Advertisement

ಸುದೀಪ್‌-ಅನೂಪ್‌ ಚಿತ್ರಕ್ಕೆ ಟೈಟಲ್ ಫಿಕ್ಸ್

06:43 PM Dec 20, 2018 | |

“ರಂಗಿತರಂಗ’, “ರಾಜರಥ’ ಚಿತ್ರಗಳನ್ನು ಕೊಟ್ಟ ಬಳಿಕ ಕೆಲಕಾಲ ಚಿತ್ರರಂಗದಲ್ಲಿ ಎಲ್ಲೂ ಕಾಣಿಸಿಕೊಂಡಿರದ ನಿರ್ದೇಶಕ ಅನೂಪ್‌ ಭಂಡಾರಿ, ನಟ ಕಿಚ್ಚ ಸುದೀಪ್‌ಗಾಗಿ ಹೊಸಚಿತ್ರವೊಂದನ್ನು ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಇದೀಗ ಚಿತ್ರದ ಟೈಟಲ್‌ ಪೋಸ್ಟರ್‌ ಬಿಡುಗಡೆಯಾಗಿದೆ.

Advertisement

ಹೌದು, ನಟ ಕಿಚ್ಚ ಸುದೀಪ್ ಈ ವಿಷಯವನ್ನು ತಮ್ಮ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಚಿತ್ರಕ್ಕೆ “ಬಿಲ್ಲ ರಂಗ ಬಾಷ’ ಎಂದು ಹೆಸರಿಡಲಾಗಿದ್ದು, ಇದೊಂದು ಆ್ಯಕ್ಷನ್‌- ಆಡ್ವೆಂಚರ್‌ ಸಿನಿಮಾವಾಗಿದೆ. ಅಲ್ಲದೇ ಸುಮಾರು 18 ವರ್ಷದ ಹಿಂದೆಯೇ ಅನೂಪ್‌ ಚಿತ್ರದ ಕಥೆ ಬರೆದಿದ್ದರಂತೆ.

ಸದ್ಯ ಸುದೀಪ್‌-ಅನೂಪ್‌ ಅವರ ಚೊಚ್ಚಲ ಸಿನಿಮಾವು ಸುದೀಪ್ ನಿರ್ಮಾಣ ಸಂಸ್ಥೆಯಿಂದಲೇ ನಿರ್ಮಾಣವಾಗುತ್ತಿದೆ. ಚಿತ್ರದ ಕಲಾವಿದರು, ತಂತ್ರಜ್ಞರ ಆಯ್ಕೆಗೆ ಚಾಲನೆ ಸಿಕ್ಕಿದ್ದು, ಸಂಕ್ರಾಂತಿಯ ವೇಳೆಗೆ ಸೆಟ್ಟೇರುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next