Advertisement

Mangaluru University ; ಇಂದು ವಾರ್ಷಿಕ ಘಟಿಕೋತ್ಸವ

01:05 AM Jun 15, 2024 | Team Udayavani |

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ 42ನೇ ವಾರ್ಷಿಕ ಘಟಿಕೋತ್ಸವ ಜೂ.15ರಂದು ಮಧ್ಯಾಹ್ನ 12.15ಕ್ಕೆ ನಡೆಯಲಿದ್ದು, ಎಂ.ಆರ್‌.ಜಿ. ಗ್ರೂಪ್‌ ಸ್ಥಾಪಕಾಧ್ಯಕ್ಷ ಕೆ. ಪ್ರಕಾಶ್‌ ಶೆಟ್ಟಿ, ತುಂಬೆ ಗ್ರೂಪ್‌ ಸ್ಥಾಪಕಾಧ್ಯಕ್ಷ ಡಾ| ತುಂಬೆ ಮೊಯ್ದಿನ್‌ ಹಾಗೂ ಅನಿವಾಸಿ ಭಾರತೀಯ ಉದ್ಯಮಿ ಡಾ|ರೊನಾಲ್ಡ್‌ ಕೊಲಾಸೊ ಅವರಿಗೆ ಗೌರವ ಡಾಕ್ಟರೇಟ್‌ ಪದವಿ ಪ್ರದಾನ ಮಾಡುವುದಾಗಿ ಕುಲಪತಿ ಪ್ರೊ| ಪಿ.ಎಲ್ ಧರ್ಮ ತಿಳಿಸಿದ್ದಾರೆ.

Advertisement

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಈ ಬಾರಿ ಗೌರವ ಡಾಕ್ಟರೇಟ್‌ಗಾಗಿ 12 ಪ್ರಸ್ತಾವನೆಗಳಲ್ಲಿ ಮೂವರ ಹೆಸರನ್ನು ಕುಲಾಧಿಪತಿಗಳು ಆಯ್ಕೆ ಮಾಡಿದ್ದಾರೆ ಎಂದರು.

ವಿ.ವಿ. ಆವರಣದಲ್ಲಿನ ಮಂಗಳ ಸಭಾಂಗಣದಲ್ಲಿ ನಡೆಯಲಿರುವ ಘಟಿ ಕೋತ್ಸವದಲ್ಲಿ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡುವರು. ಹೊಸ ದಿಲ್ಲಿಯ ಅಭಿವೃದ್ಧಿಶೀಲ ರಾಷ್ಟ್ರಗಳ ಸಂಶೋಧನೆ ಮತ್ತು ಮಾಹಿತಿ ವ್ಯವ ಸ್ಥೆಯ ಮಹಾ ನಿರ್ದೇಶಕ ಪ್ರೊ| ಸಚಿನ್‌ ಚತುರ್ವೇದಿ ಮುಖ್ಯ ಅತಿಥಿಯಾ ಗಿರುವರು. ರಾಜ್ಯ ಉನ್ನತ ಶಿಕ್ಷಣ ಸಚಿವ ಡಾ| ಎಂ.ಸಿ. ಸುಧಾಕರ್‌ ಪಾಲ್ಗೊ ಳ್ಳಲಿದ್ದು, ಮೊದಲ ಬಾರಿ ಘಟಿ ಕೋತ್ಸವದಲ್ಲಿ ಸಹಕುಲಾಧಿಪತಿ ಅವರು ಭಾಷಣ ಮಾಡುವರು ಎಂದರು.

155 ಮಂದಿಗೆ ಪಿಎಚ್‌ಡಿ
ಮಂಗಳೂರು ವಿ.ವಿ.ಯ 155 ಮಂದಿಗೆ ಪಿಎಚ್‌ಡಿ. ಡಾಕ್ಟರೇಟ… ಪದವಿ (ಕಲೆ 51, ವಿಜ್ಞಾನ 73, ವಾಣಿಜ್ಯ 26, ಶಿಕ್ಷಣ 5) ನೀಡಲಾಗುವುದು. ಇವರಲ್ಲಿ 60 ಮಹಿಳೆಯರು ಮತ್ತು 95 ಪುರುಷರು. ಈ ಪೈಕಿ 18 ಅಂತಾ ರಾಷ್ಟ್ರೀಯ ವಿದ್ಯಾರ್ಥಿಗಳು ಹಾಗೂ 4 ಅಂತಾರಾಷ್ಟ್ರೀಯ ಮಹಿಳಾ ವಿದ್ಯಾ ರ್ಥಿನಿಯರು ಪಿಎಚ್‌ಡಿ ಪದವಿ ಪಡೆಯುವರು. 58 ಚಿನ್ನದ ಪದಕ ಮತ್ತು 57 ನಗದು ಬಹುಮಾನಗಳಿದ್ದು, ವಿವಿಧ ಕೋರ್ಸ್‌ಗಳ ಒಟ್ಟು 168 ರ್‍ಯಾಂಕ್‌ಗಳಲ್ಲಿ ಪ್ರಥಮ ರ್‍ಯಾಂಕ್‌ ಪಡೆದ 72 ಮಂದಿಗೆ ರ್‍ಯಾಂಕ್‌ ಪ್ರಮಾಣ ಪತ್ರ ನೀಡುವುದಾಗಿ ತಿಳಿಸಿದರು.

ಮಂಗಳೂರು ವಿ.ವಿ. 2022-23ನೆ ಸಾಲಿಗೆ ನಡೆಸಿದ ವಿವಿಧ ಪರೀಕ್ಷೆಗಳಲ್ಲಿ ಒಟ್ಟು 29,465 ವಿದ್ಯಾರ್ಥಿಗಳು ಹಾಜ ರಾಗಿದ್ದು 21,319 (ಶೇ. 72.47) ಉತ್ತೀರ್ಣರಾಗಿದ್ದಾರೆ. ಇದರಲ್ಲಿ ಸ್ನಾತ ಕೋತ್ತರ ಪದವಿ ಪರೀಕ್ಷೆಗೆ 3,277 ವಿದ್ಯಾರ್ಥಿಗಳು ಹಾಜರಾಗಿದ್ದು, 2,094 (ಶೇ. 94.42) ಮಂದಿ ಉತ್ತೀರ್ಣರಾಗಿದ್ದಾರೆ ಎಂದು ಅವರು ವಿವರಿಸಿದರು.

Advertisement

ವಿ.ವಿ. ಕುಲಸಚಿವ (ಆಡಳಿತ) ರಾಜು ಮೊಗವೀರ, ಪರೀಕ್ಷಾಂಗ ಕುಲಸಚಿವ ಡಾ| ದೇವೇಂದ್ರಪ್ಪ, ಹಣಕಾಸು ವಿಭಾಗದ ಪ್ರೊ| ಸಂಗಪ್ಪ, ವಿ.ವಿ. ಪ್ರಾಂಶುಪಾಲರಾದ ಗಣಪತಿ ಗೌಡ ಉಪಸ್ಥಿತರಿದ್ದರು.

ಕೆ. ಪ್ರಕಾಶ್‌ ಶೆಟ್ಟಿ
ಉಡುಪಿಯ ಕೊರಂಗ್ರಪಾಡಿ ಗ್ರಾಮದಲ್ಲಿ ಹುಟ್ಟಿ ಬೆಂಗಳೂರಿಗೆ ಹೋಗಿ ಬಂಜಾರ ರೆಸ್ಟೋರೆಂಟ್‌ ಆರಂಭಿಸಿದ ಕೆ. ಪ್ರಕಾಶ್‌ ಶೆಟ್ಟಿ ಅವರು ಎಂಆರ್‌ಜಿ ಹಾಸ್ಪಿಟಾಲಿಟಿ ಮತ್ತು ಇನ್‌ಫ್ರಾಸ್ಟ್ರಕ್ಚರ್‌ ಪ್ರೈ.ಲಿ. ಸ್ಥಾಪಿಸಿ ದೇಶ-ವಿದೇಶದಲ್ಲಿ ಹೊ ಟೇಲ್‌ ಉದ್ಯಮವನ್ನು ಯಶಸ್ವಿಯಾಗಿ ನಡೆಸಿದ್ದಾರೆ. ಎಂಆರ್‌ಜಿ ಸಂಸ್ಥೆಯ ಹೊಟೇಲ್‌ಗ‌ಳು ದೇಶ-ವಿದೇಶ
ಗಳಲ್ಲೂ ಮಾನ್ಯತೆ ಪಡೆದಿವೆ.

ಇದರೊಂದಿಗೆ ತಾವು ಗಳಿಸಿದ ಸಂಪತ್ತನ್ನು ಅನಾಥಾಶ್ರಮ, ವೃದ್ಧಾಶ್ರಮ, ಶಿಕ್ಷಣ ಸಂಸ್ಥೆಗಳು, ಸಮಾಜದ ಅಶಕ್ತರಿಗೆ ನೀಡುವ ಮೂಲಕ ಅವರು ಸಾಮಾಜಿಕ ಸೇವೆ ಸಲ್ಲಿಸಿದ್ದಾರೆ. ಕೋಟ್ಯಾಂತರ ರೂ. ವಿದ್ಯಾರ್ಥಿ ವೇತನ ನೀಡುತ್ತಿದ್ದಾರೆ.

ಡಾ| ತುಂಬೆ ಮೊಯ್ದಿನ್‌
ಮಂಗಳೂರಿನ ಪ್ರಸಿದ್ಧ ಉದ್ಯಮ ಕುಟುಂಬದ 3ನೆ ತಲೆಮಾರಿನ ಉದ್ಯಮಿ. ತಂದೆ ಸ್ಥಾಪಿಸಿದ ವ್ಯಾಪಾರದ ಚುಕ್ಕಾಣಿ ಹಿಡಿದಅವರು, ತುಂಬೆ ಗ್ರೂಪ್‌ನ ಸಂಸ್ಥಾಪಕ ಅಧ್ಯಕ್ಷರು. 20 ವಲಯಗಳಲ್ಲಿನ ಅಂತಾರಾಷ್ಟ್ರೀಯ ಉದ್ಯಮ ಸಮೂಹ ತುಂಬೆ ಗ್ರೂಪ್‌, ದುಬಾೖ ಇಂಟರ್‌ನ್ಯಾಶನಲ್‌ ಫೈನಾನ್ಷಿಯಲ್‌ ಸೆಂಟರ್‌ನಲ್ಲಿ ಪ್ರಧಾನ ಕಚೇರಿ ಹೊಂದಿದೆ. ಯುಎಇನಲ್ಲಿ 5,000 ಉದ್ಯೋಗಿಗಳನ್ನು ಹೊಂದಿದೆ. ತುಂಬೆ ಮೊಯ್ದಿನ್‌ ಅರಬ್‌ ರಾಷ್ಟ್ರಗಳಲ್ಲಿನ ಭಾರತೀಯ ಉದ್ಯ ಮಿಗಳಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. ವೈದ್ಯಕೀಯ ಶಿಕ್ಷಣ, ಉದ್ಯಮ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

ಡಾ| ರೊನಾಲ್ಡ್‌ ಕೊಲಾಸೊ
ಮೂಲತಃ ಮೂಡು ಬಿದಿರೆಯ ಡಾ| ರೊನಾಲ್ಡ್‌ ಕೊಲಾಸೊಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಉದ್ಯಮಿ. ಬೆಂಗಳೂರು ಏರ್‌ಪೋರ್ಟ್‌ ಬಳಿ “ಹಾಲಿ ವುಡ್‌ ಟೌನ್‌ ಹಾಗೂ ಸ್ವಿಸ್‌ ಟೌನ್‌’ ಎಂಬ ವಿಶೇಷ ಟೌನ್‌ಶಿಪ್‌ ನಿರ್ಮಿಸಿದ್ದಾರೆ. ದೇವನಹಳ್ಳಿಯಲ್ಲಿ ಅಂತಾರಾಷ್ಟ್ರೀಯ ದರ್ಜೆಯ ರೆಸಾರ್ಟ್‌, ವಸತಿ ಸಮುಚ್ಚಯ ನಿರ್ಮಿಸಿದ್ದಾರೆ. ರಾಜ್ಯದವಿವಿ ಧೆಡೆ ಶಿಕ್ಷಣ ಸಂಸ್ಥೆಗಳ ಪ್ರಗತಿಗ ಅವರು ದೇಣಿಗೆ ನೀಡಿದ್ದಾರೆ. ಆರೋಗ್ಯ, ಧಾರ್ಮಿಕ,ಸಾಮಾಜಿಕ ಸಹಿತ ಎಲ್ಲ ಕ್ಷೇತ್ರಗಳಿಗೂ ನೆರವು ನೀಡಿ ದ್ದಾರೆ. ವಿದೇಶಗಳಲ್ಲೂ ಉದ್ಯಮ ವಿಸ್ತರಿಸಿರುವ ಕೀರ್ತಿ ಇವರದ್ದು.

 

Advertisement

Udayavani is now on Telegram. Click here to join our channel and stay updated with the latest news.

Next