ಮಂಗಳೂರು/ಉಡುಪಿ: ಕರಾವಳಿ ಜಿಲ್ಲೆಗಳಲ್ಲಿ ಶನಿವಾರವೂ ಮಳೆ ಸುರಿದಿದೆ. ಕಡಬ, ಕೊಂಬಾರು, ಬೆಳ್ತಂಗಡಿ, ಉಜಿರೆ, ಕಡಿರುದ್ಯಾವರ, ಗರ್ಡಾಡಿ, ಮಡಂತ್ಯಾರು, ಸುರತ್ಕಲ್‌ನ ಕಾಟಿಪಳ್ಳ, ಚೊಕ್ಕಬೆಟ್ಟು, ಮೂಡುಬಿದಿರೆ ಪರಿಸರ, ಉಡುಪಿಯ ಕಟಪಾಡಿ ಸೇರಿದಂತೆ ಉಭಯ ಜಿಲ್ಲೆಯ ವಿವಿಧೆಡೆ ಶನಿವಾರ ಅಪರಾಹ್ನ ಮತ್ತು ರಾತ್ರಿ ಸಾಧಾರಣ ಮಳೆಯಾಗಿದೆ. ಕೆಲವು ಕಡೆಗಳಲ್ಲಿ ಗುಡುಗು ಸಹಿತ ಮಳೆಯ ಸುರಿದಿದೆ.
Advertisement
ಇದೇ ವೇಳೆ ಹಗಲಿನಲ್ಲಿ ಜಿಲ್ಲೆಯಲ್ಲಿ ಸೆಕೆಯ ಬೇಗೆ ಹೆಚ್ಚಿದೆ. ಬೆಳಗ್ಗಿನ ವೇಳೆ ಕೆಲವು ಕಡೆಗಳಲ್ಲಿ ಚಳಿಯ ವಾತಾವರಣ ಇತ್ತು. ಹವಾಮಾನ ಇಲಾಖೆ ಮಾಹಿತಿಯಂತೆ ಶನಿವಾರ 33 ಡಿ.ಸೆ. ಗರಿಷ್ಠ ಮತ್ತು 23.5 ಡಿ.ಸೆ. ಕನಿಷ್ಠ ತಾಪಮಾನ ದಾಖಲಾಗಿತ್ತು.