ಮುಂಬಯಿ: ತೀಯಾ ಸಮಾಜ ಮುಂಬಯಿ ವತಿಯಿಂದ ವಾರ್ಷಿಕವಾಗಿ ಕೊಡಲ್ಪಡುವ ಶೈಕ್ಷಣಿಕ ನೆರವು ಕಾರ್ಯಕ್ರಮವು ಜು. 7ರಂದು ಸಂಜೆ ಘಾಟ್‌ಕೋಪರ್ ಪಂತ್‌ನಗರದ ಕನ್ನಡ ವೆಲ್ಫೆàರ್ ಅಸೋಸಿಯೇಶನ್ ಸಭಾಗೃಹದಲ್ಲಿ ನಡೆಯಿತು.
ಸಂಸ್ಥೆಯ ವಿಶ್ವಸ್ತ ಕಾರ್ಯಾಧ್ಯಕ್ಷರಾದ ರೋಹಿದಾಸ್ ಬಂಗೇರ ಅವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಆಶಯ ನುಡಿಗಳನ್ನು ಸಂಸ್ಥೆಯ ಅಧ್ಯಕ್ಷರಾದ ರವೀಂದ್ರ ಮಂಜೇಶ್ವರ ಅವರು ನುಡಿದರು. ಈ ಸಂದರ್ಭದಲ್ಲಿ ಆರೋಗ್ಯ ನಿಧಿ ಕಾರ್ಯಾಧ್ಯಕ್ಷರಾದ ತಿಮ್ಮಪ್ಪ ಬಂಗೇರ, ಗೌರವ ಕೋಶಾಧಿಕಾರಿ ಅಶ್ವಿನಿ ಬಂಗೇರ, ಪೂರ್ವ ವಲಯದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಪದ್ಮಿನಿ ಕೋಟೆಕಾರ್, ಪಶ್ಚಿಮ ವಲಯ ಮಹಿಳಾ ವಿಭಾಗದ ಕಾರ್ಯದರ್ಶಿ ಶಶಿಪ್ರಭಾ ಬಂಗೇರ, ಸಾಂಸ್ಕೃತಿಕ ವಿಭಾಗದ ಕಾರ್ಯಾಧ್ಯಕ್ಷೆ ಚಂದ್ರಾವತಿ ವಾಸಂತ್, ಪಶ್ಚಿಮ ವಲಯದ ಕಾರ್ಯಾಧ್ಯಕ್ಷರಾದ ಸುಧಾಕರ್ ಉಚ್ಚಿಲ್, ತೀಯಾ ಬೆಳಕು ಸಂಪಾದಕ ಶ್ರೀಧರ ಸುವರ್ಣ, ಗೌರವ ಪ್ರಧಾನ ಕಾರ್ಯದರ್ಶಿ ಬಾಬು ಬೆಲ್ಚಡ ಉಪಸ್ಥಿತರಿದ್ದರು.
ಶೈಕ್ಷಣಿಕ ನೆರವಿಗೆ ಆಗಮಿಸಿದ ಮಕ್ಕಳ ಯಾದಿಯನ್ನು ಗೌರವ ಪ್ರದಾನ ಕಾರ್ಯದರ್ಶಿ ಬಾಬು ಬೆಳ್ಚಡ ಓದಿದರು. ಶೈಕ್ಷಣಿಕ ನೆರವಿಗಾಗಿ ಧನಸಹಾಯವನ್ನಿತ್ತ ದಾನಿಗಳು ಹಾಗೂ ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರ ಹಸ್ತದಿಂದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವನ್ನು ವಿತರಿಸಲಾಯಿತು.
ಜತೆಗೆ ಕೋಶಾಧಿಕಾರಿ ವಿಶ್ವ ಬಹದ್ದೂರ, ಜತೆ ಕಾರ್ಯದರ್ಶಿ ಸುಧೀರ್ ಮಂಜೇಶ್ವರ ಮತ್ತು ಉಜ್ವಲಾ, ಹಿರಿಯ ಸದಸ್ಯರಾದ ಸುಂದರ್ ಟಿ. ಬಂಗಾರ, ಸಾವಿತ್ರಿ ಚಂದ್ರಶೇಖರ್, ಮಹೇಶ್ ಉಳ್ಳಾಲ್, ದಿನೇಶ್ ನಾರಾಯಣ್, ಸುಂದರಂ ಐಲ್, ಜಯ ಸಾಲ್ಯಾನ್, ಯಾಧವ್ ರಾವ್, ಪುರುಷೋತ್ತಮ ಕೋಟೆಕಾರ್, ಕಾರ್ಯಕಾರಿ ಸಮಿತಿಯ ಸದಸ್ಯರಾದ ಅಶೋಕ್ ಕೋಟ್ಯಾನ್, ವಾಸು ಶೈಲೇಶ್ ಬಂಗಾರ, ಕೇಶವ ಸುವರ್ಣ, ಮಾಜಿ ಕೋಶಾಧಿಕಾರಿ ರಮೇಶ್ ಉಳ್ಳಾಲ…, ಮಾಜಿ ಗೌರವ ಪ್ರಧಾನ ಕಾರ್ಯದರ್ಶಿ ಈಶ್ವರ ಎಂ. ಐಲ್ ಹಾಗೂ ಕಾರ್ಯಕಾರಿ ಸಮಿತಿ ಉಪಸಮಿತಿಯ ಸದಸ್ಯರು, ಸಮಾಜ ಬಾಂಧವರು ಉಪಸ್ಥಿತರಿದ್ದರು. ಗೌರವ ಪ್ರಧಾನ ಕಾರ್ಯದರ್ಶಿ ಬಾಬು ಬೆಳ್ಚಡ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು. ಕೊನೆಯಲ್ಲಿ ಉಪಾಹಾರದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು.