Advertisement

ಟಿಪ್ಪು ಹೆಸರಲ್ಲಿ ಆರೊಪ-ಪ್ರತ್ಯಾರೋಪ

06:00 AM Nov 11, 2018 | Team Udayavani |

ಬೆಂಗಳೂರು: ಬಿಗಿ ಪೊಲೀಸ್‌ ಭದ್ರತೆ ನಡುವೆ ಶನಿವಾರ ನಡೆದ ಟಿಪ್ಪು ಜಯಂತಿ ಆಚರಣೆ ರಾಜಕೀಯ ನಾಯಕರ ಟೀಕೆ-ಪ್ರತಿ ಟೀಕೆಗಳಿಗೆ ವೇದಿಕೆಯಾಯಿತು. ಈಶ್ವರಪ್ಪ, ಸಿ.ಟಿ.ರವಿ, ಪ್ರಹ್ಲಾದ್‌ ಜೋಶಿ ಸೇರಿದಂತೆ ಬಿಜೆಪಿ ನಾಯಕರು ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್‌ ನಾಯಕರ ವಿರುದ್ಧ ಟೀಕಾಪ್ರಹಾರ ನಡೆಸಿದರೆ, ಇದಕ್ಕೆ ಪ್ರತಿಯಾಗಿ ಸಿದ್ದರಾಮಯ್ಯಯಾದಿಯಾಗಿ ಕಾಂಗ್ರೆಸ್‌ ನಾಯಕರು ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದರು.

Advertisement

ಸಿದ್ದರಾಮಯ್ಯ ಒಬ್ಬ ಮತಾಂಧ: ಈಶ್ವರಪ್ಪ
ಬಾಗಲಕೋಟೆ:
ಮಾಜಿ ಸಿಎಂ ಸಿದ್ದರಾಮಯ್ಯ ಓರ್ವ ಮತಾಂಧ ಎಂಬುದರಲ್ಲಿ ಎರಡು ಮಾತಿಲ್ಲ. ಈ ಕುರಿತು ಸಂಸದ ನಳಿನ ಕುಮಾರ ಕಟೀಲ್‌ ಹೇಳಿಕೆ ಸೂಕ್ತವಾಗಿದೆ ಎಂದು ಬಿಜೆಪಿ ನಾಯಕ ಕೆ.ಎಸ್‌.ಈಶ್ವರಪ್ಪ ಟೀಕಾಪ್ರಹಾರ ನಡೆಸಿದರು.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಅವರು ಸಿಎಂ ಆಗಿದ್ದಾಗ ಹಿಂದೂ ಕಾರ್ಯಕರ್ತರ ಕೊಲೆ ನಡೆದರೂ ಕ್ರಮ ಕೈಗೊಳ್ಳಲಿಲ್ಲ. ಅದಕ್ಕೆ ಅವರನ್ನು ಮತಾಂಧ ಎಂದಿರೋದು. ಹಿಂದೂ-ಮುಸ್ಲಿಂ ಸಂತೋಷವಾಗಿರಬೇಕು ಎಂಬ ಆಸಕ್ತಿ ಕಾಂಗ್ರೆಸ್‌ನವರಿಗೆ ಇಲ್ಲ. ಟಿಪ್ಪು ಜಯಂತಿ ಮಾಡಿ ಎಂದು ಯಾರೂ ಹೇಳಿರಲಿಲ್ಲ. ಧರ್ಮ, ಜಾತಿ ಒಡೆಯಬೇಕು. ಅದರಿಂದ ನನಗೆ ಲಾಭ ಸಿಗಬೇಕು ಎಂಬುದಷ್ಟೇ ಕಾಂಗ್ರೆಸ್‌ನ ಲೆಕ್ಕಾಚಾರ ಎಂದರು. ಮುಖ್ಯಮಂತ್ರಿ ಕುಮಾರಸ್ವಾಮಿ ಟಿಪ್ಪು ಜಯಂತಿ ಬದಲು, ಡಾ|ಅಬ್ದುಲ್‌ ಕಲಾಂ ಜಯಂತಿ ಆಚರಿಸುತ್ತೇವೆ ಎಂದು ಹೇಳಬೇಕು. ಆದರೆ, ಅಧಿಕಾರ ಕಳೆದುಕೊಳ್ಳುವ ಭಯದಿಂದ ಅವರು ಏನೂ ಮಾತನಾಡುತ್ತಿಲ್ಲ ಎಂದರು.

ಸಮ್ಮಿಶ್ರ ಸರ್ಕಾರ ಬೀಳುತ್ತದೆ ಎಂದು ನಾವು ಹೇಳುತ್ತಿಲ್ಲ. ಸ್ವತಃ ಕುಮಾರ ಸ್ವಾಮಿ ಅವರೇ ನಾನು ಎಷ್ಟು ದಿನ ಅಧಿಕಾರದಲ್ಲಿ ಇರುತ್ತೇನೋ ಗೊತ್ತಿಲ್ಲ ಎಂದು ಪದೇಪದೆ ಹೇಳುತ್ತಿದ್ದಾರೆ. ಹೀಗಾಗಿ, ವಿರೋಧ ಪಕ್ಷವಾಗಿ ನಾವು ಸರ್ಕಾರ ಉಳಿಯಲ್ಲ ಎಂದು ಹೇಳಿದ್ದೇವೆ.
– ಕೆ.ಎಸ್‌.ಈಶ್ವರಪ್ಪ  ಬಿಜೆಪಿ ನಾಯಕ

ಬಿಜೆಪಿಯವರೇ ಮತಾಂಧರು ನಾನಲ್ಲ: ಸಿದ್ದರಾಮಯ್ಯ
ಮೈಸೂರು:
ಬೇರೊಂದು ಧರ್ಮವನ್ನು ವಿರೋಧಿಸುವವರೇ ನಿಜವಾದ ಮತಾಂಧರಾಗಿದ್ದು, ನಾನು ಮತಾಂಧನಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

Advertisement

ನಗರದಲ್ಲಿ ಮಾತನಾಡಿದ ಅವರು, ಈಶ್ವರಪ್ಪ ಹೇಳಿಕೆಗೆ ತಿರುಗೇಟು ನೀಡಿದರು. ಸಿದ್ದರಾಮಯ್ಯ ಒಬ್ಬ ಮತಾಂಧ ಎನ್ನುತ್ತಾರೆ. ಆದರೆ, ಧರ್ಮ ಎಂದರೆ ಏನು? ದಯವೇ ಧರ್ಮದ ಮೂಲವಯ್ಯ ಅಂತ ಬಸವಣ್ಣನವರೇ ಹೇಳಿದ್ದಾರೆ. ನಾನು ಮತಾಂಧ ಅಲ್ಲ. ಇನ್ನೊಂದು ಧರ್ಮವನ್ನು ವಿರೋಧಿಸುವವರು ಮತಾಂಧರು ಎಂದರು. ಸಂಸದರಾದ ಪ್ರತಾಪ ಸಿಂಹ, ಅನಂತಕುಮಾರ್‌ ಹೆಗಡೆ, ನಳಿನ್‌ ಕುಮಾರ್‌ ಕಟಿಲ್‌ ಅವರಿಗೆ ತಮ್ಮ ಮಾತಿನ ಮೇಲೆ ಪ್ರಜ್ಞೆಯೇ ಇಲ್ಲ ಎಂದು ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದರು.

ಬಿಜೆಪಿಯವರಿಗೆ ಸಂವಿಧಾನದ ಬಗ್ಗೆ ಜ್ಞಾನವಿಲ್ಲ. ಹೀಗಾಗಿಯೇ ಮನುಷ್ಯ ವಿರೋಧಿ  ನಡೆ ಅನುಸರಿಸುತ್ತಿದ್ದಾರೆ. ಬಿಜೆಪಿಯವರು ಮನುಷ್ಯರನ್ನು ದ್ವೇಷಿಸುತ್ತಾರೆ. ಅವನ್ಯಾವನೋ ಅನಂತಕುಮಾರ್‌ ಹೆಗಡೆ ನಾವು ಬಂದಿರೋದೆ ಸಂವಿಧಾನ ಬದಲಾವಣೆ ಮಾಡೋಕೆ ಅಂತಾನೆ. ಇಂಥವರು ಸಂವಿಧಾನ ಓದಿಕೊಂಡಿಲ್ಲ.
– ಸಿದ್ದರಾಮಯ್ಯ, ಮಾಜಿ ಸಿಎಂ.

ಟೋಪಿ ಹಾಕಿ, ಕೈಯಲ್ಲಿ ಖಡ್ಗ ಹಿಡಿದವರಿಂದಲೇ ವಿರೋಧ
ಬೆಳಗಾವಿ:
ಚುನಾವಣೆ ವೇಳೆ ಮತ ಸೆಳೆಯಲು ತಲೆಗೆ ಟೋಪಿ,ಕೈಯಲ್ಲಿ ಖಡ್ಗ ಹಿಡಿದು ರಾಜಕಾರಣ ಮಾಡಿ ಪೋಸ್‌ ನೀಡಿದವರು ಈಗ ಟಿಪ್ಪು ಸುಲ್ತಾನ ಜಯಂತಿಯನ್ನು ವಿರೋಧಿಸುತ್ತಿದ್ದಾರೆ ಎಂದು ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಟಾಳಕರ ಬಿಜೆಪಿಯವರಿಗೆ ಟಾಂಗ್‌ ನೀಡಿದರು.

ನಗರದಲ್ಲಿ ಶನಿವಾರ ನಡೆದ ಟಿಪ್ಪು ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಂತಹ ಜಯಂತಿಗಳನ್ನು ಮಾಡುವಾಗ ಯಾರೂ ರಾಜಕಾರಣ ಮಾಡಬಾರದು. ಬ್ರಿಟಿಷರು ಶೃಂಗೇರಿ ಮಠವನ್ನು ಆಕ್ರಮಿಸಿದಾಗ ಟಿಪ್ಪು ಸುಲ್ತಾನ್‌ ಹೋರಾಟ ನಡೆಸಿ ಅದನ್ನು ರಕ್ಷಿಸಿದ. ಈಗಲೂ ನಿತ್ಯ ಟಿಪ್ಪು ಹೆಸರಿನಲ್ಲಿ ಪ್ರಾರ್ಥನೆ ನಡೆಯುತ್ತದೆ ಎಂದರು.

ಹೆಬ್ಟಾಳಕರ ಹೋದ್ರು-ಜಾರಕಿಹೊಳಿ ಬಂದ್ರು  ಟಿಪ್ಪು ಸುಲ್ತಾನ್‌ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಭಾಷಣ ಮಾಡಿ ಶಾಸಕಿ ಲಕ್ಷ್ಮೀ ಹೆಬ್ಟಾಳಕರ ಹೊರ ನಡೆದರು. ಬೇರೊಂದು ಕಾರ್ಯಕ್ರಮಕ್ಕೆ ಹೋಗಬೇಕಿದೆ ಎಂದು ಹೆಬ್ಟಾಳಕರ ಕಾರ್ಯಕ್ರಮವನ್ನು ಅರ್ಧಕ್ಕೆ
ಮೊಟಕುಗೊಳಿಸಿ ಹೊರ ನಡೆಯುತ್ತಿದ್ದಂತೆ, ಇತ್ತ ಶಾಸಕ ಜಾರಕಿಹೊಳಿ ವೇದಿಕೆಗೆ ಆಗಮಿಸಿದರು.

ಸಿಎಂಗೆ ಯತ್ನಾಳ ಅಭಿನಂದನೆ
ಕಲಬುರಗಿ:
ಸರ್ಕಾರ ಆಚರಿಸುವ ಟಿಪ್ಪು ಜಯಂತಿ ಕಾರ್ಯಕ್ರಮದಿಂದ ಸಿಎಂ ಕುಮಾರಸ್ವಾಮಿ ಅವರೇ ದೂರ ಉಳಿದು ಪರೋಕ್ಷವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ. ಆದ್ದರಿಂದ ವಿವಾದಿತ ಟಿಪ್ಪು ಜಯಂತಿ ಆಚರಣೆಯನ್ನು ಮುಂದಿನ ವರ್ಷದಿಂದ ಕೈ ಬಿಡಬೇಕೆಂದು ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಒತ್ತಾಯಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರಿ ಕಾರ್ಯಕ್ರಮದ ಯಾವುದೇ ಆಹ್ವಾನ ಪತ್ರಿಕೆಯಲ್ಲಿ ಮುಖ್ಯಮಂತ್ರಿ ಹೆಸರು ಮುದ್ರಿಸುವುದು ಶಿಷ್ಟಾಚಾರ. ಆದರೆ, ಮುಖ್ಯಮಂತ್ರಿ ಕುಮಾರಸ್ವಾಮಿ ಶಿಷ್ಟಾಚಾರಕ್ಕೂ ಆಹ್ವಾನ ಪತ್ರಿಕೆಯಲ್ಲಿ ತಮ್ಮ ಹೆಸರು ಹಾಕಿಸದಂತೆ ನೋಡಿಕೊಂಡು ಆರೋಗ್ಯದ ನೆಪವೊಡ್ಡಿ ಕಾರ್ಯಕ್ರಮದಿಂದಲೇ ದೂರ ಉಳಿದಿ¨ªಾರೆ. ಇದರಿಂದ ಮುಖ್ಯಮಂತ್ರಿಗೇ ಟಿಪ್ಪು ಜಯಂತಿ ಇಷ್ಟವಿಲ್ಲ ಎನ್ನುವುದು ಸ್ಪಷ್ಟವಾಗಿದೆ. ಪರೋಕ್ಷವಾಗಿ ಟಿಪ್ಪು ಜಯಂತಿಗೆ ವಿರೋಧ ವ್ಯಕ್ತಪಡಿಸಿದ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು. 

ಸಿಎಂ, ಡಿಸಿಎಂ ಸ್ಪಷ್ಟೀಕರಣ
ಬೆಂಗಳೂರು:
ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಗೈರು ಹಾಜರಾಗಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಟಿಪ್ಪು ಜಯಂತಿ ಶುಭಾಶಯ ಕೋರಿದ್ದಾರೆ. 

ಈ ಕುರಿತು ಹೇಳಿಕೆ ನೀಡಿರುವ ಅವರು, ಸರ್ಕಾರ ರಾಜ್ಯಾದ್ಯಂತ ಹಜರತ್‌ ಟಿಪ್ಪು ಸುಲ್ತಾನರ ಜಯಂತಿ ಆಚರಿಸುತ್ತಿದೆ. ಟಿಪ್ಪು ಸುಲ್ತಾನರ ಆಡಳಿತ ಸುಧಾರಣಾ ಕ್ರಮಗಳು, ಪ್ರಯೋಗಶೀಲತೆಯ ಗುಣಗಳು ಅನುಕರಣೀಯ. ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ. 

ವೈದ್ಯರ ಸಲಹೆ ಮೇರೆಗೆ ವಿಶ್ರಾಂತಿ ಪಡೆಯುತ್ತಿರುವುದರಿಂದ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ.ಮೂಢನಂಬಿಕೆಯ ವಿರೋಧಿಯಾದ ನಾನು ಅಧಿಕಾರ ಕಳೆದುಕೊಳ್ಳುವ ಭೀತಿಯಿಂದ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿಲ್ಲ ಎಂಬುದು ಸತ್ಯಕ್ಕೆ ದೂರ ಎಂದು ಹೇಳಿದ್ದಾರೆ.

ಮತ್ತೂಂದೆಡೆ ಟಪ್ಪು ಜಯಂತಿ ಆಚರಣೆಯಲ್ಲಿ ಪಾಳೊಳ್ಳದಿರುವುದಕ್ಕೆ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಸ್ಪಷ್ಟೀಕರಣ ನೀಡಿದ್ದು, ಕಾರಣಾಂತರಗಳಿಂದ ತಾವು ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿಲ್ಲ ಎಂದು ತಿಳಿಸಿದ್ದಾರೆ.

ಟಿಪ್ಪು ಕನ್ನಡಿಗನಲ್ಲದಿದ್ದರೆ ಎಚಿxಕೆ, ಸಿದ್ದು ಉರ್ದು ಮಾತಾಡ್ತಿದ್ರು’
ಬೆಳಗಾವಿ:
ಟಿಪ್ಪು ಸುಲ್ತಾನ ಕನ್ನಡಿಗನಲ್ಲದಿದ್ದರೆ ಖರ್ಗೆ, ಧರಂಸಿಂಗ್‌ ತರಹ ಮೈಸೂರು ಪ್ರಾಂತ್ಯದ ಮುಖ್ಯಮಂತ್ರಿ ಎಚ್‌.ಡಿ.
ಕುಮಾರಸ್ವಾಮಿ, ಸಿದ್ದರಾಮಯ್ಯ ಅವರೂ ಇಂದು ಉರ್ದು ಮಾತನಾಡಬೇಕಿತ್ತು ಎಂದು ಶಾಸಕ ಸತೀಶ ಜಾರಕಿಹೊಳಿ
ಮಾರ್ಮಿಕವಾಗಿ ಹೇಳಿದರು. 

ನಗರದಲ್ಲಿ ನಡೆದ ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಟಿಪ್ಪುನ ಕನ್ನಡ ಪ್ರೇಮ ಪ್ರಸ್ತಾಪಿಸಿದ ಅವರು,ಮೈಸೂರು ಪ್ರಾಂತ್ಯದ ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯಗೆ ಕನ್ನಡ ಬಿಟ್ಟರೆ ಬೇರೆ ಯಾವುದೇ ಭಾಷೆ ಬರುವುದಿಲ್ಲ. ಅಂದ ಹಾಗೆ ಇಲ್ಲಿ ಟಿಪ್ಪು ಉರ್ದು ಭಾಷೆಯನ್ನು ಯಾರ ಮೇಲೂ ಹೇರಿಲ್ಲ. ಟಿಪ್ಪು ಅಪ್ಪಟ ಕನ್ನಡಿಗ ಎಂಬುದಕ್ಕೆ ಇದಕ್ಕಿಂತ ಮತ್ತೆ ಯಾವ ದಾಖಲೆಗಳು ಬೇಕು ಎಂದು ಪ್ರಶ್ನಿಸಿದರು. ಈ ನಾಯಕರೇ ನಮಗೆ ಮೂಲ ದಾಖಲೆಗಳಾಗಿದ್ದಾರೆ ಎಂದರು. 17ನೇ ಶತಮಾನದಲ್ಲಿ ಶೃಂಗೇರಿ ಮಠದ ಮೇಲೆ ಮರಾಠಾ ಸೈನ್ಯ ದಾಳಿ ಮಾಡಿದಾಗ ರಕ್ಷಣೆ ನೀಡಿದವನು ಟಿಪ್ಪು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next