ಪುಣೆ: ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಮೊಹೊಲ್ ತೆಹ್ಸಿಲ್‌ಗೆ ಸೇರಿದ ಕೃಷಿಕ ಅನಿಲ್ ಪಾಟೀಲ್ ದೇಶಾದ್ಯಂತ ಸುದ್ದಿಯಾಗಿದ್ದಾರೆ.
ಇದಕ್ಕೆ ಕಾರಣ ಮಾತ್ರ ವಿಚಿತ್ರ. ಯಾವುದೇ ಬೆಳೆಗಳಿಗೆ ನಿಗದಿತ ಬೆಲೆಯಿಲ್ಲ, ರೈತರು ಭಾರೀ ನಷ್ಟದಲ್ಲಿದ್ದಾರೆ. ಮಾದಕ ದ್ರವ್ಯ ಗಾಂಜಾ ಬೆಳೆಗೆ ಉತ್ತಮ ಬೆಲೆಯಿದೆ, ಅದನ್ನು ಬೆಳೆಯಲು ಅನುಮತಿ ಕೊಡಿ ಎಂದು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.
ಅಷ್ಟು ಮಾತ್ರವಲ್ಲ, ಅನುಮತಿ ನೀಡಲು ಸೆ.15ರವರೆಗೆ ಸಮಯ ಕೊಡುತ್ತೇನೆ, ಕೊಡಲಿಲ್ಲವಾದರೆ ಸೆ.16ರಿಂದ ಗಾಂಜಾ ಕೃಷಿ ಆರಂಭಿಸುತ್ತೇನೆ. ಮುಂದಿನ ಘಟನೆಗಳಿಗೆ ನಾನು ಹೊಣೆಗಾರನಲ್ಲ ಎಂದೂ ಹೇಳಿದ್ದಾರೆ! ಈ ಅರ್ಜಿಯನ್ನು ಜಿಲ್ಲಾಡಳಿತ ಪೊಲೀಸರಿಗೆ ತಲುಪಿಸಿದೆ.
ಇದನ್ನೂ ಓದಿ:ಗಂಡು ಮಗುವಿಗೆ ಜನ್ಮ ನೀಡಿದ ಟಿಎಂಸಿ ಸಂಸದೆ, ನಟಿ ನುಸ್ರತ್ ಜಹಾನ್
ಪೊಲೀಸರು ಈ ಪ್ರಕರಣವನ್ನು ಜನಪ್ರಿಯತೆಗಾಗಿ ಮಾಡಿದ ನಾಟಕ ಎಂದು ಬಣ್ಣಿಸಿದ್ದಾರೆ. ಭಾರತದಲ್ಲಿ ಗಾಂಜಾ ಬೆಳೆಯುವುದಕ್ಕೆ ನಿಷೇಧವಿದೆ.