Advertisement
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಲಿ ಯೋಜನೆ ಕುರಿತು ಆ ವ್ಯಾಪ್ತಿಗೆ ಸೇರಿದ ಪ್ರದೇಶದ ಜನರು ತೀವ್ರ ವಿರೋಧ ವ್ಯಕ್ತಪಡಿಸುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಅನುಮತಿ ಕೊಟ್ಟಿದ್ದರೂ ಅದನ್ನು ಜಾರಿಗೆತರಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು. ಕುದುರೆಮುಖ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯನ್ನು ಹುಲಿ ಯೋಜನೆಗೆ ವಿಸ್ತರಿಸುವಂತೆ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ (2012ರಲ್ಲಿ) ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆಗ ಅಧಿಕಾರದಲ್ಲಿದ್ದ ಯುಪಿಎ ಸರ್ಕಾರ ಯೋಜನೆಗೆ ಅನುಮತಿ ಕೊಟ್ಟಿರಲಿಲ್ಲ. ಆದರೆ, ಈಗಿನ ಎನ್‌ಡಿಎ ಸರ್ಕಾರ ಅನುಮತಿ ಕೊಟ್ಟಿದೆ. ಕೇಂದ್ರ ಸರ್ಕಾರ ಅನುಮತಿ ಕೊಟ್ಟಿದ್ದರೂ ಯೋಜನೆ ಜಾರಿಗೊಳಿಸುವ ಅಧಿಕಾರ ರಾಜ್ಯ ಸರ್ಕಾರದ್ದು. ಯೋಜನೆ ಜಾರಿಗೆ ಸ್ಥಳೀಯರ ವಿರೋಧವಿರುವುದರಿಂದ ಅದನ್ನು ಜಾರಿಗೆ ತರುವುದಿಲ್ಲವೆಂದು ಸ್ಪಷ್ಟಪಡಿಸಿ
ದರು. ಹಿಂದೆ ಯಾರೆಲ್ಲ ಹುಲಿ ಯೋಜನೆ ವಿರುದ್ಧ ಮಾತನಾಡಿದ್ದರೋ ಇಂದು ಅವರೆಲ್ಲ ಮೌನವಾಗಿದ್ದಾರೆಂದು ಪರೋಕ್ಷವಾಗಿ ಬಿಜೆಪಿಯವರನ್ನು ರಮಾನಾಥ ರೈ ಟೀಕಿಸಿದರು.