ಮಂಗಳೂರು: ಮಾದಕ ವಸ್ತು ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಯುವಕರನ್ನು ಮಂಗಳೂರು ಉತ್ತರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಮೂಲತಃ ಬೀದರ್ನವನಾಗಿದ್ದು ಪ್ರಸ್ತುತ ಮೂಡುಬಿದಿರೆಯ ಅಪಾರ್ಟ್ಮೆಂಟ್ನಲ್ಲಿ ವಾಸವಿದ್ದ ಪ್ರಜ್ವಲ್ ಫಿನಾಯಸ್(28) ಮತ್ತು ಬಂಟ್ವಾಳದ ಪದ್ಮಸ್ಮಿತ್ ಅಧಿಕಾರಿ (28) ಬಂಧಿತ ಆರೋಪಿಗಳು.
ನ.7ರಂದು ಸಂಜೆ ನಗರದ ಬಂದರು ಉತ್ತರ ದಕ್ಕೆಯ ಬಳಿ ದ್ವಿಚಕ್ರ ವಾಹನದಲ್ಲಿ ಬಂದು ಗಾಂಜಾ ಮಾರಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದು ಅವರ ವಶದಲ್ಲಿದ್ದ ಗಾಂಜಾ, ಮೊಬೈಲ್ ಫೋನ್, ದ್ವಿಚಕ್ರವಾಹನ ಸಹಿತ ಅಂದಾಜು 25,000 ರೂ. ಮೌಲ್ಯದ ಸೊತ್ತುಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.
ಗಾಂಜಾ ಸೇವಿಸಿ ಸಾರ್ವಜನಿಕರಿಗೆ ತೊಂದರೆ: ಯುವಕನ ಬಂಧನ
ಮಂಗಳೂರು: ನಗರದ ಕಡೇಕಾರ್ ನೇತ್ರಾವತಿ ನದಿಯ ಸೇತುವೆಯ ಬಳಿ ಗಾಂಜಾ ಸೇವನೆ ಮಾಡಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದ ಕೀರ್ತನ್ನ್ನು ಗುರುವಾರದಂದು ಕಂಕನಾಡಿ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.