Advertisement

MAHE ಟೈಮ್ಸ್‌ ಉನ್ನತ ಶಿಕ್ಷಣ ಯುವ ವಿ.ವಿ. ಶ್ರೇಯಾಂಕ: ಮಾಹೆಗೆ 175ನೇ ಸ್ಥಾನ

11:39 PM May 21, 2024 | Team Udayavani |

ಮಣಿಪಾಲ: ಮಾಹೆ ವಿಶ್ವವಿದ್ಯಾನಿಲಯವು ಟೈಮ್ಸ್‌ ಉನ್ನತ ಶಿಕ್ಷಣ ಯುವ ವಿಶ್ವವಿದ್ಯಾನಿಲಯ ಶ್ರೇಯಾಂಕದಲ್ಲಿ 175ನೇ ಸ್ಥಾನ ಪಡೆದಿದ್ದು ಸಮಗ್ರ 43.6 ಅಂಕ ಗಳಿಸಿದೆ. ಕಳೆದ ವರ್ಷ 251-300ರ ಪಟ್ಟಿಯಲ್ಲಿ ಮಾಹೆ ವಿ.ವಿ. ಈ ಬಾರಿ 75 ಸ್ಥಾನಗಳಷ್ಟು ಏರಿಕೆ ಕಂಡಿದೆ.

Advertisement

ಟೈಮ್ಸ್‌ ಉನ್ನತ ಶಿಕ್ಷಣ ಯುವ ವಿ.ವಿ ಶ್ರೇಯಾಂಕವನ್ನು ಮೇ 14ರಂದು ಬಿಡುಗಡೆ ಮಾಡಿದ್ದು 50 ವರ್ಷಗಳಾಗಿರುವ ಅಂದರೆ 1975ರಿಂದ ಈ ನಡುವೆ ಸ್ಥಾಪನೆಗೊಂಡಿರುವ ಯುವ ವಿ.ವಿ.ಗಳನ್ನು ಈ ಶ್ರೇಣಿ ನಿರ್ಣಯಕ್ಕೆ ಆಯ್ದುಕೊಳ್ಳಲಾಗಿದೆ.

ಬೋಧನೆ, ಸಂಶೋಧನೆ. ಜ್ಞಾನ ಪ್ರಸರಣ, ಅಂತಾರಾಷ್ಟ್ರೀಯ ಸ್ಥಾನಮಾನದ ವಿಭಾಗಗಳಲ್ಲಿ ಆಯಾ ಸಂಸ್ಥೆಗಳ ಸಾಧನೆಯನ್ನು ಪರಿಗಣಿಸಿ 18 ಮಾನದಂಡಗಳನ್ನು ಬಳಸಿ ಶ್ರೇಯಾಂಕ ನೀಡಲಾಗಿದೆ. 673 ಉನ್ನತ ಸ್ಥಾನ ಪಡೆದಿರುವ ಮತ್ತು 499 ಪರಿಗಣಿತ ಪಟ್ಟಿಯಲ್ಲಿರುವ ವಿ.ವಿ.ಗಳು ಸೇರಿ 1,172 ವಿ.ವಿ.ಗಳು ಶ್ರೇಯಾಂಕದ ಯಾದಿಯಲ್ಲಿದ್ದವು. ಭಾರತದಿಂದ 55 ಉನ್ನತ ದರ್ಜೆಯ ವಿ.ವಿ.ಗಳು ಭಾಗವಹಿಸಿದ್ದವು.

ಮಾಹೆಯ ಕುಲಪತಿ ಲೆ| ಜ| ಡಾ| ಎಂ.ಡಿ. ವೆಂಕಟೇಶ್‌ ವಿ.ವಿ.ಯ ಸಾಧನೆಯ ಕುರಿತು ಹರ್ಷ ವ್ಯಕ್ತಪಡಿಸಿ, ಈ ಶ್ರೇಯಾಂಕವು ಭಾರತದ ಉನ್ನತ ಶಿಕ್ಷಣ ಮತ್ತು ಸಂಶೋಧನ ವಲಯದಲ್ಲಿ ಮಾಹೆಯ ಸ್ಥಾನಮಾನ ಹೆಚ್ಚಿಸಿದೆ. ಮುಂದೆಯೂ ಮಾಹೆಯು ಅತ್ಯುನ್ನತ ಬೋಧನಕ್ರಮ, ನವೀನ ಸಂಶೋಧನೆ, ಅತ್ಯುತ್ತಮ ಶೈಕ್ಷಣಿಕ ವಾತಾವರಣವನ್ನು ಒದಗಿಸಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next