Advertisement

ನರಹಂತಕ ಹುಲಿಗೆ “ಶಾಕ್‌’

07:50 AM Oct 15, 2017 | Harsha Rao |

ನಾಗ್ಪುರ: ನಾಲ್ಕು ಮಂದಿಯನ್ನು ಹತ್ಯೆಗೈದಿದ್ದ ನರಹಂತಕ ಹುಲಿ ಮಹಾರಾಷ್ಟ್ರದ ವಾರ್ಧಾ ಜಿಲ್ಲೆಯಲ್ಲಿ ವಿದ್ಯುತ್‌ ಶಾಕ್‌ನಿಂದ ಸಾವನ್ನಪ್ಪಿದೆ. ಎರಡು ವರ್ಷದ ಈ ಹುಲಿ ಬ್ರಹ್ಮಪುರ ಅರಣ್ಯ ಪ್ರದೇಶದಲ್ಲಿತ್ತು. ಇಲ್ಲಿ ಇಬ್ಬರನ್ನು ಸಾಯಿಸಿದ್ದರಿಂದ, ಹಿಡಿದು ನಾಗ್ಪುರಕ್ಕೆ ತರಲಾಗಿತ್ತು. ಇಲ್ಲಿ ಹುಲಿಯನ್ನು ಪುನಶ್ಚೇತನ ಗೊಳಿಸಿ ಬೋರ್‌ ಅಭಯಾರಣ್ಯ ದಿಂದ ಬಿಡುಗಡೆ ಮಾಡಲಾಗಿತ್ತು. ಆದರೆ ತನ್ನ ನರಹಂತಕ ಮನಃಸ್ಥಿತಿಯನ್ನು ಬಿಡದ ಹುಲಿ, ಮೂರು ಜಿಲ್ಲೆಗಳನ್ನು ತಿರುಗಾಡಿ ಅಲ್ಲಿ ಇಬ್ಬರನ್ನು ಹತ್ಯೆಗೈದಿದೆ. ವಾರ್ಧಾ ಹಾಗೂ ಅಮರಾವತಿ ಜಿಲ್ಲೆಗಳಿಗೆ ತೆರಳಿ ಅಲ್ಲಿಂದ ಪುನಃ ಬೋರ್‌ ಅಭಯಾರಣ್ಯಕ್ಕೆ ವಾಪಸಾಗುವ ದಾರಿಯಲ್ಲಿ ವಿದ್ಯುತ್‌ ಬೇಲಿಗೆ ತಗುಲಿ ಹುಲಿ ಸಾವನ್ನಪ್ಪಿದೆ. ಈ ಹುಲಿಯನ್ನು ಬಿಡುಗಡೆ ಮಾಡಿದ ಅನಂತರ 78 ದಿನಗಳವರೆಗೆ ಟ್ರ್ಯಾಕ್‌ ಮಾಡಲು ಸುಮಾರು 2 ಕೋಟಿ ರೂ. ವೆಚ್ಚ ಮಾಡಲಾಗಿದೆ.

Advertisement

ಕಳೆದ ಆರು ತಿಂಗಳಲ್ಲಿ ಒಟ್ಟು ನಾಲ್ವರನ್ನು ಬಲಿತೆಗೆದುಕೊಂಡ ಈ ಹುಲಿಯನ್ನು ಗುಂಡಿಟ್ಟು ಸಾಯಿಸುವುದಕ್ಕೆ ಅಭಯಾರಣ್ಯದ ವಾರ್ಡನ್‌ ಆದೇಶಿಸಿದ್ದರು. ಇದರ ವಿರುದ್ಧ ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠದಲ್ಲಿ ದೂರು ಕೂಡ ದಾಖಲಿಸಲಾಗಿತ್ತು. ಭಗ ವಾನ್‌ ಟೇಕರ್‌ ಎಂಬವರಿಗೆ ಸೇರಿದ ಕೃಷಿ ಭೂಮಿಯಲ್ಲಿ ಹುಲಿಯ ಕಳೇಬರ ಕಂಡು ಬಂದಿದ್ದು, ಟೇಕರ್‌ನನ್ನು ಬಂಧಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next