Advertisement

“ಮರೆಗುಳಿತನಕ್ಕೆ ಸಕಾಲಿಕ ಚಿಕಿತ್ಸೆ’

07:00 AM Sep 22, 2018 | |

ಉಡುಪಿ: ದೊಡ್ಡಣಗುಡ್ಡೆಯ ಡಾ| ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ, ಮಾಹೆ ವಿವಿಯ ಆಕ್ಯುಪೇಶನಲ್‌ ತೆರಪಿ ವಿಭಾಗ ಮತ್ತು ಹಿರಿಯ ನಾಗರಿಕರ ವೇದಿಕೆಯ ಆಶ್ರಯದಲ್ಲಿ ವಿಶ್ವ ಮರೆ ಗುಳಿತನ ದಿನಾಚರಣೆ ಕಮಲಾ ಎ. ಬಾಳಿಗಾ ಸಭಾಂಗಣದಲ್ಲಿ ಶುಕ್ರವಾರ ನಡೆಯಿತು. 

Advertisement

ಕಾರ್ಯಕ್ರಮವನ್ನು ಹಿರಿಯ ನಾಗರಿಕರ ವೇದಿಕೆಯ ಅಧ್ಯಕ್ಷ ಸಿ. ಎಸ್‌. ರಾವ್‌ ಉದ್ಘಾಟಿಸಿ, ಮಾತನಾಡಿ, ಮರೆಗುಳಿತನದಿಂದ ರೋಗಿಗಿಂತ ಅಧಿಕ ಬಾಧೆ ಪಡುವವರು ರೋಗಿಯ ಸಂಬಂಧಿಕರು. ಏಕೆಂದರೆ ಅವರಿಗೆ ಆ ಸಮಸ್ಯೆಯ ಅರಿವು ಇರುವುದಿಲ್ಲ. ಮರೆಗುಳಿತನ ಸಮಸ್ಯೆಯ ಸ್ವಭಾವ ಕಂಡಾಗ ತತ್‌ಕ್ಷಣ ಅವರಿಗೆ ಚಿಕಿತ್ಸೆ ಕೊಡಿಸಿದಲ್ಲಿ ಅನುಕೂಲಕರ. ಮುಂದೆ ಸಮಸ್ಯೆಯ ಪ್ರಮಾಣವನ್ನು ಕಡಿಮೆ ಮಾಡಬಹುದು ಎಂದರು. 

ಅಧ್ಯಕ್ಷತೆ ವಹಿಸಿದ್ದ ಡಾ| ಪಿ. ವಿ ಭಂಡಾರಿ, ಮರೆಗುಳಿತನದ ಕುರಿತು ಜನರಿಗೆ ಅರಿವು ಮೂಡಿಸುವುದು ಅವಶ್ಯವಾಗಿದೆ. ಕೆಲವರು ಮರೆತವರಂತೆ ನಟಿಸುತ್ತಾರೆ ಎಂದೆಣಿಸುತ್ತದೆ. ಆದರೆ ಅದು ಅವರ ಸಮಸ್ಯೆಯಾಗಿರಬಹುದು. ಇದಕ್ಕೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡಬೇಕಾಗುತ್ತದೆ. ಕಾಯಿಲೆಯ ಲಕ್ಷಣಗಳು ಕಂಡು ಬಂದಾಗಲೇ ಚಿಕಿತ್ಸೆ ನೀಡಿದಲ್ಲಿ ನರಕೋಶಗಳು ಸಾಯುವುದನ್ನು ತಡೆಯಬಹುದು. 60 ವರ್ಷದ ಮೇಲೆ ಸಾಕಷ್ಟು ಲವಲವಿಕೆಯಿಂದ ಇರುವಂತೆ ನೋಡಿಕೊಳ್ಳಬೇಕು. ರಕ್ತದೊತ್ತಡ, ಸಕ್ಕರೆ ಕಾಯಿಲೆಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು ಎಂದರು. 

ಡಾ|ಪಿ.ವಿ. ಭಂಡಾರಿ, ವಿರೂಪಾಕ್ಷ ದೇವರಮನೆ ಮತ್ತು ಡಾ| ಕೆ.ಎಸ್‌. ಲತಾ ಅವರಿಂದ ಮಾಹಿತಿ ಕಾರ್ಯಕ್ರಮ ನಡೆಯಿತು. ಮನೋ ವೈದ್ಯ ಡಾ| ದೀಪಕ ಮಲ್ಯ, ಹಿರಿಯ ನಾಗರಿಕ ವೇದಿಕೆಯ ಉಪಾಧ್ಯಕ್ಷ ವಿಶ್ವನಾಥ ಹೆಗ್ಡೆ, ಕೆಎಂಸಿಯ ನೇತ್ರ ತಜ್ಞೆ ಲಾವಣ್ಯ ಜಿ. ರಾವ್‌ ಉಪಸ್ಥಿತರಿದ್ದರು. ಸೌಜನ್ಯ ಶೆಟ್ಟಿ ಪ್ರಾಸ್ತಾವಿಸಿದರು. ನಾಗರಾಜ್‌ ಸ್ವಾಗತಿಸಿ, ವೀಣಾ ಮತ್ತು ರಮಣಿ ನಿರೂಪಿಸಿ, ಮುಝಾಮಿ ವಂದಿಸಿದರು. 

ಮರೆಗುಳಿತನಕ್ಕೆ ಪ್ರಮುಖ ಕಾರಣಗಳು
ಮರೆಗುಳಿತನ ಎನ್ನುವುದು 50 ವರ್ಷದ ಬಳಿಕ ಸಾಮಾನ್ಯ. ಈ ಕಾಯಿಲೆಗೆ ಪ್ರಮುಖ ಕಾರಣ ಎಂದರೆ, ಪಾರ್ಶ್ವವಾಯು ಆದಾಗ, ಮೆದುಳಿಗೆ ಸೋಂಕು ತಗುಲಿದಾಗ, ಪಾರ್ಕಿನ್‌ಸನ್‌ ಕಾಯಿಲೆಯಿಂದ ಬರುವ ಸಾಧ್ಯತೆ ಇದೆ. ಇದರ ಪರಿಣಾಮ ಕೆಲವರು ಡಿಪ್ರಶನ್‌, ಗೊಂದಲಕ್ಕೊಳಗಾಗುವುದು, ನಡವಳಿಕೆಯಲ್ಲಿ ಬದಲಾವಣೆ ಕಂಡುಬರುವ ಸಮಸ್ಯೆಗಳು ಬರುತ್ತದೆ. ಈ ಕಾಯಿಲೆಗೆ ಸೂಕ್ತ ಚಿಕಿತ್ಸೆ ಇಲ್ಲದ್ದಿದ್ದರೂ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವುದರಿಂದ ಸಮಸ್ಯೆಯ ತೀವ್ರತೆಯನ್ನು ಕಡಿಮೆ ಮಾಡಬಹುದು.
– ಡಾ| ಭಂಡಾರಿ

Advertisement

ಕಾರ್ಯಕ್ರಮವನ್ನು ಸಿ. ಎಸ್‌. ರಾವ್‌ ಉದ್ಘಾಟಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next