Advertisement
ಸದಾಶಿವ ಐತಾಳ ಅವರು ಮಾತನಾಡಿ, ಕುಮಾರಸ್ವಾಮಿಗೆ ದೀಪಕ್ ರಾವ್ ಯಾರು, ತಿಲಕ್ ರಾಜ್ ಯಾರು ಎಂಬ ಬಗ್ಗೆ ಮಾಹಿತಿಯೇ ಇಲ್ಲ. ಮಾಧ್ಯಮ ಹಾಗೂ ಸ್ಥಳೀಯ ಶಾಸಕ ಮೊದಿನ್ ಬಾವಾ ಅವರ ಸಹೋದರರ ಕುಮ್ಮಕ್ಕಿನಿಂದ ಈ ಹೇಳಿಕೆ ನೀಡಿದ್ದಾರೆ. ಸ್ಥಳೀಯವಾಗಿ ಜನಮನ ಗೆದ್ದಿರುವ ತಿಲಕರಾಜ್ ಬಗ್ಗೆ ತಿಳಿದವರು ಯಾರೂ ಈ ಹೇಳಿಕೆ ನೀಡಲಾರರು. ಆಧಾರ ರಹಿತ ಹೇಳಿಕೆಯನ್ನು ನಾವೆಲ್ಲಾ ಖಂಡಿಸುತ್ತೇವೆ ಎಂದರು.
ಸ್ಥಾನಕ್ಕೆ ಬರಲು ಸಿದ್ಧನಿದ್ದೇನೆ. ನಮ್ಮದೇ ಪಕ್ಷದ ಕಾರ್ಯಕರ್ತ ಸಾವಿಗೀಡಾದ ನೋವು ನಮಗೆಲ್ಲರಿಗಿದೆ. ಈ ಸಂದರ್ಭ ಇಂತಹ ಆರೋಪ ಬಂದಿರುವುದರಿಂದ ಅರಗಿಸಿಕೊಳ್ಳುವ ಶಕ್ತಿ ನನಗಿಲ್ಲ. ಓಟಿಗಾಗಿ ಸಾವಿನ ರಾಜಕೀಯ ಮಾಡುವ ಹೀನ ಕೃತ್ಯವನ್ನು ಶಾಸಕರು ಬಿಡಬೇಕು ಎಂದರು. ಅಝೀಜ್ ಫ್ಯಾನ್ಸಿ, ಮಂಜುಕಾವಾ ಪಣಂಬೂರು, ಶರೀಫ್ ಎಂ.ಎಸ್., ಲೋಕೇಶ್ ಬೊಳ್ಳಾಜೆ, ಪ್ರಶಾಂತ್ ಮೂಡಾಯಿ ಕೋಡಿ, ಸುಂದರ ಶೆಟ್ಟಿ, ಮಹಾಬಲ ಶೆಟ್ಟಿ, ಯಶ್ ಪಾಲ್ ಸಾಲ್ಯಾನ್, ಶಶಿಕಲಾ ಶೆಟ್ಟಿ, ಸದಾನಂದ ಸನಿಲ್ ಉಪಸ್ಥಿತರಿದ್ದರು.