ್ದರಿಂದ ಆರು ಕ್ಷೇತ್ರಗಳಾದ ನೈಹಾಟಿ, ಹರೋವಾ, ಮೇದಿನಿಪುರ್, ತಲ್ದಂಗ್ರಾ, ಸಿತಾಯಿ (SC), ಮತ್ತು ಮದರಿಹತ್ (ST) ನಲ್ಲಿ ಉಪ ಚುನಾವಣೆ ನಡೆದಿತ್ತು.

ಈ ಗೆಲುವಿನೊಂದಿಗೆ, 294 ಸದಸ್ಯರ ರಾಜ್ಯ ವಿಧಾನಸಭೆಯಲ್ಲಿ TMC ಯ ಸಂಖ್ಯೆ 216 ಕ್ಕೆ ಏರಿದೆ. 2021ರಲ್ಲಿ 77 ಇದ್ದ ಬಿಜೆಪಿಯ ಸಂಖ್ಯೆ 69ಕ್ಕೆ ಕುಸಿದಿದೆ.

Advertisement

Udayavani is now on Telegram. Click here to join our channel and stay updated with the latest news.

Next