Advertisement

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

01:07 PM Apr 26, 2024 | Team Udayavani |

ಬೆಳ್ತಂಗಡಿ: ಮದುವೆಗೂ ಮೊದಲು ಮತಗಟ್ಟೆಗೆ ವಧು ದಿಬ್ಬಣದಲ್ಲೇ ಆಗಮಿಸಿ ಮತ ಚಲಾಯಿಸಿರುವ ಘಟನೆ ಬಂದಾರಿನಲ್ಲಿ ನಡೆದಿದೆ.

Advertisement

ಬಂದಾರು ಗುತ್ತು ಮನೆ ದಿ.ನೇಮಣ್ಣ ಗೌಡರ ಪುತ್ರಿ ಡಾ.ಸೌಮ್ಯಾ ಮದುವೆಯ ನಡುವೆಯೂ ಮತದಾನ ಮಾಡಿದವರು.

ಅವರ ಮದುವೆ ವಿಟ್ಲದ ಹರೀಶ್ ಅವರೊಂದಿಗೆ ನಿಗದಿಯಾಗಿದ್ದು, ವಧು ಸೌಮ್ಯಾ ಬೆಳಗ್ಗೆ ತನ್ನ ಬಂದಾರಿನ ಮನೆಯಿಂದ ದಿಬ್ಬಣದಲ್ಲೇ ಬಂದಾರಿನ ಮತಗಟ್ಟೆಗೆ (ಸಂಖ್ಯೆ 219) ಆಗಮಿಸಿ, ಹಕ್ಕು ಚಲಾಯಿಸುವ ಮೂಲಕ ಗಮನ ಸೆಳೆದಿದ್ದಾರೆ.

ಇದನ್ನೂ ಓದಿ: LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

Advertisement

Udayavani is now on Telegram. Click here to join our channel and stay updated with the latest news.

Next