Advertisement
ರೈಲನ್ನು ಚಲಾಯಿಸುವ ಲೋಕೋ ಪೈಲಟ್‌ಗಳಿಂದ ಟಿಕೆಟ್ ಚೆಕ್ ಮಾಡುವ ಟಿಸಿವರೆಗೆ ಎಲ್ಲರೂ ಮಹಿಳಾ ಸಿಬ್ಬಂದಿಯೇ ಆಗಿದ್ದರು. ಈಗಾಗಲೇ ಮೈಸೂರು ವಿಭಾಗ ಆರೋಗ್ಯ ತಪಾಸಣೆ, ಯೋಗ ಶಿಬಿರ, ಚಾರಣ, ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಗಳಂತಹ ವಿವಿಧ ಚಟುವಟಿಕೆಗಳನ್ನು ಆಯೋಜಿಸಿದೆ.
Related Articles
Advertisement
ಯಾರ್ಯಾರು ಯಾವ ಕಾರ್ಯನಿರ್ವಹಿಸಿದ್ರು?: ಗುರುವಾರ ಬೆಳಗ್ಗೆ ಬೆಂಗಳೂರಿಗೆ ಪ್ರಯಾಣಿಸಿದ ರೈಲನ್ನು ಲೋಕೋ ಪೈಲಟ್ ಆಗಿ ಬಲ್ಲ ಸಿವ ಪಾರ್ವತಿ, ಸಹಾಯಕ ಲೋಕೊ ಪೈಲಟ್ ಆಗಿ ರಂಗೋಲಿ ಪಾಟೀಲ್ ಚಾಲನೆ ಮಾಡಿದರು. ಗಾರ್ಡ್ ಆಗಿ ರಿಚಿತಮಣಿ ಶರ್ಮ, ಟಿಟಿಇ ಆಗಿ ಎಸ್.ಗಾಯತ್ರಿ, ಟಿಕೆಟ್ ಚೆಕ್ಕಿಂಗ್ ತಂಡದಲ್ಲಿ ಪುಷ್ಪಮ್ಮ, ಎಸ್.ಎನ್.ರಾಜೇಶ್ವರಿ, ಕೆ.ಎಂ.ಹನಿ, ಎನ್.ಎಸ್.ಅನಿತಾ, ಕೆ.ಟಿ.ಬೆಸ್ಟಿ ಕಾರ್ಯನಿರ್ವಹಿಸಿದರು. ಆರ್‌ಪಿಎಫ್ ಭದ್ರತಾ ಸಿಬ್ಬಂದಿಗಳಾದ ಗೀತಾ ಲತಾ ನಾಯ್ಕ, ದೇವಕಿ, ಭಾರತಿ, ರೇಣುಕಾ ಕರ್ತವ್ಯ ನಿರ್ವಹಿಸಿದರು.
ರೈಲ್ವೆ ನಿಲ್ದಾಣದಿಂದ ಹೊರಡುವ ಹಾಗೂ ಮೈಸೂರಿಗೆ ಬರುವ ರೈಲುಗಳ ತಾಂತ್ರಿಕತೆಯನ್ನು ಸೀನಿಯರ್ ಟೆಕ್ನಿಷಿಯನ್ ರಮ್ಯಾ ನೇತೃತ್ವದಲ್ಲಿ ಆರು ಮಂದಿ ಟೆಕ್ನಿಷಿಯನ್‌ಗಳು ತಪಾಸಣೆ ನಡೆಸುವ ಕಾರ್ಯದಲ್ಲಿ ತೊಡಗಿದ್ದರು. ರೈಲ್ವೆ ನಿಲ್ದಾಣದಲ್ಲಿ ಸೀನಿಯರ್ ಗಾರ್ಡ್ ಆಗಿ ನಾಗಮಣಿ ಪ್ರಸಾದ್, ಟಿ.ಪಿ.ಡಿಮು, ಪಾಯಿಂಟ್ ವುಮೆನ್ ಆಗಿ ಪಿ.ಪುಷ್ಪ ಕಾರ್ಯನಿರ್ವಹಿಸಿ ಪ್ರಯಾಣಿಕರು ಹಾಗೂ ಹಿರಿಯ ಅಧಿಕಾರಿಗಳಿಂದ ಮೆಚ್ಚುಗೆ ಗಳಿಸಿದರು.