Advertisement

Gold Smuggling: ಚೀನಾ ಗಡಿ ಭಾಗದ ಲಡಾಖ್‌ ನಲ್ಲಿ ಬೃಹತ್‌ ಚಿನ್ನ ಕಳ್ಳಸಾಗಣೆ; ಇಬ್ಬರ ಬಂಧನ

03:15 PM Jul 12, 2024 | Team Udayavani |

ನವದೆಹಲಿ: ಇಂಡೋ-ಟಿಬೇಟಿಯನ್‌ ಬಾರ್ಡರ್‌ ಪೊಲೀಸರು (ITBP) ಚೀನಾ ಗಡಿ ಭಾಗದ ಲಡಾಖ್‌ ಪ್ರದೇಶದಲ್ಲಿ ಒಂದು ಕಿಲೋ ಗ್ರಾಮ್‌ ತೂಕದ 108 ಚಿನ್ನದ ಬಿಸ್ಕತ್‌ ಗಳನ್ನು ವಶಪಡಿಸಿಕೊಂಡಿದ್ದು, ಇದು ಇತ್ತೀಚೆಗಿನ ವರ್ಷಗಳಲ್ಲಿ ಭಾರತ-ಚೀನಾ ಗಡಿಭಾಗದಲ್ಲಿ ವಶಪಡಿಸಿಕೊಂಡ ಬೃಹತ್‌ ಚಿನ್ನ ಕಳ್ಳಸಾಗಣೆಯಾಗಿದೆ.

Advertisement

ವಶಪಡಿಸಿಕೊಂಡ ಚಿನ್ನದ ಮೌಲ್ಯ 70 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದ್ದು, ಗಡಿ ಭದ್ರತಾ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಟೆನ್‌ ಝಿಂಗ್‌ ಟಾರ್ಗೆ ಮತ್ತು ಶೇರಿಂಗ್‌ ಚಾಂಬಾ ಸೇರಿ ಇಬ್ಬರನ್ನು ಬಂಧಿಸಿರುವುದಾಗಿ ವರದಿ ತಿಳಿಸಿದೆ.

ಬಂಧಿತ ಆರೋಪಿಗಳಿಂದ ಮೊಬೈಲ್‌ ಫೋನ್‌ ಗಳು ಹಾಗೂ ಇನ್ನಿತರ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಗುಪ್ತಚರ ಇಲಾಖೆಯ ಮಾಹಿತಿ ಮೇರೆಗೆ ಐಟಿಬಿಪಿಯ 21ನೇ ಬೆಟಾಲಿಯನ್‌ ಪಡೆ ಪೂರ್ವ ಲಡಾಖ್‌ ನ 18,000 ಅಡಿ ಎತ್ತರದ ಪ್ರದೇಶದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿತ್ತು ಎಂದು ವರದಿ ವಿವರಿಸಿದೆ.

Advertisement

ಪೂರ್ವ ಲಡಾಖ್‌ ನ ಚಾಂಗ್‌ ತಾಂಗ್‌ ಸಬ್‌ ಸೆಕ್ಟರ್‌ ಪ್ರದೇಶದಲ್ಲಿ ಇಬ್ಬರು ವ್ಯಕ್ತಿಗಳು ವಾಸ್ತವ ಗಡಿ ನಿಯಂತ್ರಣ ರೇಖೆ ಬಳಿ ನಿಂತಿದ್ದಾಗ ಇಬ್ಬರನ್ನು ತಡೆಯಲು ಯತ್ನಿಸಿದಾಗ ಪರಾರಿಯಾಗಲು ಮುಂದಾದ ವೇಳೆ ಅವರನ್ನು ಬಂಧಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ:ಕೈಯಲ್ಲಿ ಪಿಸ್ತೂಲ್ ಹಿಡಿದು ಪೂಜಾ ಖೇಡ್ಕರ್ ತಾಯಿ ರೈತರನ್ನು ಬೆದರಿಸುವ ವಿಡಿಯೋ ವೈರಲ್

Advertisement

Udayavani is now on Telegram. Click here to join our channel and stay updated with the latest news.

Next