Advertisement
ಚಿಕ್ಕಮಗಳೂರಿನಲ್ಲಿ ಪ್ರತಿಭಟನೆಗೆ ಮುಂದಾದ ಶಾಸಕ ಸಿ.ಟಿ.ರವಿ ಸೇರಿ 123 ಮಂದಿ ವಿಶ್ವ ಹಿಂದೂ ಪರಿಷತ್, ಬಜರಂಗದಳ, ಬಿಜೆಪಿಯ ಮುಖಂಡರು ಹಾಗೂ ಕಾರ್ಯಕರ್ತರು, ಶಿವಮೊಗ್ಗದಲ್ಲಿ ನಿಷೇಧಾಜ್ಞೆ ಉಲ್ಲಂ ಸಿದ ಬಿಜೆಪಿ ಯುವಮೋರ್ಚಾ ಕಾರ್ಯಕರ್ತರನ್ನು ಬಂಧಿಸಿ, ಬಿಡುಗಡೆಗೊಳಿಸಲಾಯಿತು. ಸಾಗರದಲ್ಲಿ ಪ್ರತಿಭಟನಾನಿರತ 150, ಕಾರ್ಕಳದಲ್ಲಿ 40, ಕಲಬುರಗಿಯಲ್ಲಿ 30, ದಾವಣಗೆರೆಯಲ್ಲಿ 96 ಮಂದಿಯನ್ನು ಬಂಧಿಸಿ ಬಿಡುಗಡೆಗೊಳಿಸಲಾಗಿದೆ.
Related Articles
Advertisement
ಇದೇ ವೇಳೆ, ಗುಂಬಜ್‌ಗೆ ಅಭಿಮಾನಿಯೊಬ್ಬ ತನ್ನ ಬೈಕ್‌ಗೆ ಟಿಪ್ಪು ಧ್ವಜದಂತೆ ಬಣ್ಣ ಬಳಿದುಕೊಂಡು ಬಂದಾಗ, ಪೊಲೀಸರು ಬೈಕ್ ವಶಪಡಿಸಿಕೊಂಡರು. ಶಹಾಬಾದ್‌ನಲ್ಲಿ ಸಾರ್ವಜನಿಕವಾಗಿ ಟಿಪ್ಪು ಜಯಂತಿ ಆಚರಣೆಗೆ ಮುಂದಾದ ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಾರುತಿ ಮಾನ್ಪಡೆ ಸೇರಿದಂತೆ ಎಂಟು ಜನರನ್ನು ವಶಕ್ಕೆ ಪಡೆದು, ಚಿತ್ತಾಪುರ ತಹಶೀಲ್ದಾರ್ ಕಚೇರಿಯಲ್ಲಿ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.
ಟಿಪ್ಪು ಜಯಂತಿಗೆ ಬಿಜೆಪಿ ಶಾಸಕರ ಸಾಥ್!: ಟಿಪ್ಪು ಜಯಂತಿಗೆ ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿ ವಿರೋಧ ವ್ಯಕ್ತಪಡಿಸಿದರೆ, ಬಿಜೆಪಿ ಶಾಸಕ ಆನಂದಸಿಂಗ್ ಅವರು ಹೊಸಪೇಟೆಯಲ್ಲಿ ನಡೆದ ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಈ ವೇಳೆ ಮಾತ ನಾ ಡಿ, “ಮನುಷ್ಯ ಸತ್ತ ಮೇಲೆ ಉಳಿಯುವುದು ಪ್ರೀತಿ-ವಿಶ್ವಾಸ ಮಾತ್ರ. ಆತ ಇನ್ನೇನನ್ನೂ ಒಯ್ಯಲಾರ.
ಆ ಪ್ರೀತಿ, ವಿಶ್ವಾಸಕ್ಕಾಗಿ ನಾನು ಅನಾರೋಗ್ಯದ ಮಧ್ಯೆಯೂ ಜಯಂತಿ ಕಾರ್ಯಕ್ರಮಕ್ಕೆ ಆಗಮಿಸಿದ್ದೇನೆ’ ಎಂದರು. ಈ ಮಧ್ಯೆ, ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಹಿನ್ನೆಲೆಯಲ್ಲಿ ವಿಜಯನಗರ ಕ್ಷೇತ್ರದ ಬಿಜೆಪಿ ಶಾಸಕ ಆನಂದ್ ಸಿಂಗ್‌ಗೆ ಬಿಜೆಪಿ ಶಿಸ್ತು ಸಮಿತಿ ರಾಜ್ಯಾಧ್ಯಕ್ಷ ಎನ್. ಶಂಕರಪ್ಪ ಶೋಕಾಸ್ ನೋಟಿಸ್ ಜಾರಿಗೊಳಿಸಿ ಏಳು ದಿನಗಳೊಳಗೆ ಉತ್ತರಿಸುವಂತೆ ಸೂಚನೆ ನೀಡಿದ್ದಾರೆ.
ಇದೇ ವೇಳೆ, ಬಳ್ಳಾರಿಯಲ್ಲಿ ಕೌಲ್ ಬಜಾರ್ ಪ್ರದೇಶದ ಬಿಜೆಪಿ ಅಲ್ಪಸಂಖ್ಯಾತರ ಘಟಕದ ಯುವ ಮೋರ್ಚಾ ಕಚೇರಿಯಲ್ಲಿ ಟಿಪ್ಪು ಜಯಂತಿ ಆಚರಿಸಲಾಯಿತು. ಸಂಸದ ಶ್ರೀರಾಮುಲು ಹಾಗೂ ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ಅವರ ಆಪ್ತರಾಗಿರುವ ಗೋವಿಂದರಾಜುಲು ತಮ್ಮ ಕಚೇರಿಯ ಮುಂದೆ ಟಿಪ್ಪು ಭಾವಚಿತ್ರ ಇಟ್ಟು ಹಾರ ಹಾಕಿ ಪೂಜೆ ಸಲ್ಲಿಸಿ ಜಯಂತಿ ಆಚರಿಸಿದರು. ಜಯಂತಿ ಆಚರಣೆಗೆ ಸಂಸದ ಶ್ರೀರಾಮುಲು ಅವರ ಅನುಮತಿ ಪಡೆದುಕೊಂಡಿದ್ದರು ಎಂದು ಮೂಲಗಳು ತಿಳಿಸಿವೆ.
ಬೆಂಗಳೂರಿನ ಬೊಮ್ಮನಹಳ್ಳಿ ವಿಧಾನಸಭೆ ಕ್ಷೇತ್ರದಲ್ಲಿ ಟಿಪ್ಪು ಜಯಂತಿ ಕುರಿತ ಪೋಸ್ಟರ್ ಹಾಗೂ ಬ್ಯಾನರ್‌ಗಳಲ್ಲಿ ಬಿಜೆಪಿ ಶಾಸಕ ಸತೀಶ್ ರೆಡ್ಡಿ ರಾರಾಜಿಸುತ್ತಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ಬಿಜೆಪಿ ನಾಯಕರಿಗೆ ಮುಜುಗರ ಉಂಟು ಮಾಡಿತ್ತು. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸತೀಶ್‌ರೆಡ್ಡಿ, ತಮಗೂ, ಆ ಬ್ಯಾನರ್‌ಗಳಿಗೂ ಸಂಬಂಧವಿಲ್ಲ. ಯಾರೋ ಕಾರ್ಯಕರ್ತರು ಹಾಕಿರಬಹುದು. ಅದಕ್ಕೆ ತಮ್ಮ ಅನುಮತಿ ಪಡೆದಿರಲಿಲ್ಲ ಎಂದು ಸ್ಪಷ್ಟನೆ ನೀಡಿದರು.
ಟಿಪ್ಪು ಹೆಸರು ಇಟ್ಟುಕೊಂಡು ಮತಬ್ಯಾಂಕ್ ರಾಜಕೀಯ ಮಾಡಲು ಕಾಂಗ್ರೆಸ್ ಮುಂದಾಗಿದೆ. ರಾಜ್ಯದಲ್ಲಿ ನಿಷೇಧಾಜ್ಞೆ ಜಾರಿ ಮಾಡಿ ಟಿಪ್ಪುಗೆ ಅಗೌರವ ಸೂಚಿಸಿದೆ.-ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಟಿಪ್ಪು ಸುಲ್ತಾನ್ ಬಗ್ಗೆ ಗೌರವ ಇದೆ. ಆದರೆ, ಟಿಪ್ಪು ಜಯಂತಿ ಬಗ್ಗೆ ಇಷ್ಟೊಂದು ಗೊಂದಲ ಬೇಕಿರಲಿಲ್ಲ. ಪರ-ವಿರೋಧವೂ ಅನಗತ್ಯ. ನಾವು 25 ವರ್ಷಗಳಿಂದ ಟಿಪ್ಪು ಜಯಂತಿ ಆಚರಿಸುತ್ತಿದ್ದೇವೆ. ಅಧಿಕಾರದಲ್ಲಿದ್ದಾಗಲೂ ಆಚರಿಸಿದ್ದೇವೆ, ಇಲ್ಲದಾಗಲೂ ಆಚರಿಸಿದ್ದೇವೆ. ಮುಂದೆ ನಮ್ಮದೇ ಸರ್ಕಾರ ಬರಲಿದೆ. ಆದರೂ ಸರ್ಕಾರದಿಂದ ಟಿಪ್ಪು ಜಯಂತಿ ಆಚರಿಸುವ ಅಗತ್ಯವಿಲ್ಲ. ಏಕೆಂದರೆ ನಮ್ಮ ಪಕ್ಷ ನಿರಂತರವಾಗಿ ಆಚರಿಸುತ್ತಿದೆ. ಟಿಪ್ಪು ಸುಲ್ತಾನ್ ಬಗ್ಗೆ ನಾನು ಹೆಚ್ಚು ತಿಳಿದುಕೊಂಡಿಲ್ಲ, ಅಧ್ಯಯನವನ್ನೂ ಮಾಡಿಲ್ಲ. ಆದರೆ, ಶಾಲಾ ದಿನಗಳಲ್ಲಿ ಟಿಪ್ಪು ಕುರಿತು ವಿಚಾರ ತಿಳಿದುಕೊಂಡಿದ್ದೆ.
-ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ ಜಗದೀಶ ಶೆಟ್ಟರ್ ಅವರೇ, ಈ ಹಿಂದೆ ಟೋಪಿ ಹಾಕಿಕೊಂಡು ಟಿಪ್ಪುವಿನ ಗುಣಗಾನ ಮಾಡಿದ್ದನ್ನು ಪ್ರಶ್ನಿಸಿದಾಗ “ನನಗೆ ಯಾರೋ ತಂದು ಟೋಪಿ ಹಾಕಿ ಮಾತಾಡಿಸಿದ್ರು’ ಎಂದು ಹೇಳಿಕೆ ಕೊಟ್ಟಿದ್ದೀರಿ. ನೀವೇನು ಸಣ್ಣ ಮಗುವೇ? ಯಾರೋ ಬಂದು ಟೋಪಿ ಹಾಕಿದ್ರು ಎನ್ನಲು ನಿಮಗೆ ನಾಚೀಕೆ ಆಗೋದಿಲ್ಲವೇ?.
-ರುದ್ರಪ್ಪ ಲಮಾಣಿ, ಮುಜರಾಯಿ ಸಚಿವ. ರಾಜ್ಯ ಸರ್ಕಾರ ವೋಟ್ ಬ್ಯಾಂಕ್‌ಗಾಗಿ ಟಿಪ್ಪು ಜಯಂತಿ ಆಚರಿಸುತ್ತಿದೆ. ಇದರ ಬಗ್ಗೆ ಹೋರಾಟ ಮುಂದುವರಿಯುತ್ತದೆ. ಇನ್ನು ಟಿಪ್ಪು ಜಯಂತಿಯಲ್ಲಿ ಪಾಲ್ಗೊಳ್ಳಬಾರದು ಎಂದು ಪಕ್ಷದ ತೀರ್ಮಾನವಾಗಿದೆ. ಪಕ್ಷದ ತೀರ್ಮಾನವನ್ನು ಮೀರಿ ಕೆಲ ಶಾಸಕರು ಪಾಲ್ಗೊಂಡಿದ್ದಾರೆ. ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು.
-ಜಗದೀಶ ಶೆಟ್ಟರ್ ಪ್ರತಿಪಕ್ಷದ ನಾಯಕ