Advertisement

High Court: ತಿಮರೋಡಿ ದಂಪತಿ ಕೋರ್ಟ್‌ಗೆ ಹಾಜರು- ಮತ್ತೂಮ್ಮೆ ಹಾಜರಾಗಲು ಸೂಚನೆ

12:11 AM Jan 06, 2024 | Team Udayavani |

ಬೆಂಗಳೂರು: ನ್ಯಾಯಾಂಗ ನಿಂದನೆ ಆರೋಪ ಎದುರಿಸುತ್ತಿರುವ ಮಹೇಶ್‌ ಶೆಟ್ಟಿ ತಿಮರೋಡಿ ಹಾಗೂ ಪತ್ನಿ ಸರೋಜಾ ಅವರಿಗೆ ಮುಂದಿನ ಗುರುವಾರ ಮತ್ತೂಮ್ಮೆ ನ್ಯಾಯಾಲಯದ ಮುಂದೆ ಖುದ್ದು ಹಾಜರಾಗುವಂತೆ ಹೈಕೋರ್ಟ್‌ ನಿರ್ದೇಶನ ನೀಡಿದೆ.

Advertisement

ಈ ವಿಚಾರವಾಗಿ ಬಬ್ಬುಕಟ್ಟೆ ಉಜಿರೆ ನಿವಾಸಿ ಜಯಪ್ರಕಾಶ ಶೆಟ್ಟಿ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಯನ್ನು ಹಿರಿಯ ನ್ಯಾಯಮೂರ್ತಿ ಪಿ.ಎಸ್‌. ದಿನೇಶ್‌ ಕುಮಾರ್‌ ಹಾಗೂ ನ್ಯಾ| ಟಿ.ಜಿ. ಶಿವಶಂಕರೇ ಗೌಡ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ಶುಕ್ರವಾರ ತಿಮರೋಡಿ ದಂಪತಿ ಹಾಜರಾಗಿದ್ದರು. ಇಬ್ಬರ ಹಾಜರಾತಿಯನ್ನು ದಾಖಲಿಸಿಕೊಂಡ ನ್ಯಾಯಪೀಠ, ಸಮಯದ ಅಭಾವದ ಕಾರಣ, ವಿಚಾರಣೆ ನಡೆಸದೆ ಮುಂದಿನ ಗುರುವಾರ ಪುನಃ ಬರುವಂತೆ ಹೇಳಿ ವಿಚಾರಣೆಯನ್ನು ಮುಂದೂಡಿತು. ಅರ್ಜಿದಾರರ ಪರ ವಕೀಲ ಚಂದ್ರನಾಥ್‌ ಕೆ. ಅರಿಗ ವಾದ ಮಂಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next