Advertisement
ಆಸ್ಪತ್ರೆಯು ಅತ್ಯುನ್ನತ ಮನೋವೈದ್ಯರು, ಮನಶ್ಶಾಸ್ತ್ರಜ್ಞರು, ವ್ಯಸನ ಸಲಹೆಗಾರರು, ಕುಟುಂಬ ಚಿಕಿತ್ಸಕರು, ದೈಹಿಕ ಚಿಕಿತ್ಸಕರು ಮತ್ತು ಔದ್ಯೋಗಿಕ ತಜ್ಞರನ್ನು ಒಳಗೊಂಡಿದ್ದು, ರೋಗಿಗಳ ಆರೈಕೆಗೆ ಸಮಗ್ರ ಮತ್ತು ವೈಯಕ್ತಿಕ ವಿಧಾನವನ್ನು ಖಾತ್ರಿಪಡಿಸಲಿದೆ.
1. ಮನೋವೈದ್ಯಕೀಯ ಆರೈಕೆ
ಒಳರೋಗಿ ಮತ್ತು ಹೊರರೋಗಿ ಸೇವೆಗಳು
ಮೊದಲ ಹಂತದಲ್ಲಿ 60 ಹಾಸಿಗೆಗಳು ಮತ್ತು 12 OPD ಗಳು
Related Articles
ರೋಗನಿರ್ಣಯ ಮತ್ತು ಚಿಕಿತ್ಸೆ
ಚಿಕಿತ್ಸಕ ಮಧ್ಯಸ್ಥಿಕೆಗಳು
Advertisement
ಪುನರ್ವಸತಿ ಸೇವೆಗಳುಮಾದಕ ವ್ಯಸನ ಪುನರ್ವಸತಿ 3. ದೀರ್ಘಾವಧಿಯ ಆರೈಕೆ ಮತ್ತು ಚಿಕಿತ್ಸೆ ನಂತರದ ಆರೈಕೆ
ಚಿಕಿತ್ಸೆ ನಂತರದ ಆರೈಕೆ ಕಾರ್ಯಕ್ರಮಗಳು
ಒಳರೋಗಿ VIP ವಿಲ್ಲಾಗಳು 4. ಈಜುಕೊಳ ಮತ್ತು ಸ್ಪಾ
5. ತುಂಬೆ ಮಸೀದಿ 500-600 ಮಂದಿಗೆ (ಸಾರ್ವಜನಿಕರಿಗೆ ತೆರೆದಿರುತ್ತದೆ)
6. ನಿರ್ಮಾಣವು ಜೂನ್ 2025 ರಲ್ಲಿ ಪ್ರಾರಂಭವಾಗುತ್ತದೆ ಮತ್ತು ಆಸ್ಪತ್ರೆಯು 2026 ರ ಮಧ್ಯದಲ್ಲಿ ಕಾರ್ಯನಿರ್ವಹಿಸಲಿದೆ. ಅಂತಾರಾಷ್ಟ್ರೀಯ ಮಾನದಂಡಗಳಿಗೆ ಬದ್ಧತೆ
ತುಂಬೆ ಸೈಕಿಯಾಟ್ರಿಕ್ ಮತ್ತು ಪುನರ್ವಸತಿ ಆಸ್ಪತ್ರೆಯು ಸುರಕ್ಷತೆ, ಗುಣಮಟ್ಟ ಮತ್ತು ಪರಿಣಾಮಕಾರಿಯಾಗುವಲ್ಲಿ ಕಠಿನ ಜಾಗತಿಕ ಮಾನದಂಡಗಳಿಗೆ ಅದರ ಅನುಸರಣೆಯನ್ನು ಪ್ರತಿಬಿಂಬಿಸುವ ಪುನರ್ವಸತಿ ಸೌಲಭ್ಯಗಳ (CARF) ಪ್ರಮಾಣೀಕರಣವನ್ನು ಸಾಧಿಸಲು ಪ್ರಯತ್ನಿಸಲಿದೆ.ಆಸ್ಪತ್ರೆಯು ಎಲ್ಲಾ ಯುಎಇ ಆರೋಗ್ಯ ರಕ್ಷಣೆಯ ನಿಯಮಗಳನ್ನು ಅನುಸರಿಸಲಿದೆ, ನೈತಿಕ ಮತ್ತು ಸಾಕ್ಷ್ಯಾಧಾರಿತ ಅಭ್ಯಾಸಗಳಿಗೆ ಅದರ ಬದ್ಧತೆಯನ್ನು ಮತ್ತಷ್ಟು ಒತ್ತಿಹೇಳಲಿದೆ. ಅತ್ಯುತ್ತಮ ಆಸ್ಪತ್ರೆಯನ್ನಾಗಿಸಲು ಬಯಸುತ್ತೇವೆ: ಡಾ| ತುಂಬೆ ಮೊಯ್ದೀನ್
“ಇದು ಈ ಪ್ರದೇಶದ ಮೊದಲ ಖಾಸಗಿ ಮನೋವೈದ್ಯಕೀಯ ಮತ್ತು ಪುನರ್ವಸತಿ ಆಸ್ಪತ್ರೆಯಾಗಿದ್ದು, ಜಾಗತಿಕ ಮಟ್ಟದ ಆರೈಕೆಯನ್ನು ಬಯಸುವ ಪ್ರಾದೇಶಿಕ ಮತ್ತು ಅಂತಾರಾಷ್ಟ್ರಗಳಿಂದ ಬರಿವ ರೋಗಿಗಳಿಗೆ ಚಿಕಿತ್ಸೆ ನೀಡಲಿದೆ. ಈ ಪ್ರದೇಶದಲ್ಲಿ ಸಮುದಾಯಕ್ಕೆ ಸೇವೆ ಸಲ್ಲಿಸುವ ಅತ್ಯುತ್ತಮ ಆಸ್ಪತ್ರೆಯನ್ನಾಗಿ ಮಾಡಲು ನಾವು ಬಯಸುತ್ತೇವೆ” ಎಂದು ಸಂಸ್ಥಾಪಕ ಅಧ್ಯಕ್ಷ ಡಾ| ತುಂಬೆ ಮೊಯ್ದೀನ್ ಹೇಳಿದ್ದಾರೆ. ನಾವು ಹೆಮ್ಮೆಪಡುತ್ತೇವೆ : ಡಾ. ಅಬ್ದೆಲಾಜಿಜ್ ಅಲ್ ಮೆಹರಿ
ಶಾರ್ಜಾ ಹೆಲ್ತ್ ಅಥಾರಿಟಿ ಮತ್ತು ಶಾರ್ಜಾ ಹೆಲ್ತ್ಕೇರ್ ಸಿಟಿ ಯ ಅಧ್ಯಕ್ಷ ಡಾ| ಆಬ್ಧೆಲಜೀಝ್ ಅಲ್ ಮೆಹರಿ ಅವರು
ಹೇಳಿಕೆಯಲ್ಲಿ,”ಈ ರೀತಿಯ ಯೋಜನೆಗಳು ಶಾರ್ಜಾ ಹೆಲ್ತ್ಕೇರ್ ಸಿಟಿಯ ದೃಷ್ಟಿಗೆ ಪೂರಕವಾಗಿದ್ದು, ನಾವು ಎಲ್ಲಾ ಹಂತದ ಆರೋಗ್ಯ ರಕ್ಷಣೆಗೆ ಪ್ರಾಮುಖ್ಯತೆ ನೀಡುತ್ತೇವೆ. ಜಗತ್ತಿನಲ್ಲಿ ಇಂದು ಮಾನಸಿಕ ಆರೋಗ್ಯವು ತುಂಬಾ ಮಹತ್ವದ್ದಾಗಿದೆ. ಅಂತಹ ಮೊದಲ ಆಸ್ಪತ್ರೆಯನ್ನು ಹೊಂದಲು ನಾವು ಹೆಮ್ಮೆಪಡುತ್ತೇವೆ” ಎಂದಿದ್ದಾರೆ.