ಢಾಕಾ: ಸುಮಾರು ಇಪ್ಪತ್ತು ವರ್ಷಗಳಿಂದ ಪೊಲೀಸರು ಕಣ್ಣು ತಪ್ಪಿಸಿ ಓಡಾಡುತ್ತಿದ್ದ ಮೋಸ್ಟ್ ವಾಂಟೆಡ್, ಕುಖ್ಯಾತ ಬೇಟೆಗಾರನನ್ನು ಬಾಂಗ್ಲಾದೇಶ್ ಪೊಲೀಸರು ಬಂಧಿಸಿದ್ದಾರೆ. ಈತ ಅಳಿವಿನಂಚಿನಲ್ಲಿರುವ 70 ಬಂಗಾಳ ಹುಲಿಗಳನ್ನು ಕೊಂದಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:50ಕ್ಕೂ ಹೆಚ್ಚು ಪಾಸಿಟಿವ್ ಪ್ರಕರಣಗಳಿರುವ ಗ್ರಾಮ 5ದಿನ ಲಾಕ್‌ಡೌನ್ DC G Jagadeesha
ಹಬೀಬ್ ತಾಲೂಕ್ದಾರ್ ಈತನನ್ನು ಟೈಗರ್ ಹಬೀಬ್ ಎಂಬ ಅಡ್ಡ ಹೆಸರಿನಿಂದಲೇ ಕುಖ್ಯಾತನಾಗಿದ್ದ. ದಟ್ಟ ಅರಣ್ಯ ಪ್ರದೇಶದ ಸಮೀಪ ವಾಸವಾಗಿದ್ದ ಹಬೀಬ್, ಅಧಿಕಾರಿಗಳು ದಾಳಿ ನಡೆಸಿದ ಸಂದರ್ಭದಲ್ಲಿ ಕಾಡಿನೊಳಗೆ ಪರಾರಿಯಾಗುತ್ತಿದ್ದ ಎಂದು ವರದಿ ವಿವರಿಸಿದೆ.
ಕೊನೆಗೂ ಟೈಗರ್ ಹಬೀಬ್ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಬಂಧಿಸಿ ಜೈಲಿಗೆ ಕಳುಹಿಸಿರುವುದಾಗಿ ಅಧಿಕಾರಿಗಳು ಎಎಫ್ ಪಿ ನ್ಯೂಸ್ ಏಜೆನ್ಸಿಗೆ ತಿಳಿಸಿದ್ದಾರೆ. ಭಾರತ ಮತ್ತು ಬಾಂಗ್ಲಾದೇಶವನ್ನು ಸುತ್ತುವರೆದಿರುವ ಸುಂದರ್ ಬನ್ಸ್ ಅರಣ್ಯ ಪ್ರದೇಶ ಹಬೀಬ್ ನ ಬೇಟೆಯಾಡುವ ಕೇಂದ್ರ ಸ್ಥಳವಾಗಿತ್ತು. ಇದು ಅತೀ ಹೆಚ್ಚು ಬಂಗಾಳ ಹುಲಿಗಳನ್ನು ಹೊಂದಿರುವ ಪ್ರದೇಶವಾಗಿತ್ತು.
ಹುಲಿ, ಸೇರಿದಂತೆ ಇತರ ಪ್ರಾಣಿಗಳ ಮೂಳೆ, ಚರ್ಮ, ಮಾಂಸವನ್ನು ಬ್ಲ್ಯಾಕ್ ಮಾರುಕಟ್ಟೆಯಲ್ಲಿ ವ್ಯಾಪಾರಿಗಳು ಖರೀದಿಸುತ್ತಿದ್ದರು. ಅವರು ಚೀನಾ ಮತ್ತು ಇತರ ದೇಶಗಳಿಗೆ ಮಾರಾಟ ಮಾಡುತ್ತಿದ್ದರು ಎಂದು ವರದಿ ಹೇಳಿದೆ. ನಾವು ಹಬೀಬ್ ಗೆ ಗೌರವ ಕೊಡುತ್ತಿದ್ದೇವು, ಅಲ್ಲದೇ ಆತನಿಗೆ ಹೆದರುತ್ತಿದ್ದೇವು ಎಂದು ಸ್ಥಳೀಯ ಜೇನು ಸಂಗ್ರಹಕಾರ ಅಬ್ದುಸ್ ಸಲಾಮ್ ತಿಳಿಸಿರುವುದಾಗಿ ವರದಿ ಹೇಳಿದೆ.