Advertisement

ಜ.13ಕ್ಕೆ ಭಾರತ-ಆಸೀಸ್‌ ಬೆಂಗಳೂರು ಪಂದ್ಯದ ಬಾಕ್ಸ್‌ ಆಫೀಸ್ ಟಿಕೆಟ್‌ ಮಾರಾಟ

04:53 PM Jan 03, 2020 | keerthan |

ಬೆಂಗಳೂರು: ಉದ್ಯಾನನಗರಿಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಜ.19ರಂದು ನಡೆಯಲಿರುವ ಭಾರತ -ಆಸ್ಟ್ರೇಲಿಯ ನಡುವಿನ ಹೊನಲು ಬೆಳಕಿನ 3ನೇ ಏಕದಿನ ಪಂದ್ಯದ ಬಾಕ್ಸ್‌ ಆಫೀಸ್ ಹಾಗೂ ಆನ್‌ಲೈನ್‌ ಟಿಕೆಟ್‌ಗಳ ಮಾರಾಟಕ್ಕೆ ಸಿದ್ಧತೆ ನಡೆಸಲಾಗಿದೆ.

Advertisement

ಬಾಕ್ಸ್‌ ಆಫೀಸ್ ಟಿಕೆಟ್‌ಗಳ ಮಾರಾಟ ಜ.13ರಂದು ನಡೆಯಲಿದೆ ಎಂದು ಕೆಎಸ್‌ಸಿಎ (ರಾಜ್ಯ ಕ್ರಿಕೆಟ್‌ ಸಂಸ್ಥೆ) ಪ್ರಕಟಣೆಯಲ್ಲಿ ತಿಳಿಸಿದೆ. ಬೆಳಗ್ಗೆ 10 ಗಂಟೆಯಿಂದ ಟಿಕೆಟ್‌ಗಳನ್ನು ಚಿನ್ನಸ್ವಾಮಿ ಕ್ರೀಡಾಂಗಣದ ಗೇಟ್‌ ನಂ.2ರಲ್ಲಿ ವಿತರಿಸಲಾಗುತ್ತದೆ. ಆನ್‌ಲೈನ್‌ ಟಿಕೆಟ್‌ ಮಾರಾಟ ಜ.4ರಿಂದ ಆರಂಭವಾಗಲಿದೆ. ಒಬ್ಬರಿಗೆ 2 ಟಿಕೇಟ್‌ ಮಾತ್ರ ನೀಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

https://www.ksca.cricket/ or Paytm website ಮೂಲಕವೂ ಟಿಕೇಟ್‌ ಪಡೆಯಲು ಅವಕಾಶ ಇದೆ. ಟಿಕೆಟ್‌ ದರ ಹೀಗಿದೆ:

ಪಿ ಕಾರ್ಪೊರೇಟ್‌ (ರೂ.10,000),
ಪೆವಿಲಿಯನ್‌ ಟೆರೆಸ್‌ (ರೂ.7,500), ಇ ಎಕ್ಸಿಕ್ಯೂಟಿವ್‌
(ರೂ.5,000), ಗ್ರಾಂಡ್‌ ಟೆರೆಸ್‌ (ರೂ.5,000),
ಎನ್‌ ಸ್ಟಾಂಡ್‌ (ರೂ.4,000), ಡಿ ಕಾರ್ಪೊರೇಟ್‌ (ರೂ.3,000),
ಎ ಸ್ಟಾಂಡ್‌ (ರೂ.2,000), ಬಿ ಲೋವರ್‌ (ರೂ.2,000),
ಬಿ ಅಪ್ಪರ್‌ (ರೂ.2,000), ಜಿ ಅಪ್ಪರ್‌ (ರೂ.500), ಜಿ
ಲೋವರ್‌ 1 (ರೂ.500), ಜಿ ಲೋವರ್‌ 2 (ರೂ.500)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next