Advertisement

ದೇಶದಲ್ಲಿ 99 ಹುಲಿ ಸಾವು ದಶಕದಲ್ಲೇ ಇದು ಅಧಿಕ

12:20 AM Oct 02, 2021 | Team Udayavani |

ಬರೇಲಿ: ಪ್ರಸಕ್ತ ವರ್ಷದ ಮೊದಲ ಒಂಬತ್ತು ತಿಂಗಳಲ್ಲಿ 99 ಹುಲಿಗಳು ಮರಣ ಹೊಂದಿದೆ. ರಾಷ್ಟ್ರೀಯ ಹುಲಿ ರಕ್ಷಣ ಪ್ರಾಧಿಕಾರದ ದಾಖಲೆಗಳಲ್ಲಿ ಈ ಅಂಶ ಉಲ್ಲೇಖವಾಗಿದೆ.

Advertisement

ಹತ್ತು ವರ್ಷಗಳಿಗೆ ಹೋಲಿಕೆ ಮಾಡಿದರೆ, ಸಂಖ್ಯೆ ಹೆಚ್ಚು. ಸೆ.30ರ ವರೆಗೆ ಅಪಘಾತ, ಬೇಟೆ ಹಾಗೂ ನೈಸರ್ಗಿಕವಾಗಿ 99 ಹುಲಿಗಳು ಅಸುನೀಗಿವೆ. ಏಳು ಹುಲಿಗಳು ಕಳ್ಳಬೇಟೆಗಾರರ ಕೈಗೆ ಸಿಕ್ಕಿ ಜೀವ ಕಳೆದುಕೊಂಡಿವೆ ಎಂದು ವರದಿಯಲ್ಲಿ ಅಭಿಪ್ರಾಯ ಪಡಲಾಗಿದೆ.

45 ಹುಲಿಗಳು ಕಾಯ್ದಿಟ್ಟ ಅರಣ್ಯ ಪ್ರದೇಶದ ವಲಯದಿಂದ ಹೊರಗೆ ಮೃತಪಟ್ಟಿವೆ.

ರಾಜ್ಯವಾರು ಲೆಕ್ಕಾಚಾರ ಹಾಕುವುದಿದ್ದರೆ, ಕರ್ನಾಟಕದಲ್ಲಿ 15, ಮಧ್ಯಪ್ರದೇಶದ 35, ಮಹಾರಾಷ್ಟ್ರದಲ್ಲಿ 20, ಹುಲಿಗಳು ಮರಣ ಹೊಂದಿವೆ. ಪ್ರಸಕ್ತ ವರ್ಷ ಉತ್ತರ ಪ್ರದೇಶದಲ್ಲಿ ಹುಲಿಗಳ ಮರಣ ಪ್ರಮಾಣ ಕೊಂಚ ಅಧಿಕವಾಗಿದೆ.

ಇದನ್ನೂ ಓದಿ:ಕೊಲೊಂಬೊ ಬಂದರಿನಲ್ಲಿ ಅದಾನಿ ಗ್ರೂಪ್‌ನ 5 ಸಾವಿರ ಕೋಟಿ ರೂ. ಹೂಡಿಕೆ

Advertisement

ಹುಲಿಗಳ ಸಂಖ್ಯೆ ಹೆಚ್ಚಾಗುತ್ತಿದ್ದರೂ, ಅವುಗಳಿಗೆ ವಾಸಿಸುವ ಪ್ರದೇಶದ ವ್ಯಾಪ್ತಿ ಕಡಿಮೆಯೇ ಇದೆ. ಮಾನವ ಮತ್ತು ಹುಲಿಗಳ ಸಂಘರ್ಷ, ಹುಲಿಗಳ ನಡುವೆಯೇ ಉಂಟಾಗುವ ಹೋರಾಟ ಆತಂಕಕ್ಕೆ ಕಾರಣವಾಗಿದೆ ಎನ್ನುತ್ತಾರೆ ಹುಲಿ ಸಂರಕ್ಷಣ ಕ್ಷೇತ್ರದಲ್ಲಿ ತೊಡಗಿಸಿ ಕೊಂಡಿರುವವರು. 2016ರಲ್ಲಿ ಅತ್ಯಧಿಕ ಎಂದರೆ 121 ಹುಲಿಗಳು, ಕಳೆದ ವರ್ಷ 106 ಸಾವಿನ ಪ್ರಕರಣಗಳು ದೃಢಪಟ್ಟಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next