Advertisement

Nagarahole ಅರಣ್ಯದಂಚಿನ ಜಮೀನಿಗಳಲ್ಲಿ ಹುಲಿ ಹೆಜ್ಜೆ ಪತ್ತೆ

08:40 PM Jul 12, 2023 | Team Udayavani |

ಹುಣಸೂರು: ನಾಗರಹೊಳೆ ಉದ್ಯಾನವನದಂಚಿನ ಗ್ರಾಮಗಳಲ್ಲಿ ಮತ್ತೆ ಹುಲಿ ಹೆಜ್ಜೆ ಪತ್ತೆಯಾಗಿದ್ದು, ಗ್ರಾಮಸ್ಥರು ಭಯಭೀತರಾಗಿದ್ದು, ಹುಲಿಯನ್ನು ಸೆರೆ ಹಿಡಿಯುವಂತೆ ಆಗ್ರಹಿಸಿದ್ದಾರೆ.

Advertisement

ನಾಗರಹೊಳೆ ಅರಣ್ಯದಂಚಿನ ತಾಲೂಕಿನ ಹನಗೋಡು ಹೋಬಳಿಯ ಮುದಗನೂರು, ಕೊಳವಿಗೆ ಗ್ರಾಮದ ಮುಸುಕಿನ ಜೋಳದ ಹೊಲದಲ್ಲಿ ಮಂಗಳವಾರ ರಾತ್ರಿ ಹುಲಿ ಹೆಜ್ಜೆ ಗುರುತುಗಳು ಪತ್ತೆಯಾಗಿದ್ದು, ಬುಧವಾರ ದನಕರುಗಳನ್ನು ಅಟ್ಟುವ ವೇಳೆ ಹುಲಿ ಹೆಜ್ಜೆ ಪತ್ತೆಯಾಗಿದ್ದು, ಇದೀಗ ಜೋಳ ತೆನೆಕಚ್ಚಿದ್ದು, ಕಡ್ಡಿಗಳು ಆಳೆತ್ತರಕ್ಕೆ ಬೆಳೆದಿವೆ. ಹೀಗಾಗಿ ಹುಲಿ ಜೋಳದ ಹೊಲವನ್ನೇ ಆಶ್ರಯಿಸುವ ಭೀತಿಯಿದೆ. ಇದರಿಂದ ರೈತರು ಹೊಲಗಳತ್ತ ತೆರಳಲು, ದಕಕರುಗಳನ್ನು ಮೇಯಿಸಲು ಹೋಗದಂತಾಗಿದೆ.

ಈ ಭಾಗದಲ್ಲಿ ಕಳೆದ ಒಂದು ವಾರದಿಂದ ಜಮೀನು ಹಾಗೂ ಗ್ರಾಮದ ಅಕ್ಕಪಕ್ಕ ಹುಲಿ ಹೆಜ್ಜೆ ಪತ್ತೆಯಾಗಿದ್ದು, ಗ್ರಾಮದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಅರಣ್ಯದಂಚಿನ ಹೊಲಗಳಿಗೆ ರೈತರು ಹೋಗಿ ಬರಲು ಸಾಧ್ಯವಾಗುತ್ತಿಲ್ಲ. ಅರಣ್ಯ ಇಲಾಖೆ ಗಮನಕ್ಕೆ ತರಲಾಗಿದೆ. ಕಳೆದ ವಾರ ಸಮೀಪದ ಕೊಳವಿಗೆ ಹಾಡಿಯಲ್ಲಿ ಹುಲಿ ದಾಳಿಗೆ ಗಿರಿಜನ ಯುವಕನೊಬ್ಬ ಮೃತಪಟ್ಟಿದ್ದ ನ್ನು ಸ್ಮರಿಸಬಹುದು. ಇಲಾಖೆ ಕೊಂಬಿಅಗ್ ಕಾರ್ಯಾಚರಣೆ ನಡೆಸಿ ಹುಲಿ ಸೆರೆ ಹಿಡಿಯುವ ಮೂಲಕ ಜನರ ಆತಂಕ ದೂರಮಾಡುವಂತೆ ಮುದಗನೂರು ಮಹದೇವ ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next