Advertisement

ಕೇಂದ್ರಕ್ಕೆ ಮಣಿದ ಟಿಕ್‌ಟಾಕ್

08:00 AM Jul 30, 2020 | mahesh |

ಹೊಸದಿಲ್ಲಿ: ಭಾರತ ಸರಕಾರದಿಂದ ನಿಷೇಧಕ್ಕೊಳ­ಗಾಗಿರುವ ಚೀನ ಮೂಲದ ಜನಪ್ರಿಯ ಕಿರು ವೀಡಿಯೊ ಆ್ಯಪ್‌ ಟಿಕ್‌ಟಾಕ್‌ ಪೂರ್ಣ ಮಂಡಿ­ಯೂರಿದೆ. ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿ­ವಾಲಯದ ವಿಚಾರಣೆಗೆ ಹಾಜರಾಗಿದ್ದ ಅದರ ಪ್ರತಿನಿಧಿಗಳು, ಭಾರತೀಯ ಬಳಕೆದಾರರ ಟಿಕ್‌ಟಾಕ್‌ ದತ್ತಾಂಶವನ್ನು ಭಾರತದಲ್ಲೇ ಸಂಗ್ರಹಿಸು­ವುದಾಗಿ ಹೇಳಿದೆ. ತಾನು ಯಾವುದೇ ಕಾರಣಕ್ಕೂ ದೇಶದ ಸಾರ್ವಭೌಮತೆಗೆ ಧಕ್ಕೆ ತರುವಂತೆ ನಡೆದು­ಕೊಂಡಿಲ್ಲ, ಮಾಹಿತಿಯನ್ನು ಹಂಚಿ­ಕೊಂಡಿಲ್ಲ ಎಂದು ಹೇಳಿದೆ. ಇಲ್ಲಿಯವರೆಗೆ ಟಿಕ್‌ಟಾಕ್‌ನ ಭಾರತೀಯ ಬಳಕೆದಾರರ ಮಾಹಿತಿ ಸಿಂಗಾಪುರ ಮತ್ತು ಅಮೆರಿಕದಲ್ಲಿ ಸಂಗ್ರಹವಾಗುತ್ತಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next