Advertisement

ಟೈಟಾನ್‌ ನೆಬುಲಾಗೆ ಇಪ್ಪತ್ತರ ಸಂಭ್ರಮ

01:12 PM Oct 19, 2018 | Team Udayavani |

ಬೆಂಗಳೂರು: ವಿಶಿಷ್ಟಶೈಲಿ ಆಭರಣಗಳ ಮಾದರಿಯಲ್ಲಿ ರೂಪುಗೊಂಡಿರುವ ಟೈಟಾನ್‌ ನೆಬುಲಾ ಸರಣಿಯ ವಾಚ್‌ಗಳ 20ನೇ ವಾರ್ಷಿಕೋತ್ಸವ ಸಂಭ್ರಮ ಬೆಳಕು, ಕತ್ತಲಿನಾಟದ ನಾದ-ನೃತ್ಯದ ವಾತಾವರಣದಲ್ಲಿ ಅದ್ದೂರಿಯಾಗಿ ನಡೆಯಿತು. 

Advertisement

ಮಂಗಳವಾರ ನಗರದ ಹೋಟೆಲೊಂದರಲ್ಲಿ ಆಯೋಜಿಸಿದ್ದ ನೆಬುಲಾ ವಾರ್ಷಿಕೋತ್ಸವ ಸಮಾರಂಭಕ್ಕೆ ಮಧು ನಟರಾಜನ್‌ ನೇತೃತ್ವದ ನಾಟ್ಯಾ ಸ್ಟೇಮ್‌ ಡ್ಯಾನ್ಸ್‌ ಕಂಪನಿ ಕಲಾವಿದರು ನಡೆಸಿಕೊಟ್ಟ ವಿಭಿನ್ನ ಶೈಲಿಯ ಭರತನಾಟ್ಯ ಹಾಗೂ ಕಥಕ್‌ ನೃತ್ಯ ಪ್ರದರ್ಶನ ಮೆರುಗು ನೀಡಿತು.

ನಂತರ ಮಾತನಾಡಿದ ಟೈಟಾನ್‌ ವಾಚಸ್‌ ಮತ್ತು ಆ್ಯಕ್ಸಸರೀಸ್‌ ವಿಭಾಗದ ಸಿಇಒ ಎಸ್‌. ರವಿ ಕಾಂತ್‌ ಅವರು, ಎರಡು ದಶಕಗಳಿಂದ ಜನಮೆಚ್ಚುಗೆ ಪಡೆದಿರುವ ನೆಬುಲಾ ಕೈಗಡಿಯಾರಗಳ ವಿನ್ಯಾಸ ಮತ್ತು ಕುಶಲತೆಯು ಭಾರತೀಯರ ವೈಭವದ ಜೀವನ, ಕಲೆ ಮತ್ತು ವಾಸ್ತುಶಿಲ್ಪವನ್ನು ನೆನಪಿಸುವಂತಿವೆ. ಪ್ರತಿಯೊಂದು ನೆಬುಲಾ ಟೈಂಪೀಸ್‌ ಕಲಾತ್ಮಕ ಆಭರಣಗಳ ತಯಾರಿಕೆಯ ತಂತ್ರಗಳನ್ನು ಮರುಸೃಷ್ಟಿಸಲು ಹಾಗೂ ಅಳವಡಿಸಿಕೊಳ್ಳಲು ಅನುವು ಮಾಡಿಕೊಡುವಂತೆ ವಿನ್ಯಾಸಗೊಳಿಸಲಾಗಿದೆ.

ಕಳೆದ 25 ವರ್ಷಗಳ ಹಿಂದೆ ಟೈಟಾನ್‌ನ ರಾಗಾಸೀರೀಸ್‌ ಜನ್ಮತಾಳಿತ್ತು. ಮದುವೆ ಇನ್ನಿತರ ಶುಭ ಸಮಾರಂಭಗಳಲ್ಲಿ ಬಳಸುವ ಸರಣಿ ವಾಚ್‌ಗಳು ಇವುಗಳಾಗಿದ್ದವು. ಆ ಮೂಲಕ ರಾಗಾ ಮನೆಮಾತಾಗಿ ಬಹಳಷ್ಟು ಖ್ಯಾತಿ ಪಡೆದಿತ್ತು. ನಂತರ ಬಿಡುಗಡೆ ಮಾಡಿದ ನೆಬುಲಾ ಸರಣಿ ವಾಚ್‌ಗಳು ಭಾರತೀಯ ಕಲೆಗೆ ತಕ್ಕಂತೆ ನಿರ್ಮಾಣವಾಗತೊಡಗಿತು.

ಶುಭ ಸಮಾರಂಭಗಳಲ್ಲಿ ಸ್ತ್ರೀಯರು ಧರಿಸುವ ಉಡುಪುಗಳು ಹಾಗೂ ಚಿನ್ನಾಭರಣಗಳ ಜೊತೆ ಸೂಕ್ತ ವಾಚ್‌ಗಳನ್ನು ಹಾಕಿಕೊಳ್ಳಲು ಇಷ್ಟಪಡುತ್ತಾರೆ. ಇದನ್ನರಿತ ಟೈಟಾನ್‌ ಸಂಸ್ಥೆ ಮಹಿಳೆಯರ ಬಯಕೆ ಈಡೇರಿಸುವ ಸಲುವಾಗಿ ನೆಬುಲಾ ಸೀರೀಸ್‌ ವಾಚ್‌ಗಳನ್ನು ಪರಿಚಯಿಸಿತು.

Advertisement

ವಿಶಿಷ್ಟ ಶೈಲಿಯ 18-22 ಕ್ಯಾರೆಟ್‌ನ ಚಿನ್ನದ ವಾಚ್‌ ತಯಾರಿಕೆಯಲ್ಲಿ ಭಾರತದ ಮೊದಲ ಯೂನಿಕ್‌ ಬ್ರಾÂಂಡ್‌ ನೆಬುಲಾ ಎಂಬ ಹೆಗ್ಗಳಿಕೆಗೂ ಪಾತ್ರವಾಯಿತು. ಇಂದಿನ ಮಾರುಕಟ್ಟೆಯಲ್ಲಿ ನೆಬುಲಾ ಜನಪ್ರಿಯತೆ ಗಳಿಸಿದ್ದಲ್ಲದೆ, ಮುಂಬರುವ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಸಾಧಿಸಲಿದೆ ಎಂದು ತಿಳಿಸಿದರು.

ನೆಬುಲಾ ಉತ್ಕೃಷ್ಟಕಲೆಯ ವಾಚ್‌ಗಳು: ನೆಬುಲಾ ಸೀರೀಸ್‌ನಲ್ಲಿ ಮೀನಾಕಾರಿ ಕಲೆಯ ನಜಾಕತ್‌, ಫಿಲಿಗ್ರೀ, ಕ್ಯಾಲಿಗ್ರಫಿ, ಪ್ರಿಶಿಯಸ್‌ ಸ್ಟೋನ್ಸ್‌, ಲೋಟಸ್‌, ನಕಾಶಿ, 17ನೇ ಶತಮಾನಕ್ಕೆ ಕರೆದೊಯ್ಯವ ಪೊಲ್ಕಿ ಸ್ಟಡೆಡ್‌ ಜರ್‌ಕ್ವಾ, ಸದಾ ಬೆಳಗುವ ದೀಪಾಶಿಖಾ, ಕೈಬಳೆ ಆಕಾರದ ನಶ್ವಾ,

ಸ್ನೋಫಾಲ್‌ ಬ್ಯೂಟಿಯಂತಿರುವ ಈರಾ, ಬ್ರೆಸ್‌ಲೆಟ್‌ ವಾಚ್‌ ದುರ್ರಿಯಾ, ಚಂದಿರನ ಪ್ರತಿಬಿಂಬದಂತಿರುವ ದಾರಾ, ಅಗ್ನಿಯ ಕೊಡುಗೆಯಂತಿರುವ ನಶಿತ, ಚಳಿಗಾಲದಲ್ಲೂ ಬೆಚ್ಚಗಿಡುವ ಎಲೆಗಳಂತಿರುವ ನೌವೈರಾ ಮುಂತಾದ ಭಿನ್ನವಾದ ಉತ್ಕೃಷ್ಟಕಲೆಯ ವಾಚ್‌ಗಳು ಲಭ್ಯ.

Advertisement

Udayavani is now on Telegram. Click here to join our channel and stay updated with the latest news.

Next