Advertisement

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

01:39 AM Apr 19, 2024 | Team Udayavani |

ಹೊಸದಿಲ್ಲಿ: 2024ನೇ ಸಾಲಿನ ಜಗತ್ತಿನ 100 ಪ್ರಭಾವಿಗಳ ಪಟ್ಟಿಯನ್ನು ಟೈಮ್‌ ಬಿಡುಗಡೆಗೊಳಿಸಿದ್ದು, ಈ ಪೈಕಿ ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಳ್ಲ, ಬಾಲಿವುಡ್‌ ನಟಿ ಆಲಿಯಾ ಭಟ್‌, ಕುಸ್ತಿ ಪಟು ಸಾಕ್ಷಿ ಮಲಿಕ್‌ ಸೇರಿದಂತೆ ಭಾರತ ಮೂಲದ 8 ಮಂದಿ ಇದ್ದಾರೆ.

Advertisement

ಪ್ರಭಾವಿ ಉದ್ಯಮಿಗಳು, ರಾಜಕಾರಣಿಗಳು, ಕಲಾವಿದರು, ಕ್ರೀಡಾಪಟು ಗಳು, ಸಿನೆಮಾ ನಟ-ನಟಿಯರು, ವಿಜ್ಞಾನಿಗಳು ಸೇರಿ ದಂತೆ ಜಗತ್ತಿನ ಹಲವು ಖ್ಯಾತನಾಮರು ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, ನಾಯಕರು, ಸಿನಿ ಕಲಾವಿ ದರು, ಕಲಾವಿದರು ಹಾಗೂ ಚಿಂತಕರು ಎಂಬ ನಾಲ್ಕು ವಿಭಾಗಗಳಲ್ಲಿ ಈ ನೂರು ಮಂದಿಯನ್ನು ಹೆಸರಿಸಲಾಗಿದೆ.

ಈ ಪೈಕಿ ಭಾರತೀಯ ಮೂಲದವ ರಾದ ವಿಶ್ವಬ್ಯಾಂಕ್‌ನ ಅಧ್ಯಕ್ಷ ಅಜಯ್‌ ಬಂಗಾ, ಬಾಲಿವುಡ್‌ ನಟಿ ಆಲಿಯಾ ಭಟ್‌, ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಳ್ಲ, ಕುಸ್ತಿ ಪಟು ಸಾಕ್ಷಿ ಮಲಿಕ್‌, ಭಾರತೀಯ ಮೂಲದ ಬ್ರಿಟಿಷ್‌ ನಿರೂಪಕ ದೇವ್‌ ಪಟೇಲ್‌, ಯಾಲೆ ವಿವಿಯ ಪ್ರೊಫೆಸರ್‌ ಹಾಗೂ ಶಿಕ್ಷಣ ತಜ್ಞರಾದ ಪ್ರಿಯಂವದ ನಟರಾಜನ್‌, ಬ್ರಿಟಿಷ್‌ ಉದ್ಯಮಿ ಅಸ್ಮಾ ಖಾನ್‌, ಅಮೆರಿಕ ಇಂಧನ ಸಚಿವಾಲಯ ಕಚೇರಿಯ ಅಧಿಕಾರಿಯಾಗಿರುವ ಜಿಗರ್‌ ಶಾ ಅವರಿಗೂ ಸ್ಥಾನ ದೊರೆತಿದೆ.

Advertisement

Udayavani is now on Telegram. Click here to join our channel and stay updated with the latest news.

Next