Advertisement

ಅರ್ಹ ಫ‌ಲಾನುಭವಿಗೆ ಆಶ್ರಯ ಮನೆ ಸಿಗಲಿ

07:09 PM Jun 19, 2021 | Team Udayavani |

ತುಮಕೂರು: ನಗರದಲ್ಲಿ ವಾಸಿಸಲು ಮನೆ ಇಲ್ಲದಅರ್ಹಫ‌ಲಾನುಭವಿಗಳಿಗೆಆಶ್ರಯ ಸಮಿತಿಯಿಂದಮನೆ ಸಿಗುವಂತಾಗಬೇಕು ಎಂದು ಶಾಸಕಜಿ.ಬಿ.ಜ್ಯೋತಿಗಣೇಶ್‌ ತಿಳಿಸಿದರು.ನಗರದ ಶಾಸಕರ ಕಚೇರಿಯಲ್ಲಿ ನಡೆದ ಆಶ್ರಯಸಮಿತಿ ಸಭೆಯಲ್ಲಿ ಮಾತನಾಡಿದ ಅವರು,ನಗರದಲ್ಲಿ ಮನೆ ಇಲ್ಲದವರು ಆಶ್ರಯ ಮನೆಯೋಜನೆಯಡಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲುಈ ಹಿಂದೆ ಅವಕಾಶ ಕಲ್ಪಿಸಲಾಗಿತ್ತು.

Advertisement

ಇದರಲ್ಲಿ 22ಸಾವಿರಕ್ಕೂ ಹೆಚ್ಚು ಆನ್‌ಲೈನ್‌ ಅರ್ಜಿಯನ್ನುಸಲ್ಲಿಸಲಾಗಿದೆ. 22 ಸಾವಿರ ಅರ್ಜಿಗಳಲ್ಲಿ 4 ಸಾವಿರಅರ್ಜಿಗಳು ಮಾತ್ರ ಅರ್ಹವಾಗಿರುತ್ತದೆ.ಮತ್ತೂಂದೆಡೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವಬಗ್ಗೆ ನಮಗೆ ಮಾಹಿತಿಯಿಲ್ಲ. ನಮಗೂ ಅರ್ಜಿಸಲ್ಲಿಸಲು ಅವಕಾಶ ಕೊಡಿ, ನಾವು ಅರ್ಹರುಎಂದು ನೂರಾರು ಸಾರ್ವಜನಿಕರು ನನ್ನ ಬಳಿಬಂದು ಅಳಲು ತೋಡಿಕೊಂಡಿದ್ದಾರೆ. ಈಕಾರಣದಿಂದ ಈ ಸಭೆಯ ನಿರ್ಣಯದಂತೆಮತ್ತೂಮ್ಮೆ ಅರ್ಹ ಫ‌ಲಾನುಭವಿಗಳಿಗೆ ಆಶ್ರಯಮನೆ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶಮಾಡಿಕೊಡಲು ವಸತಿ ಸಚಿವರಿಗೆ ಮನವಿಸಲ್ಲಿಸಲಾಗುವುದು ಎಂದು ತಿಳಿಸಿದರು.

ಸೈಟ್‌ ಹಂಚಿಕೆ ಮಾಡಲು ಸಾಧ್ಯವಿಲ್ಲ: ನಗರದಲ್ಲಿ ಸೈಟ್‌ ಹಂಚಿಕೆ ಮಾಡಲು ಸಾಧ್ಯವಿಲ್ಲ.Ó ‌ರ್ಕಾರಿ ಜಮೀನುಗ ‌Ù ‌ ಬಗೆ Y ಮಾಹಿತಿಪಡೆದುಕೊಳ್ಳುತ್ತಿದ್ದು, ಜಿ+2 ಮನೆಗಳನ್ನುನಿರ್ಮಾಣ ಮಾಡಲಾಗುವುದು. ಈಗಾಗಲೇ 4ಕಡೆ ಸರ್ಕಾರಿ ಜಮೀನುಗಳನ್ನು ಗುರುತಿಸಲಾಗಿದ್ದು,ಸರ್ಕಾರಿ ಜಮೀನುಗಳಿಗೆ ಜಿ.ಪಿ.ಎಸ್‌ಕೋ-ಆರ್ಡಿನೇಟರ್‌ ಸರ್ವೆ ನಡೆಸಿ ಎಂದುಸೂಚಿಸಿದರು. ತುಮಕೂರು ಪಾಲಿಕೆಯಮಹಾಪೌರ ಬಿ.ಜಿ.ಕೃಷ್ಣಪ್ಪ, ಆಯುಕ್ತೆ ರೇಣುಕಾ,ಸ್ಮಾರ್ಟ್‌ಸಿಟಿ ಎಂ.ಡಿ ರಂಗಸ್ವಾಮಿ, ತಹಶೀಲ್ದಾರ್‌ಮೋಹನ್‌, ಸರೋಜಗೌಡ, ಎನ್‌.ಡಿ. ವಿಜಯ್‌ಪ್ರಕಾಶ್‌, ಸಿದ್ದಗಂಗಯ್ಯ, ಸ್ಲಂ ಬೋರ್ಡ್‌ನ ಎಇಇಲೋಕೇಶ್ವರಪ್ಪ ಹಾಗೂ ಪಾಲಿಕೆ ಅಧಿಕಾರಿಗಳುಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next