ಮುಂಬಯಿ: ಸಲ್ಮಾನ್ ಖಾನ್ ಅವರ ʼಟೈಗರ್ -3ʼ ಭಾನುವಾರ (ನ.12 ರಂದು) ವಿಶ್ವದೆಲ್ಲೆಡೆ ರಿಲೀಸ್ ಆಗಿದೆ. ಮೊದಲ ದಿನವೇ ಸಿನಿಮಾಕ್ಕೆ ಭರ್ಜರಿ ಆರಂಭ ಸಿಕ್ಕಿದೆ.
ಸಲ್ಮಾನ್ ಖಾನ್ – ಕತ್ರಿನಾ ಕೈಫ್ ಹಾಗೂ ಇಮ್ರಾನ್ ಹಶ್ಮಿ ಮುಖ್ಯಭೂಮಿಕೆಯ ʼಟೈಗರ್-3ʼ ಸ್ಪೈ ಥ್ರಿಲ್ಲರ್ ಕಥಾಹಂದರವನ್ನೊಳಗೊಂಡಿದೆ. ʼಟೈಗರ್ʼ ಸರಣಿ ಮೂಲಕ ಸದಾ ಮೋಡಿ ಮಾಡುವ ಸಲ್ಲುಭಾಯಿ ಈ ಬಾರಿಯೂ ಅದೇ ನಿರೀಕ್ಷೆಯೊಂದಿಗೆ ʼಟೈಗರ್-3ʼ ಮೂಲಕ ಥಿಯೇಟರ್ ಗೆ ಎಂಟ್ರಿ ಕೊಟ್ಟಿದ್ದಾರೆ.
ರಾ ಏಜೆಂಟ್ ಆಗಿ ಸಲ್ಮಾನ್ ದೇಶವನ್ನು ಉಳಿಸುವ ಜೊತೆಗೆ ಈ ಬಾರಿ ಕುಟುಂಬವನ್ನೂ ರಕ್ಷಿಸುವ ಸವಾಲನು ಎದುರಿಸುತ್ತಾರೆ. ಸಲ್ಮಾನ್ – ಕತ್ರಿನಾ ಫೈಟ್ ಸೀನ್ ಗಳ ಜೊತೆ ಇಮ್ರಾನ್ ಅವರ ನೆಗೆಟಿವ್ ರೋಲ್ ಪ್ರೇಕ್ಷಕರ ಮನಗೆದ್ದಿದೆ.
ದೀಪಾವಳಿ ಹಬ್ಬದಂದು ರಿಲೀಸ್ ಆದ ʼಟೈಗರ್ -3ʼ ಇತ್ತ ಬಾಕ್ಸ್ ಆಫೀಸ್ ಗಳಿಕೆಯಲ್ಲೂ ದೊಡ್ಡ ಓಪನಿಂಗ್ ಪಡೆದುಕೊಂಡಿದೆ.
ಸ್ಯಾಕ್ನಿಲ್ಕ್ ವರದಿಯ ಪ್ರಕಾರ, ಭಾರತದಲ್ಲಿ ಎಲ್ಲಾ ಭಾಷೆಯಲ್ಲಿ ಸೇರಿ 44.50 ಕೋಟಿ ರೂ.ಗಳಿಸಿದೆ. ಇದು ದೀಪಾವಳಿ ವೇಳೆ ರಿಲೀಸ್ ಆದ ಹಿಂದಿ ಸಿನಿಮಾಗಳ ಪೈಕಿ ಅತೀ ಹೆಚ್ಚು ಓಪನಿಂಗ್ ಕಂಡ ಸಿನಿಮವಾಗಿದೆ. ಮುಂಬೈ ,ದೆಹಲಿ ಎನ್‌ಸಿಆರ್, ಪುಣೆ, ಬೆಂಗಳೂರಿನಿಂದ ಹೆಚ್ಚು ಕಲೆಕ್ಷನ್ ಬಂದಿದೆ.’ಟೈಗರ್ 3′ ಭಾರತದಲ್ಲಿ 5,500 ಸ್ಕ್ರೀನ್‌ಗಳಲ್ಲಿ ಮತ್ತು ವಿದೇಶದಲ್ಲಿ 3,400 ಸ್ಕ್ರೀನ್‌ಗಳಲ್ಲಿ ಬಿಡುಗಡೆಯಾಗಿದೆ.
ಸಲ್ಮಾನ್ ಖಾನ್ ಅವರ ʼಭಾರತ್ʼ ಸಿನಿಮಾದ ಓಪನಿಂಗ್ ಡೇ ದಾಖಲೆಯನ್ನು ʼಟೈಗರ್ -3ʼ ಬ್ರೇಕ್ ಮಾಡಿದೆ. 42.30 ಕೋಟಿ ರೂ.ಗಳಿಸಿತ್ತು.
ಸಲ್ಮಾನ್ ಖಾನ್ , ಕತ್ರಿನಾ ಕೈಫ್ , ಇಮ್ರಾನ್ ಹಶ್ಮಿ ಪ್ರಧಾನ ಪಾತ್ರದಲ್ಲಿದ್ದು ಶಾರುಖ್ ಖಾನ್ ಮತ್ತು ಹೃತಿಕ್ ರೋಷನ್ ಅವರು ಅತಿಥಿ ಪಾತ್ರದಲ್ಲಿದ್ದಾರೆ.