Advertisement

ಸಮಯ ಬಳಕೆ ಸಮೀಕ್ಷೆ-2019; ಭವಿಷ್ಯದ ನೀತಿ ನಿರೂಪಣೆಗೆ ಸಹಕಾರಿ

12:27 AM Jan 07, 2021 | Team Udayavani |

2019ರಲ್ಲಿ ವರ್ಷವಿಡೀ ದೇಶಾದ್ಯಂತ ಮನೆಗಳ ಸಮೀಕ್ಷೆಯನ್ನು ಕೈಗೊಳ್ಳಲಾಗಿತ್ತು. ಈ ಸಮೀಕ್ಷೆಯಲ್ಲಿ ದೇಶಾದ್ಯಂತ ಒಟ್ಟು 1,38,799 (ಗ್ರಾಮೀಣ ಪ್ರದೇಶ: 82,897 ಮತ್ತು ನಗರ ಪ್ರದೇಶ: 55,902) ಮನೆಗಳಿಂದ ಒಟ್ಟು 4,47,250 ಆರು ವರ್ಷ ಮತ್ತು ಮೇಲ್ಪಟ್ಟ ವಯಸ್ಸಿನ ವ್ಯಕ್ತಿಗಳನ್ನು ಸಂದರ್ಶಿಸಿ ಮಾಹಿತಿಯನ್ನು ಕಲೆಹಾಕಲಾಗಿದೆ. ಇದು ಗ್ರಾಮೀಣ ಭಾಗದ 2,73,195 ಮತ್ತು ನಗರ ಪ್ರದೇಶದ 1,74,055 ವ್ಯಕ್ತಿಗಳನ್ನು ಒಳಗೊಂಡಿತ್ತು.

Advertisement

2020ರಲ್ಲಿ ಭಾರತ ಮಾತ್ರವೇ ಅಲ್ಲದೆ ಇಡೀ ಜಗತ್ತೇ ಸಂಕಷ್ಟಕ್ಕೆ ಸಿಲುಕಿಕೊಂಡು ನಲುಗಿ ಹೋದುದು ನಮ್ಮೆಲ್ಲರ ಸ್ಮತಿ ಪಟಲದಲ್ಲಿ ಇನ್ನು ಅಚ್ಚಳಿಯದೆ ಉಳಿದುಕೊಂಡಿದೆ. ಸಾಮಾಜಿಕ, ಆರ್ಥಿಕ, ಔದ್ಯೋಗಿಕ, ಆರೋಗ್ಯ ಸಹಿತ ಹಲವು ತೊಂದರೆಗಳನ್ನು ಅನುಭವಿಸಿದ್ದೇವೆ ಮತ್ತು ಅವುಗಳ ಛಾಯೆಯಲ್ಲಿಯೇ ಬದುಕು ರೂಪಿಸಿಕೊಳ್ಳಬೇಕಾದ ಸಂದಿಗ್ಧ ಪರಿಸ್ಥಿತಿಯಲ್ಲಿ ನಾವಿರು ವುದಂತೂ ಸತ್ಯ. ಜಗತ್ತಿನ ಯಾವುದೇ ದೇಶವಾಗಲಿ ಅದರ ಆರ್ಥಿಕ ಸ್ಥಿರತೆ ಮತ್ತು ಕಾರ್ಯತತ್ಪರದಿಂದಲೇ ಬಲಿಷ್ಟವಾಗಿ ಬೆಳೆಯಲು ಸಾಧ್ಯವಾಗುವುದರಿಂದ ಆ ದೇಶದ ಜನರು ಯಾವ ರೀತಿ ತಮ್ಮ ಸಮಯವನ್ನು ವಿನಿಯೋಗ ಮಾಡುತ್ತಾರೆ, ಅದರಿಂದಾಗುವ ಪ್ರಯೋಜನವಾದರೂ ಏನು? ಎಂಬೆಲ್ಲ ಸಂಗತಿಗಳನ್ನು ತಿಳಿದುಕೊಳ್ಳುವುದು ಅತೀ ಆವಶ್ಯಕವಾಗಿದೆ. ಈ ಮಾಹಿತಿಗಳನ್ನು ಆಧರಿಸಿ ಮುಂಬರುವ ದಿನಗಳಲ್ಲಿ ಯಾವ ರೀತಿ ದೇಶವನ್ನು ಕಟ್ಟಬೇಕು, ಆರ್ಥಿಕವಾಗಿ ಸದೃಢಗೊಳಿಸುವಲ್ಲಿ ಏನೆಲ್ಲ ಕ್ರಮಗಳನ್ನು ಕೈಗೊಳ್ಳಬೇಕು ಮತ್ತು ಬದಲಾವಣೆಗಳನ್ನು ತರಬೇಕು ಎನ್ನುವ ನೀತಿ ನಿರೂಪಣೆಗಳನ್ನು ಮಾಡಲು ಇದು ಅತ್ಯವಶ್ಯಕ ಪಾತ್ರವನ್ನು ನಿರ್ವಹಿಸುತ್ತದೆ. ಈ ನಿಟ್ಟಿನಲ್ಲಿ ಸಮಯ ಬಳಕೆ ಸಮೀಕ್ಷೆಗಳನ್ನು ಕೈಗೊಳ್ಳುವುದು ಹೆಚ್ಚು ಸೂಕ್ತ. ಈಗಾಗಲೇ ಈ ತರದ ಪ್ರಯತ್ನಗಳು ವಿಶ್ವದ ಹಲವಾರು ದೇಶಗಳಲ್ಲಿ ನಡೆಯುತ್ತಲಿವೆ. ಭಾರತದಲ್ಲಿಯೂ ಕೂಡ 2019ರಲ್ಲಿ ಇಂಥದ್ದೇ ಒಂದು ಸಮೀಕ್ಷೆಯನ್ನು ನಡೆಸಲಾ ಗಿದ್ದು ಅದರ ವರದಿಯು ಈಗ ಲಭ್ಯವಿದೆ.

ಸಮಯ ಬಳಕೆ ಸಮೀಕ್ಷೆ ಎಂದರೇನು?
ಇದರ ಹೆಸರೇ ಹೇಳುವಂತೆ ಈ ಸಮೀಕ್ಷೆಗಳಲ್ಲಿ ಜನರು ಯಾವ ರೀತಿಯ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವರು, ಯಾವ ಕೆಲಸಗಳಿಗೆ ಎಷ್ಟೆಷ್ಟು ಸಮಯವನ್ನು ವಿನಿಯೋಗ ಮಾಡಿಕೊಳ್ಳುತ್ತಿ¨ªಾರೆ ಎನ್ನುವ ಮಾಹಿತಿಗಳನ್ನು ಸಂಗ್ರಹಿಸಲಾಗುತ್ತದೆ. ಉದಾ: ಸಂಬಳ ಸಹಿತ ಕೆಲಸ, ಸಂಬಳ ರಹಿತ ಕೆಲಸ, ಶಿಶುಪಾಲನೆ, ಸ್ವಯಂ ಸೇವಾ ಕೆಲಸಗಳು ಮತ್ತು ಇನ್ನೊಬ್ಬರೊಡನೆ ಬೆರೆಯುವುದು ಮುಂತಾದವುಗಳು. ಕುಟುಂಬದಲ್ಲಿನ ವ್ಯಕ್ತಿಯು ಯಾವ ಕೆಲಸಗಳಲ್ಲಿ ತೊಡಗಿಸಿಕೊಂಡಿ¨ªಾನೆ ಎನ್ನುವುದರ ಬಗ್ಗೆ ತಿಳಿದುಕೊಳ್ಳಲು ಈ ತರಹದ ಸಮೀಕ್ಷೆಗಳು ಮೂಲವಾಗಿರುತ್ತವೆ.

ಭಾರತದಲ್ಲಿ ಇದೇ ಮೊದಲು
ದೇಶದಲ್ಲಿ ಇದೇ ಮೊದಲ ಬಾರಿಗೆ 2019ರಲ್ಲಿ ಇಂತಹದೊಂದು ಸಮೀಕ್ಷೆಯನ್ನು ಕೈಗೊಳ್ಳಲಾಗಿತ್ತು. ಇದರಲ್ಲಿನ ಅನೇಕ ಅಂಕಿಅಂಶಗಳನ್ನು ಹಿಂದಿನ ಬೇರೆ ಬೇರೆ ರೀತಿಯ ಸಮೀಕ್ಷೆಗಳಲ್ಲಿ ಕಲೆ ಹಾಕಿದ್ದರೂ ಸಂಪೂರ್ಣವಾಗಿ ಸಮಯ ಬಳಕೆಯ ಬಗೆಗೆ ಮಾಹಿತಿ ಗಳನ್ನು ಕಲೆಹಾಕಲು ಸಮೀಕ್ಷೆ ಮಾಡಲಾ ಗಿರುವುದು ಇದೇ ಮೊದಲು. ಆದರೆ ಜಗತ್ತಿನ ಅನೇಕ ರಾಷ್ಟ್ರಗಳಲ್ಲಿ ಈ ತರಹದ ಸಮೀಕ್ಷೆಗಳು ಕಾಲಕಾಲಕ್ಕೆ ನಡೆಯುತ್ತಾ ಬಂದಿವೆ. ಅಮೆರಿಕ, ಆಸ್ಟ್ರೇಲಿಯಾ, ಕೆನಡಾ, ಜರ್ಮನಿ, ಆಸ್ಟ್ರಿಯಾ ಮತ್ತು ಇಸ್ರೇಲ್‌ ಸಹಿತ ಹಲವು ದೇಶಗಳು ಈ ಸಮೀಕ್ಷೆಗಳನ್ನು ನಡೆಸಿವೆ ಮತ್ತು ನಡೆಸುತ್ತಲಿವೆ.

ಭಾರತದಲ್ಲಿ ಸಮಯ ಬಳಕೆ ಸಮೀಕ್ಷೆ
ಭಾರತ ಸರಕಾರದ ಅಂಕಿಅಂಶ ಮತ್ತು ಯೋಜ ನೆಗಳ ಅನುಷ್ಠಾನ ಸಚಿವಾಲಯದ ಅಡಿಯಲ್ಲಿರುವ ರಾಷ್ಟ್ರೀಯ ಸಂಖ್ಯಾಶಾಸ್ತ್ರೀಯ ಇಲಾಖೆಯು 2019ರ ಜನವರಿಯಲ್ಲಿ ದೇಶದಲ್ಲಿ ಮೊತ್ತ ಮೊದಲ ಬಾರಿಗೆ ಸಮಯ ಬಳಕೆ ಸಮೀಕ್ಷೆಯನ್ನು ಕೈಗೊಂಡಿದ್ದು, ಈಗ ಆ ಸಮೀಕ್ಷೆಯ ವರದಿಯನ್ನು ಬಿಡುಗಡೆಗೊಳಿಸಲಾಗಿದೆ. ಮೂಲತಃ ಈ ವರದಿಯಲ್ಲಿ ದೇಶದಲ್ಲಿರುವ ಜನರಿಂದ ನಿರ್ವಹಿಸಲ್ಪಡುತ್ತಿರುವ ಚಟುವಟಿಕೆಗಳು ಮತ್ತು ಆಯಾ ಚಟುವಟಿಕೆಗಳನ್ನು ನಿರ್ವಹಿಸಲು ಬೇಕಾಗು ವಂತಹ ಅವಧಿ ಮತ್ತು ಇನ್ನಿತರ ಸಂಬಂಧಿತ ವಿಷಯಗಳ ಬಗ್ಗೆ ಮನೆಯಲ್ಲಿರುವ ಆರು ವರ್ಷಗಳಿಗಿಂತ ಮೇಲ್ಪಟ್ಟ ವ್ಯಕ್ತಿಗಳಿಂದ ಸಂಗ್ರಹಿಸಿದ ಮಾಹಿತಿಯನ್ನು ವಿಶ್ಲೇಷಿಸಿ, ಫ‌ಲಿತಾಂಶಗಳನ್ನು ಪ್ರಸ್ತುತ ಪಡಿಸಲಾಗಿದೆ. ಒಂದು ವರ್ಷ ಕಾಲ ಸಮೀಕ್ಷೆಯನ್ನು ನಡೆಸಿ ಮಾಹಿತಿಗಳನ್ನು ಕಲೆ ಹಾಕಿ ವರದಿಯನ್ನು ಸಿದ್ಧಪಡಿಸಲಾಗಿದೆ.

Advertisement

ವರದಿಯ ರೂಪರೇಖೆ
ಒಟ್ಟು ಮೂರು ಅಧ್ಯಾಯಗಳು ಮತ್ತು ನಾಲ್ಕು ಅನುಬಂಧಗಳನ್ನೊಳಗೊಂಡಂತೆ 2,100 ಕ್ಕೂ ಹೆಚ್ಚಿನ ಪುಟಗಳಲ್ಲಿ ಸವಿಸ್ತಾರವಾಗಿ ವರದಿಯನ್ನು ಸಿದ್ಧಪಡಿ ಸಲಾಗಿದೆ. ಅಧ್ಯಾಯಗಳಲ್ಲಿ ಮೊದಲನೆಯದು ಪರಿಚಯಾತ್ಮಕ ಅಧ್ಯಾಯ, ಎರಡನೆಯದು ಪರಿಕಲ್ಪನೆಗಳು ಮತ್ತು ವ್ಯಾಖ್ಯಾನಗಳು ಹಾಗೂ ಮೂರನೆಯದು ಫ‌ಲಿತಾಂಶಗಳ ಸಾರಾಂಶ. ಮೂರನೇ ಅಧ್ಯಾಯವನ್ನು ಮತ್ತೆ ಹತ್ತು ಭಾಗಗ ಳಲ್ಲಿ ಪ್ರಸ್ತುತ ಪಡಿಸಿರುವುದು ಓದಲು ಮತ್ತು ಅಥೆìçಸಿಕೊಳ್ಳಲು ಅನುಕೂಲಕರವಾಗಿದೆ. ವರದಿಯ ಎಲ್ಲ ಭಾಗಗಳು ಸಮಾನ ಮಹತ್ವವನ್ನು ಪಡೆದಿದ್ದರೂ ಫ‌ಲಿತಾಂಶಗಳು ಅವುಗಳ ನೇರ ಪರಿಣಾಮಗಳಿಂದಾಗಿ ಮುಖ್ಯಪಾತ್ರವನ್ನು ವಹಿಸುತ್ತವೆ.

ವರದಿಯಲ್ಲಿನ ಕೆಲವು ಮುಖ್ಯಾಂಶಗಳು
ದೇಶದಲ್ಲಿ ಸರಾಸರಿ ಶೇ. 57.3 ಪುರುಷರು ಸಂಬಳ ಸಹಿತ ಮತ್ತು ಸಂಬಂಧಿಸಿದ ಕೆಲಸಗಳಲ್ಲಿ ತೊಡಗಿಸಿಕೊಂಡರೆ, ಕೇವಲ ಶೇ.18.4 ಮಹಿಳೆಯರು ಅಂತಹ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುತ್ತಾರೆ.

ಗ್ರಾಮೀಣ ಪ್ರದೇಶದ ಮಹಿಳೆಯರು ಸರಾಸರಿ ಶೇ.19.2 ಮತ್ತು ನಗರ ಪ್ರದೇಶದ ಮಹಿಳೆಯರು ಸರಾಸರಿ ಶೇ.16.7 ಸಂಬಳ ಸಹಿತ ಮತ್ತು ಸಂಬಂಧಿಸಿದ ಕೆಲಸಗಳಲ್ಲಿ ತೊಡಗಿಸಿಕೊಂಡಿರುವುದು ಕಂಡುಬರುತ್ತದೆ. ಅಂದರೆ ಗ್ರಾಮೀಣ ಪ್ರದೇಶದ ಮಹಿಳೆಯರು ಸಂಬಳ ಸಹಿತ ಮತ್ತು ಸಂಬಂಧಿಸಿದ ಕೆಲಸಗಳಲ್ಲಿ ತೊಡಗಿಸಿಕೊಳ್ಳುವಿಕೆಯು ನಗರ ಪ್ರದೇಶದ ಮಹಿಳೆಯರಿಗಿಂತ ಅಧಿಕವಾಗಿದೆ.

ಭಾರತೀಯ ಮಹಿಳೆಯು ತನ್ನ ಸಮಯದ ಸರಾಸರಿ ಶೇ.19.5ರಷ್ಟನ್ನು ಸಂಬಳ ರಹಿತ ಮನೆಕೆಲಸ ಅಥವಾ ಸಂಬಳ ರಹಿತ ಆರೈಕೆ ನೀಡುವ ಸೇವೆಗಳಲ್ಲಿ ತೊಡಗಿಸಿಕೊಂಡಿರುತ್ತಾಳೆ.

ಪುರುಷರು ತಮ್ಮ ಸಮಯದ ಸರಾಸರಿ ಶೇ.2.5 ರಷ್ಟನ್ನು ಮಾತ್ರವೇ ಈ ತರಹದ ಸಂಬಳ ರಹಿತ ಮನೆಕೆಲಸ ಅಥವಾ ಸಂಬಳ ರಹಿತ ಆರೈಕೆ ನೀಡುವ ಕೆಲಸಗಳಲ್ಲಿ ವಿನಿಯೋಗಿಸುತ್ತಾರೆ.

ಉದ್ಯೋಗ ಮತ್ತು ಕಲಿಕೆಯಿಂದ ಹಿಡಿದು ಸಾಮಾಜಿಕ ಕೆಲಸ, ವಿರಾಮ, ನಿದ್ರೆ ಮತ್ತು ಆಹಾರ ಸೇವನೆಯಂತಹ ಸ್ವ-ಆರೈಕೆ ಚಟುವಟಿಕೆಗಳವರೆಗಿನ ಪ್ರತಿಯೊಂದು ಇತರ ಚಟುವಟಿಕೆಗಳಲ್ಲಿ ಪುರುಷರು ಮಹಿಳೆಯರಿಗಿಂತ ತಮ್ಮ ದೈನಂದಿನ ಸಮಯದ ಹೆಚ್ಚಿನ ಪಾಲನ್ನು ಕಳೆಯುತ್ತಾರೆ.

ವಯಸ್ಸು ಮತ್ತು ಮನೆಕೆಲಸಗಳಿಗಾಗಿ ವಿನಿಯೋಗ ಮಾಡುವ ಸಮಯದಲ್ಲಿ ಪುರುಷರು ಮಾತ್ತು ಮಹಿಳೆಯರ ನಡುವೆ ವ್ಯತ್ಯಾಸಗಳು ಕಂಡುಬರುತ್ತವೆ. ಅದರಲ್ಲಿ ಮಹಿಳೆಯರು ವಿನಿಯೋಗಿಸುವ ಸಮಯ ಮತ್ತು ಅವರ ವಯಸ್ಸಿನ ನಡುವೆ ವಿಲೋಮ ಸಂಬಂಧವಿದೆ. ಆದರೆ ವಯಸ್ಸು ಮತ್ತು ಪುರುಷರು ಅದೇ ಕಾರ್ಯಗಳಿಗೆ ವಿನಿಯೋಗಿಸುವ ಸಮಯದ ನಡುವೆ ನೇರ ಸಂಬಂಧವಿದೆ ಎಂದು ತೋರುತ್ತದೆ.

60 ವರ್ಷಗಳ ಅನಂತರ ಮನೆಕೆಲಸಗಳಲ್ಲಿ ತೊಡಗಿಸಿಕೊಳ್ಳುವ ಮಹಿಳೆಯರ ಸಂಖ್ಯೆ ಕಡಿಮೆಯಾದರೆ ಪುರುಷರ ಸಂಖ್ಯೆ ಹೆಚ್ಚಾಗಿದೆ.

ಸಂಪೂರ್ಣ ವರದಿಯು ಸಚಿವಾಲಯದ ಜಾಲತಾ ಣದಲ್ಲಿ ಉಚಿತವಾಗಿ ಲಭ್ಯವಿರುತ್ತದೆ. ಆಸಕ್ತಿಯಳ್ಳವರು ಹೆಚ್ಚಿನ ಮಾಹಿತಿಗಾಗಿ ಈ ಜಾಲತಾಣದಿಂದ ಪಡೆದುಕೊಳ್ಳಬಹುದಾಗಿದೆ.

//mospi.nic.in/sites/default/files/publication_reports/Report_TUS_2019_0.pdf?download=1

ಡಾ| ಪ್ರವೀಣ ಹೂಗಾರ, ಮಣಿಪಾಲ

Advertisement

Udayavani is now on Telegram. Click here to join our channel and stay updated with the latest news.

Next