Advertisement

Manipal ಮಾಹೆ ವಿಶ್ವವಿದ್ಯಾನಿಲಯ: ಸಂಶೋಧನ ಸಮ್ಮೇಳನ

12:25 AM Jun 13, 2024 | Team Udayavani |

ಉಡುಪಿ: ಮಾಹೆ ವಿಶ್ವವಿದ್ಯಾನಿಲಯದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಸ್ನಾತಕೋತ್ತರ ಸಂಶೋಧನ ವಿಭಾಗದಿಂದ ರಾಷ್ಟ್ರೀಯ ಇಂಟರ್‌-ಹೆಲ್ತ್ ಸೈನ್ಸಸ್‌ ಸ್ನಾತಕೋತ್ತರ ಸಂಶೋಧನ ಸಮ್ಮೇಳನ ಕ್ವೆಸ್ಟ್ 1.0ರ ಮೊದಲ ಆವೃತ್ತಿ ನಡೆಯಿತು.

Advertisement

ಮಾಹೆ ಸಹ ಕುಲಪತಿ ಡಾ| ಶರತ್‌ ಕೆ. ರಾವ್‌ ಅವರು ಮಣಿಪಾಲ ಕ್ವೆಸ್ಟ್ -1ರ ಲೋಗೋ ಅನಾವರಣಗೊಳಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಸಮಾರೋಪದಲ್ಲಿ ಕುಲಪತಿ ಲೆ| ಜ| ಡಾ| ಎಂ.ಡಿ. ವೆಂಕಟೇಶ್‌ ಪಾಲ್ಗೊಂಡು, ಸಾಧಕ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಯುವ ಸಂಶೋಧಕ ಪ್ರಶಸ್ತಿಯನ್ನು ನೀಡಿದರು.

ಪೋಡಿಯಂ, ಪೋಸ್ಟರ್‌, ರಸಪ್ರಶ್ನೆ, ಜರ್ನಲ್‌ ವಿಮರ್ಶೆ, ಲೋಗೋ ಸ್ಪರ್ಧೆಗಳ ವಿಜೇತರನ್ನು ಗುರುತಿಸಿದರು.

ಮಾಹೆ ಸಂಶೋಧನಾ ನಿರ್ದೇಶಕ ಡಾ| ಸತೀಶ್‌ ರಾವ್‌, ಕೆಎಂಸಿ ಡೀನ್‌ ಡಾ| ಪದ್ಮರಾಜ್‌ ಹೆಗ್ಡೆ, ಕೈ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ| ಅನಿಲ್‌ ಕೆ.ಭಟ್‌ ಉಪಸ್ಥಿತರಿದ್ದರು.

ತುರ್ತು ವೈದ್ಯಕೀಯ ವಿಭಾಗದ ಸಹ ಪ್ರಾಧ್ಯಾಪಕಿ ಡಾ| ಪೃಥ್ವಿಶ್ರೀ ರವೀಂದ್ರ ಪ್ರಸ್ತಾವನೆಗೈದರು. ಜೋಧ್‌ಪುರದ ಏಮ್ಸ್‌ನ ಡೀನ್‌ (ಸಂಶೋಧನೆ) ಡಾ| ತನುಜ್‌ ಕಾಂಚನ್‌ ಮತ್ತು ಮುಂಬಯಿ ಕನ್ಸಲ್ಟೆಂಟ್‌ ಜಿಐ ಸರ್ಜನ್‌ ಡಾ| ಅವಿನಾಶ್‌ ಸುಪೆ ಸೇರಿದಂತೆ ದೇಶದ ವಿಷಯ ತಜ್ಞರು ವಿಶೇಷ ಉಪನ್ಯಾಸ ನೀಡಿದ್ದಾರೆ.

Advertisement

ಭಾರತದ ವೈದ್ಯಕೀಯ ಮತ್ತು ಶಸ್ತ್ರಚಿಕಿತ್ಸಾ ಸ್ನಾತಕೋತ್ತರ ಪದವೀಧರರು ಮತ್ತು ಪಿಎಚ್‌ಡಿ ವಿದ್ವಾಂಸರು ಸೇರಿದಂತೆ 690ಕ್ಕೂ ಹೆಚ್ಚು ಸಂಶೋಧಕರು ಭಾಗವಹಿಸಿದ್ದರು. 445 ವೈಜ್ಞಾನಿಕ ಪ್ರಬಂಧ ಮತ್ತು ಪೋಸ್ಟರ್‌ ಪ್ರಸ್ತುತಿಯಾಗಿದೆ. ರಸಪ್ರಶ್ನೆ ಮತ್ತು ಜರ್ನಲ್‌ ವಿಮರ್ಶೆ ಸ್ಪರ್ಧೆಗಳು ನಡೆದವು. ವೈಜ್ಞಾನಿಕ ಅವಧಿಗಳಲ್ಲಿ ಸಂಶೋಧನೆಯಲ್ಲಿ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್, ಜರ್ನಲ್‌ ಲೇಖನ ಗಳನ್ನು ವಿಮರ್ಶಿಸುವುದು, ವಿಮಶೆ‌ì ಲೇಖನಗಳನ್ನು ಬರೆಯುವುದು ಮತ್ತು ಪ್ರಬಂಧಗಳನ್ನು ಚರ್ಚಿಸುವುದು ಮುಂತಾದ ಪ್ರಮುಖ ವಿಷಯಗಳ ಚರ್ಚೆ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next