Advertisement

ನಾಳೆಯಿಂದ ವೈಭವದ 11ನೇ ಕುಂಭಮೇಳ

12:20 AM Feb 16, 2019 | |

ಮೈಸೂರು: ದಕ್ಷಿಣ ಭಾರತದ ಪುಣ್ಯನದಿಗಳಾದ ಕಾವೇರಿ,ಕಪಿಲ ಮತ್ತು ಸ್ಫಟಿಕ ಸರೋವರಗಳ
ತ್ರಿವೇಣಿ ಸಂಗಮವಾದ ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲೂಕಿನ ತಿರುಮಕೂಡಲು
ಶ್ರೀಕ್ಷೇತ್ರದಲ್ಲಿ ಭಾನುವಾರದಿಂದ ಮೂರು ದಿನಗಳ ಕಾಲ 11ನೇ ಮಹಾ ಕುಂಭಮೇಳ ನಡೆಯಲಿದೆ.
ಪ್ರಪ್ರಥಮ ಬಾರಿಗೆ 1989ರಲ್ಲಿ ಕುಂಭಮೇಳ ಪ್ರಾರಂಭಿಸಿ, ಪ್ರತಿ ಮೂರು ವರ್ಷಗಳಿಗೊಮ್ಮೆ
ನಡೆಸಿಕೊಂಡು ಬರಲಾಗುತ್ತಿದೆ. ಈ ಬಾರಿ ವಿಳಂಬಿ ನಾಮ ಸಂವತ್ಸರದಲ್ಲಿ 11ನೇ ಕುಂಭಮೇಳ
ಜರುಗಲಿದೆ.

Advertisement

17ರಂದು ಬೆಳಗ್ಗೆ 6 ಗಂಟೆಗೆ ಮಾಘ ಶುದ್ಧ ತ್ರಯೋದಶೀ ಪುಷ್ಯ ನಕ್ಷತ್ರ ಶ್ರೀ ಅಗಸೆöàಶ್ವರ ಸನ್ನಿಧಿ 
ಯಲ್ಲಿ ಅನುಜ್ಞೆ, ಪುಣ್ಯಾಹ, ಕಳಶ ಸ್ಥಾಪನೆ, ಗಣಹೋಮ, ಅಭಿಷೇಕ, ದೇವತಾರಾಧನೆ, ರಾಷ್ಟ್ರಾಶೀರ್ವಾ
ದ. ಸಂಜೆ 4ಕ್ಕೆ ಅಗ್ರತೀರ್ಥ ಸಂಗ್ರಹ ಸಮೇತಯಾಗಶಾಲಾ ಪ್ರವೇಶ, ಪುಣ್ಯಾಹ, ವಾಸ್ತುಹೋಮ 
ಗಳು ನಡೆಯಲಿದೆ. 18ರಂದು ಬೆಳಗ್ಗೆ 6ಕ್ಕೆ ಮಾಘ ಶುದ್ಧ   ಚತುರ್ದಶೀ ಆಶ್ಲೇಷ ನಕ್ಷತ್ರ, ಪುಣ್ಯಾಹ,
ನವಗ್ರಹಪೂಜೆ, ಜಪ, ನವಗ್ರಹ ಹೋಮ, ಪೂರ್ಣಾ ಹುತಿ. ಮಧ್ಯಾಹ್ನ 3.45ಕ್ಕೆ ಸುದರ್ಶನ
ಪೂಜೆ, ಹೋಮ, ಪೂರ್ಣಾಹುತಿ ನಡೆಯಲಿದೆ.

ಸ್ವಾಮೀಜಿಗಳ ಸ್ವಾಗತ: ಸಂಜೆ 4ಗಂಟೆಗೆ ಗುಂಜಾ ನರಸಿಂಹಸ್ವಾಮಿ ದೇವಸ್ಥಾನದಿಂದ ವಿವಿಧ
ಕಲಾತಂಡಗಳು, ಸ್ತಬಟಛಿಚಿತ್ರಗಳೊಂದಿಗೆ ಕುಂಭಮೇಳ ಲ್ಲಿ ಭಾಗವಹಿಸುವ ಸ್ವಾಮೀಜಿಗಳನ್ನು ಮೆರವಣಿಗೆಯಲ್ಲಿ ಕರೆದೊಯ್ಯಲಾಗುತ್ತದೆ.

ಗಂಗಾಪೂಜೆ ಮತ್ತು ದೀಪಾರತಿ: 19ರ ಮುಂಜಾನೆ 5.30ಕ್ಕೆ ಮಾಘಶುದಟಛಿ ವ್ಯಾಸ ಪೂರ್ಣಿಮಾ, ಪುಷ್ಯ  ನಕ್ಷತ್ರ, ಪುಣ್ಯಾಹ, ಸಪ್ತ ನದೀತೀರ್ಥ ಕಲಶ ಪೂಜೆ, ಹೋಮ, ಕುಂಭಲಗ್ನದಲ್ಲಿ ಪೂರ್ಣಾಹುತಿ, ತ್ರಿವೇಣಿ ಸಂಗಮದಲ್ಲಿ ಕಲಶತೀರ್ಥ ಸಂಯೋಜನೆ ಮಾಡಲಾಗುವುದು. ಪ್ರಾತಃಕಾಲ 9.35ರಿಂದ 9.50ರ ಮೀನಲಗ್ನ, ಬೆಳಗ್ಗೆ 11.30ರಿಂದ 12ಗಂಟೆಯ ವೃಷಭ ಲಗ್ನ, ಅಭಿಜಿನ್‌ ಮುಹೂರ್ತ, ವಿಧಿ
ಮುಹೂರ್ತ, ವೇದ ಮುಹೂರ್ತಗಳಲ್ಲಿ ಮಹೋದಯ ಪುಣ್ಯಸ್ನಾನ ನಡೆಯಲಿದೆ. ರಾತ್ರಿ 7ಕ್ಕೆ ವಾರಾ 
ಣಸಿ ಮಾದರಿಯಲ್ಲಿ ಸಂಗಮ ಸ್ಥಳದಲ್ಲಿ ಸಾರ್ವಜನಿಕ ಗಂಗಾಪೂಜೆ ಮತ್ತು ದೀಪಾರತಿ ಜರುಗಲಿದೆ.
ಜಿಟಿಡಿ ಕಾರ್ಯಕ್ರಮ ಉದ್ಘಾಟನೆ: 17ರಂದು ಬೆಳಗ್ಗೆ 8.30ಕ್ಕೆ ಅಗಸೆöàಶ್ವರ ಸ್ವಾಮಿ ಸನ್ನಿಧಿಯಲ್ಲಿ ಅನುಜ್ಞಾ ಕಾರ್ಯಕ್ರಮ, ಅಂಕುರಾರ್ಪಣೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ವಿಧಾನಸಭೆ ವಿರೋಧಪಕ್ಷದ ನಾಯಕ ಬಿ.ಎಸ್‌.ಯಡಿಯೂರಪ್ಪ ಭಾಗವಹಿಸಲಿದ್ದಾರೆ.

ಸಿಎಂ ಭಾಗಿ: 18ರಂದು ಬೆಳಗ್ಗೆ 11ಗಂಟೆಗೆ ನಡೆಯುವ ಧಾರ್ಮಿಕ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಲಿದ್ದಾರೆ. 19ರಂದು ಮಧ್ಯಾಹ್ನ 12ಗಂಟೆಗೆ ನಡೆಯುವ ಧರ್ಮಸಭೆಯನ್ನು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಉದ್ಘಾಟಿಸಲಿದ್ದಾರೆ.

Advertisement

ಬಟ್ಟೆ ಬದಲಿಸುವ ಕೋಣೆ,ಈಜುಗಾರರ ನಿಯೋಜನೆ
ಕುಂಭಮೇಳಕ್ಕೆ ಬರುವ ಮಹಿಳೆಯರು ಪುಣ್ಯಸ್ನಾನ ಮಾಡಿದ ನಂತರ ಬಟ್ಟೆ ಬದಲಿಸಲು ನದಿಯ ದಂಡೆ, ಮಜ್ಜನ ಮಾಡುವ ಜಾಗದಲ್ಲಿ 250ಕ್ಕೂ ಹೆಚ್ಚು ತಾತ್ಕಾಲಿಕ ಡ್ರೆಸ್ಸಿಂಗ್‌ ಕೋಣೆಗಳನ್ನು ನಿರ್ಮಿಸಲಾಗಿದೆ. ಕುಂಭಮೇಳದಲ್ಲಿ ಪುಣ್ಯಸ್ನಾನ ಮಾಡಲು ನದಿಗೆ ಇಳಿಯುವ ಭಕ್ತರಿಗೆ ತೊಂದರೆಯಾದಲ್ಲಿ ಕೂಡಲೇ ರಕ್ಷಿಸಲು ನೂರಾರು ನುರಿತ ಈಜುಪಟುಗಳನ್ನು ನಿಯೋಜಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next