Advertisement
ಗುರುವಾರ ನಗರದಲ್ಲಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಪಾಲಿಕೆ ಸದಸ್ಯರ ಪರವಾಗಿ ಮಾತನಾಡಿದ ಪ್ರೇಮಾನಂದ ಬಿರಾದಾರ, ಮಾಜಿ ಮಹಾಪೌರ ರಾಜೇಶ ದೇವಗಿರಿ ಇತರರು, ಬಿಜೆಪಿ ಪಕ್ಷದಿಂದ ಉಚ್ಛಾಟಿತರು, ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಗೆಲ್ಲುವ ಅವಕಾಶ ಇದ್ದರೂ ಹಲವು ಕ್ಷೇತ್ರಗಳಲ್ಲಿ ಪಕ್ಷ ವಿರೋಧಿ ಚಟುವಟಿಕೆ ಮೂಲಕ ಸೋಲಿಗೆ ಕಾರಣವಾದವರು. ಇಂಥವರು ಅಭಿವೃದ್ಧಿ ಹರಿಕಾರ ಯತ್ನಾಳ ವಿರುದ್ಧ ಹಗುರವಾಗಿ ಮಾತನಾಡುವುದನ್ನು ನಿಲ್ಲಿಸಬೇಕು ಎಂದು ಎಚ್ಚರಿಸಿದರು.
Related Articles
Advertisement
ಮಹಾನಗರ ಪಾಲಿಕೆ ಚುನಾವಣೆ ಸಂದರ್ಭದಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಯಾವ ವಾರ್ಡನಲ್ಲೂ ಕನಿಷ್ಟ ಪ್ರಚಾರ ಮಾಡದ ಅಪ್ಪು ಪಟ್ಟಣಶಟ್ಟಿ ಅವರಿಗೆ, ಪಕ್ಷದ ಸಂಘಟನೆ ಸಂದರ್ಭದಲ್ಲಿ ತೊಡಗಿಸಿಕೊಳ್ಳದೇ ಮನೆಯಲ್ಲಿ ಕುಳಿವರಿಗೆ ಟಿಕೆಟ್ ನೀಡಬಾರದು ಎಂದು ಆಗ್ರಹಿಸಿದರು.
ಮಾಜಿ ಸಚಿವ ಅಪ್ಪು ಪಟ್ಟಣಶಟ್ಟಿ ಅವರಿಗೆ ಪಕ್ಷ ಬಬಲೇಶ್ವರ ಕ್ಷೇತ್ರಕ್ಕೆ ನೀಡಬೇಕು. ಪಟ್ಟಣಶಟ್ಟಿ ಅವರಿಗೆ ಬಬಲೇಶ್ವರ ಕ್ಷೇತ್ರಕ್ಕೆ ಟಿಕೆಟ್ ನೀಡಿದರೆ ಅವರ ಗೆಲುವಿಗೆ ಶ್ರಮಿಸಲು ನಾವೂ ಬಬಲೇಶ್ವರ ಕ್ಷೇತ್ರಕ್ಕೆ ಹೋಗಿ ಪ್ರಚಾರ ಮಾಡಿ, ಗೆಲ್ಲಿಸಲಿದ್ದೇವೆ ಎಂದರು.
ಪಾಲಿಕೆ ಸದಸ್ಯರಾದ ಎಂ.ಎಸ್. ಕರಡಿ, ರಾಜು ಜಾಧವ, ಜವಾಹರ ಗೋಸಾವಿ, ರಾಜಶೇಖರ ಕುರಿ, ಮಲ್ಲಿಕಾರ್ಜುನ ಗಡಗಿ, ಕಿರಣ ಪಾಟೀಲ, ವಿಠ್ಠಲ ಹೊಸಪೇಟಿ, ಚಂದ್ರು ಚೌಧರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.