Advertisement

Tiger Attack: ಹುಲಿ ದಾಳಿಯ ಅಟ್ಟಹಾಸ…ಉತ್ತರಾಖಂಡ್ ನ 2 ಜಿಲ್ಲೆಗಳಲ್ಲಿ ಕರ್ಫ್ಯೂ ಜಾರಿ!

02:59 PM Apr 17, 2023 | Team Udayavani |

ಡೆಹ್ರಾಡೂನ್(ಉತ್ತರಾಖಂಡ್): ಹುಲಿ ದಾಳಿಯ ಭೀತಿಯ ಹಿನ್ನೆಲೆಯಲ್ಲಿ ಪೌರಿ ಗರ್ವಾಲ್ ಜಿಲ್ಲಾಡಳಿತ ಜಿಲ್ಲೆಯ ರಿಖಾ ನಿಖಾಲ್ ಮತ್ತು ಧುಮಾಕೋಟ್ ತಹಸಿಲ್ ನ ಹತ್ತಾರು ಹಳ್ಳಿಗಳಲ್ಲಿ ಬೆಳಗ್ಗೆ 6ಗಂಟೆಯಿಂದ ರಾತ್ರಿ 7ಗಂಟೆವರೆಗೆ ಕರ್ಫ್ಯೂ ಜಾರಿಗೊಳಿಸಿದೆ.

Advertisement

ಇದನ್ನೂ ಓದಿ:Belthangady constituency; ರಾಜ್ಯದ ಅತೀ ದೊಡ್ಡ ವಿಧಾನಸಭಾ ಕ್ಷೇತ್ರವೆಂಬ ಹೆಗ್ಗಳಿಕೆ

ಏಪ್ರಿಲ್ 17 ಮತ್ತು 18ರಂದು ರಿಖಾನಿಖಾಲ್ ಮತ್ತು ಧುಮಾಕೋಟ್ ನ ಶಾಲೆಗಳು, ಅಂಗನವಾಡಿ ಕೇಂದ್ರಗಳಿಗೆ ರಜೆ ಘೋಷಿಸಿ ಪೌರಿ ಜಿಲ್ಲಾಧಿಕಾರಿ ಆಶೀಷ್ ಚೌಹಾಣ್ ಆದೇಶ ಜಾರಿಗೊಳಿಸಿದ್ದಾರೆ.

ಉತ್ತರಾಖಂಡ್ ನ ಪೌರಿ ಗರ್ವಾಲ್ ನ ನೈನಿದಂಡಾ ಪ್ರದೇಶದಲ್ಲಿ ಹುಲಿ ದಾಳಿಗೆ ವ್ಯಕ್ತಿಯೊಬ್ಬರು ಸಾವನ್ನಪ್ಪಿದ ನಂತರ ಈ ನಿಷೇಧಾಜ್ಞೆ ಹೊರಡಿಸಲಾಗಿದೆ. ಮೃತಗೊಂಡವರು ನಿವೃತ್ತ ಶಿಕ್ಷಕರಾಗಿದ್ದರು ಎಂದು ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next