Advertisement

ದಣಿದ ಬಾಲಿವುಡ್‌ಗೆ “ಟೈಗರ್‌’ಗ್ಲೂಕೋಸ್‌!

06:45 AM Dec 29, 2017 | |

ಹೊಸದಿಲ್ಲಿ: ಪ್ರಸಕ್ತ ವರ್ಷದಲ್ಲಿ ಸತತ ಫ್ಲಾಪ್‌ ಹಾಗೂ ಸಾಧಾರಣ ಯಶಸ್ಸಿನ ಚಿತ್ರಗಳನ್ನು ನೀಡಿ ಪೆಚ್ಚಾಗಿದ್ದ ಬಾಲಿವುಡ್‌ಗೆ ವರ್ಷಾಂತ್ಯಕ್ಕೆ “ಟೈಗರ್‌’ ಗ್ಲೂಕೋಸ್‌ ಸಿಕ್ಕಿದೆ! ಹಾಗಂತ ನಾವಿಲ್ಲಿ ಟೈಗರ್‌ ಗ್ಲೂಕೋಸ್‌ ಬಿಸ್ಕೇಟ್‌ ಬಗ್ಗೆ ಮಾತನಾಡುತ್ತಿಲ್ಲ. ಕಳೆದ ವಾರ ಬಿಡುಗಡೆಯಾದ ಸಲ್ಮಾನ್‌ ಖಾನ್‌ ಅಭಿನಯದ “ಟೈಗರ್‌ ಜಿಂದಾ ಹೈ’ ಚಿತ್ರ ಬಸವಳಿದಿದ್ದ ಬಾಲಿವುಡ್‌ಗೆ ಹೊಸ ಚೈತನ್ಯ ತುಂಬಿದೆ. 

Advertisement

ಇದೇ ತಿಂಗಳ 21ರಂದು ಬಿಡುಗಡೆಯಾಗಿದ್ದ ಈ ಸಿನಿಮಾ, ಕೇವಲ ಐದು ದಿನಗಳಲ್ಲಿ ಹೊಸ ದಾಖಲೆಗಳನ್ನು ನಿರ್ಮಿಸಿದೆ. ಈ ಅವಧಿಯಲ್ಲಿ ಇದು ಭಾರತದಲ್ಲಿ 173.03 ಕೋಟಿ ರೂ., ಗಳಿಸಿದರೆ ವಿಶ್ವ ಮಟ್ಟದಲ್ಲಿ ಇದರ ಕಲೆಕ್ಷನ್‌ 225 ಕೋಟಿ ರೂ.!  ಹೀಗೆ 100 ಕೋಟಿ ರೂ. ಕ್ಲಬ್‌ ಸೇರಿದ ಸಲ್ಲು ಭಾಯ್‌ನ 13ನೇ ಚಿತ್ರ ಮಾತ್ರವಲ್ಲ, ಇಷ್ಟು ದೊಡ್ಡ ಕಲೆಕ್ಷನ್‌ ಮಾಡಿದ 2017ರ ಮೊದಲ ಹಿಂದಿ ಚಿತ್ರವಿದು! “ಗೋಲ್‌ ಮಾಲ್‌ ಎಗೇನ್‌’ ಚಿತ್ರ ಮಾತ್ರ ಇನ್ನೂರು ಕೋಟಿ ದಾಟಿ (205 ಕೋಟಿ ರೂ.) ಅತ್ಯಂತ ಯಶಸ್ವೀ ಚಿತ್ರವೆಂಬ ಹೆಗ್ಗಳಿಕೆ ಗಳಿಸಿತ್ತಷ್ಟೆ. “ಬಾಹುಬಲಿ 2′ ಚಿತ್ರ 114.93 ಕೋಟಿ ರೂ. ಗಳಿಸಿದ್ದರೂ ಅದು ಮೂಲ ಹಿಂದಿ ಚಿತ್ರವಲ್ಲ! 

Advertisement

Udayavani is now on Telegram. Click here to join our channel and stay updated with the latest news.

Next