Advertisement
ಹೆಮ್ಮಾಡಿಯಲ್ಲಿ ಒಂದರ ಹಿಂದೆ ಒಂದು ಲಾರಿಯಲ್ಲಿ ಬೃಹತ್ ಗಾತ್ರದ ಕಲ್ಲುಗಳನ್ನು ಮರವಂತೆಯ ಕಡಲ್ಕೊರೆತ ತಡೆಗಾಗಿ ಕೈಗೊಂಡಿರುವ ಬ್ರೇಕ್ ವಾಟರ್ ಕಾಮಗಾರಿಗೆ ಸಾಗಿಸುತ್ತಿದ್ದಾಗ ಈ ಅವಘಢ ಸಂಭವಿಸಿದೆ. ಈ ಕಲ್ಲು ಬಿದ್ದ ಟಿಪ್ಪರ್ ಲಾರಿಯ ಹಿಂಬಾಗಿಲು ಕೂಡ ಸರಿ ಇರಲಿಲ್ಲ. ಇದರಿಂದ ವಾಹನ ಸಂಚಾರಿಸುತ್ತಿದ್ದಾಗ ಏಕಾಏಕಿ ಚಾಲಕ ಬ್ರೇಕ್ ಹಾಕಿದ್ದು, ಈ ವೇಳೆ ಕಲ್ಲು ಉರುಳಿ ಕೆಳಕ್ಕೆ ಬಿದ್ದಿದೆ.
Related Articles
ಕುಂದಾಪುರ – ಬೈಂದೂರು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಯಾವುದೇ ರಸ್ತೆ ಸಂಚಾರ ಸುರಕ್ಷತಾ ಮಾರ್ಗಸೂಚಿಗಳನ್ನು ಅನುಸರಿಸದೇ, ನಿಯಮ ಬಾಹಿರವಾಗಿ ಕಲ್ಲುಗಳನ್ನು ಸಾಗಿಸುತ್ತಿದ್ದುದರಿಂದಲೇ ಈ ಇಂತಹ ಘಟನೆ ನಡೆಯುತ್ತಿದ್ದು, ಇಂತಹ ನಿರ್ಲಕ್ಷé ವಹಿಸುವ ಚಾಲಕರ ವಿರುದ್ಧ ಕಠಿನ ಕ್ರಮಕೈಗೊಳ್ಳಬೇಕು ಎಂದು ಹೆಮ್ಮಾಡಿಯ ವಾಹನ ಸವಾರರೊಬ್ಬರು ಆಗ್ರಹಿಸಿದ್ದಾರೆ.
Advertisement
ಪರಿಶೀಲನೆ ನಡೆಸಿ,ಕ್ರಮಈ ಬಗ್ಗೆ ಗಮನಕ್ಕೆ ಬಂದಿದೆ. ಮಾಹಿತಿ ಪಡೆದು, ಪರಿಶೀಲನೆ ನಡೆಸಿದ ಬಳಿಕ ಸೂಕ್ತ ಕ್ರಮಕೈಗೊಳ್ಳಲಾಗುವುದು. ಸರಿಯಾಗಿ ಮಾರ್ಗಸೂಚಿಗಳನ್ನು ಅನುಸರಿಸದೇ ಕಲ್ಲು ಸಾಗಾಟ ಮಾಡುವುದು ನಿಯಮ ಬಾಹಿರ. ಈ ಬಗ್ಗೆ ಸಂಚಾರ ಉಲ್ಲಂಘನೆಯಡಿ ಏನು ಕ್ರಮಗಳಿವೆಯೋ ಅದನ್ನು ತೆಗೆದುಕೊಳ್ಳಲಾಗುವುದು.
– ಪ್ರಮೀಳಾ, ಎಸ್‌ಐ, ಸಂಚಾರಿ ಠಾಣೆ ಕುಂದಾಪುರ