ನಂಗೆ ಬರೋಕೆ ಆಗಲ್ಲಾ ಸಾರಿ ಟ್ರೈ ಮಾಡಿ ನೋಡ್ತೀನಿ, ನಾನ್ ಖಂಡಿತ ಬರ್ತೀನಿ ಒಟ್ಟಿಗೆ ಹೋಗುವಾ ಮತ್ತೂಬ್ಬ ಬೇರೆ ಯಾರು ಬರುವವರಿದ್ದೀರಿ ಬೇಗ ಹೇಳಿ…” ಹಾಗೆ ಹೀಗೆ ಅಂತ ವಾಟ್ಸಾಪ್ ವೇದಿಕೆಯಲ್ಲಿ ಚರ್ಚೆಯಾಗುತ್ತಿತ್ತು. ನಾನೇನೋ ಹೊಸ ಮೂವಿ ಬಂತಲ್ಲಾ ಕಿರಿಕ್ ಪಾರ್ಟಿ ಅದಕ್ಕೇನಾದ್ರು ಕರೀತಾ ಇದ್ದಾರ ಅಂತಾ ಅನ್ಕೊಂಡೆ. ಸ್ವಲ್ಪಮುಂದಕ್ಕೆ ಹೋಗಿ ಮೆಸೇಜ್ ನೋಡಾªಗ ಗೊತ್ತಾಯ್ತು ನಮ್ಮ ಪಿಯು ಕಾಲೇಜಿನ ವಾರ್ಷಿಕೋತ್ಸವದ ಬಗ್ಗೆ ಚರ್ಚೆ ನಡೀತಿತ್ತು. ಇನ್ಯಾಕೆ ತಡಾ “ನಾನು ಬರ್ತೀನಿ’ ಅಂತ ಹೆಬ್ಬೆರಳೆತ್ತಿದೆ.
ಆ ಸುಂದರ ಸುದಿನಕ್ಕಾಗಿ ಕಾದಿದ್ದ ದಿನ ಕೊನೆಗೂ ಬಂದೇ ಬಿಡು¤ ನೋಡಿ. ಬರ್ತೀನಿ ಅಂದೋರಲ್ಲಿ ಅರ್ಧದಷ್ಟು ಜನ ಅಲ್ಲಿ ಇರ್ಲಿಲ್ಲ, ಆದ್ರೆ ಟೋಟಲ್ ಆಗಿ ನಾವು ಎಂಟು ಜನ ಇದ್ವಿ. ಏನೋ ಒಂದು ಸಂತೋಷ, ಏನೋ ಒಂಥರಾ ಹೆಮ್ಮೆ, ನಮ್ಮ ಹಳೇ ಕಾಲೇಜ್‌ಗೆ ಮತ್ತೆ ಎಂಟ್ರಿ ಕೊಡ್ತಿದ್ದೀವಿ ಅನ್ನೋ ಪುಳಕ. ಬಟ್ ಈಗ ಯಾರ್ ಭಯಾನೂ ಇಲ್ಲಾ, ಯಾಕಂದ್ರೆ ನಾವೀಗ ಹಳೆ ವಿದ್ಯಾರ್ಥಿಗಳು. ಆಗ ಹೆದರುತ್ತಿದ್ದ ದಿನಗಳು ಮಾತ್ರ ನೆನಪಾಗ್ತಿತ್ತು, ಆವತ್ತು ಕಾಲೇಜ್‌ಗೆ ಲೇಟಾಗಿ ಎಂಟ್ರಿ ಆಗ್ತಿದ್ದವರಲ್ಲಿ ನಾನು ಒಬ್ಬ. “ದಿನಾ ಯಾಕ್ ಲೇಟ್ ಅನ್ನೋದ್ ಕೇಳಿ ಕೇಳಿ ಕೆಲವೊಮ್ಮೆ ಗೇಟ್ ಬಳಿ ಬಂದು ಸೀದಾ ಬೀಚ್ ಕಡೆಗೆ ಒಬ್ನೇ ಹೋಗ್ತಿದ್ದೆ.
ಹಾ… ನೆನಪಿನಂಗಳದಿಂದ ಹೊರಬಂದು ಗೇಟ್ ಒಳ ಪ್ರವೇಶಿಸಿದೆವು. ಒಂದು ಕಡೆ ಅಬ್ಬರದ ಪ್ರೋಗ್ರಾಮ್ ನಡೆಯುತ್ತಿದ್ದರೆ, ನನ್ನ ಕತ್ತುಗಳು ಕಲಿಸಿದ ಗುರುಗಳಿಗಾಗಿ ತಡಕಾಡುತ್ತಿತ್ತು. ಬಿಡುವಿಲ್ಲದ ಮಾತುಗಳು ಗುಂಪಿನಲ್ಲಿ ತಾ ಮುಂದು ಎಂಬಂತೆ ಸ್ಪರ್ಧೆಗಿಳಿದಿದ್ದವು. ಅಲ್ಲಿ ಬಂದವರೆಲ್ಲಾ ಪ್ರೋಗ್ರಾಮ್ ನೋಡೊದಕ್ಕಿಂತ ಹೆಚ್ಚಾಗಿ ತಮ್ಮ ತಮ್ಮ ಗೆಳೆಯರ ಜೊತೆ ಹರಟೆ ಹೊಡೆಯೋದರಲ್ಲೇ ಬ್ಯುಸಿಯಾಗಿದ್ದರು. ಈಗೀಗ ಸೆಲ್ಫಿ ತೆಗೆಯೋದು ಗೆಳೆತನದ ಅಚ್ಚೆಯಾಗಿದ್ದರಿಂದ ಸೆಲ್ಫಿ ದೆವ್ವಗಳ ಕಾಟ ಜಾಸ್ತಿನೇ ಇತ್ತು. ಪಕ್ಕದಲ್ಲೇ ಕಾಲೇಜು ಕಾರಿಡಾರ್ ನೋಡಿದಾಗ ನಗು ತಡೆಯಲಾಗಲಿಲ್ಲ ಕಾರಣ ಕಾಲೇಜು ದಿನಗಳಲ್ಲಿ ಮಾಡುತ್ತಿದ್ದ ತುಂಟಾಟಗಳು.
ಪ್ರಾಧ್ಯಾಪಕರು ಏನಾದ್ರು ಬರೆಯಲಿಕ್ಕೆ ಕೊಟ್ಟರೆ ಒಂದೋ ಹುಡ್ಗಿರು ಕಂಪ್ಲೀಟ್ ಮಾಡಿದ ಬುಕ್ ನಮ್ಮ ಕೈಯಲ್ಲಿರ್ತಿತ್ತು, ಇಲ್ಲಾಂದ್ರೆ ನಮ್ಮ ಒಗ್ಗಟ್ಟು ಪ್ರದರ್ಶನ ಕಾರಿಡಾರ್ ನಲ್ಲಿ ತೋರಿಸ್ತಾ ಇರುತಿದ್ವಿ. ಯಾರೂ ಬರೆದು ತರ್ಲಿಲ್ಲಾ ಅನ್ನೋವಾಗ ನಮ್ಮ ಹುಡುಗರ ಗುಂಪನ್ನು ಕ್ಲಾಸಿನಿಂದ ಕಾರಿಡಾರ್‌ಗೆ ವರ್ಗಾವಣೆ ಮಾಡ್ತಿದ್ರು ನಮ್ಮ ಗುರುವರ್ಯರು! ನಾವುಗಳು ಏನೂ ಆಗದಂತೆ ಹೊರಗಡೆ ಬಂದು ಪುನಃ ಹರಟೆ ಹೊಡೀತಿದ್ವಿ. ಕೊನೆಗೆ ಮೇಡಮ್ ಕ್ಲಾಸಿಂದ ಹೊರಗೆ ಬಂದು ಕಾಮನ್ ಡೈಲಾಗ್ ಹೊಡೆಯೋರು- “ನಾಯಿ ಬಾಲ ಡೊಂಕೇ…’ ಅಬ್ಬಬ್ಟಾ ನೆನಪುಗಳು ಸಾವಿರಾರು ಹೇಳಿಕೊಳ್ತಾ ಹೋದ್ರೆ ಮುಗಿಲೀಕೆ ಇಲ್ಲಾ…
ಇನ್ನೇನು ಪ್ರೋಗ್ರಾಮ್ ಮುಗಿಬೇಕು ಅನ್ನೋವಷ್ಟರಲ್ಲಿ ನಾವುಗಳೆಲ್ಲಾ ನಮ್ಮನ್ನು ತಿದ್ದಿ, ತೀಡಿ ಕಲಿಸಿದ ಶಿಕ್ಷಕರನ್ನು ಮಾತಿಗೆಳೆಯಲು ಹೋದೆವು. ಆದರೆ ನನಗಂತೂ ಪರಮಾಶ್ಚರ್ಯ. ಆವತ್ತು ನನ್ನನ್ನು ದುರಗುಟ್ಟಿ ನೋಡುತ್ತಿದ್ದ ಲೆಕ್ಚರರ್ ಎಲ್ಲರೂ ನನ್ನನ್ನೂ ಎಷ್ಟು ಆತ್ಮೀಯವಾಗಿ ಮಾತಾಡಿಸಿದ್ರು ಅಂದ್ರೆ, ನಂಬೋಕೆ ಆಗ್ತಾ ಇರ್ಲಿಲ್ಲ. “ನಾನು ಕಲಿಯೋದೆ ವೇ…’ ಅಂದವರೆಲ್ಲ , ನನ್ನನ್ನು ದಡ್ಡ ಎಂದು ಕೀಳಾಗಿ ಕಾಣಿ¤ದ್ದವರೆಲ್ಲ ಇವತ್ತು ಅಷ್ಟೆಲ್ಲಾ ಸ್ಟೂಡೆಂಟ್ಸ… ಎದುರಲ್ಲಿ ನನ್ನ ಬಗ್ಗೆ ಹೆಮ್ಮೆಯ ಮಾತನ್ನು ಹೇಳುತ್ತಿದ್ದಾರೆ. ಇದಕ್ಕೆಲ್ಲಾ ಕಾರಣ ಅಂದು ನನ್ನ ಆತ್ಮೀಯ ಗೆಳೆಯ ನೀಡಿದ ಅಮೂಲ್ಯ ಸಲಹೆ, ಅದು ನನ್ನ ಜೀವನದ ತಿರುವನ್ನೇ ಬದಲಿಸಿಬಿಟ್ಟಿತು. ಹೌದು ಪಿಯು ನಂತರ ಬಿಕಾಂ ಓದಲು ಸಜ್ಜಾದ ನನಗೆ ಬಿ. ಎ. ಜರ್ನಲಿಸಮ್ ಆಯ್ಕೆಮಾಡಿಕೊಳ್ಳಲು ನನ್ನ ಗೆಳೆಯ ಉತ್ತೇಜಿಸಿದ ಪರಿಣಾಮ ಇಂದು ಪ್ರಪಂಚ ನನ್ನನ್ನು ನೋಡುವ ದೃಷ್ಟಿ ಬದಲಾಗಿದೆ. ಇದಕ್ಕೆಲ್ಲಾ ಕಾರಣ ಪತ್ರಿಕೋದ್ಯಮ ಹಾಗೂ ನನ್ನ ಗೆಳೆಯನ ಮಾರ್ಗದರ್ಶನ. ಅಲ್ಲಿ ಸೇರಿದ ಹೆಚ್ಚಿನ ಗುರುಗಳೆಲ್ಲ, “ಹೀಗೆ ಬರೀತಾ ಇರು ಇನ್ನು ಎತ್ತರಕ್ಕೆ ಹೋಗು’ ಎಂದು ಪ್ರೋತ್ಸಾಹದ ಮಾತುಗಳನ್ನಾಡಿದಾಗ ಕಣ್ಣಂಚಲ್ಲಿ ಪುಟ್ಟ ಹನಿಯೊಂದು ನನಗರಿವಿಲ್ಲದೇ ಕೆನ್ನೆ ಮುತ್ತಿಕ್ಕುತ್ತಿತ್ತು.
ಈ ಲೇಖನ ಸುಮ್ಮನೆ ಬರೆದದ್ದಲ್ಲ, ಯಾವುದೋ ವಿಷಯ ಆಯ್ಕೆ ಮಾಡಲು ಹೊರಟ ನನಗೆ, “ಅದು ಬೇಡ ಪತ್ರಿಕೋದ್ಯಮವನ್ನೇ ಆಯ್ಕೆ ಮಾಡು’ ಎಂದು ಸೂಚಿಸಿದ ನನ್ನ ಗೆಳೆಯನಿಗೆ ಅನಂತ ಅನಂತ ಧನ್ಯವಾದಗಳನ್ನು ಪುಟ್ಟ ಬರಹದ ಮೂಲಕ ತಿಳಿಸುತ್ತಿದ್ದೇನೆ.
– ವಿಶ್ವಾಸ್ ಅಡ್ಯಾರ್
ವಿಶ್ವವಿದ್ಯಾನಿಲಯ ಕಾಲೇಜು
ಮಂಗಳೂರು