Advertisement

ಗರಡಿ ಮನೆ ಉಳಿವಿಗೆ ಬೇಕು ಮೂಲಸೌಕರ್ಯ

04:59 PM Oct 19, 2021 | Team Udayavani |

ಚಿಕ್ಕನಾಯಕನಹಳ್ಳಿ: ಒಂದು ಕಾಲದಲ್ಲಿ ಯುವಕರ ಅಚ್ಚುಮೆಚ್ಚಿನ ಅಭ್ಯಾಸತಾಣಗಳಾಗಿದ್ದ ಗರಡಿ ಮನೆ, ಆಧುನಿಕತೆ ಅಬ್ಬರಕ್ಕೆ ಸಿಲುಕಿ ಮೂಲಸೌಕರ್ಯವಿಲ್ಲದೆ ಕಾಲಗರ್ಭ ಸೇರುವ ಸ್ಥಿತಿಗೆ ಬಂದಿವೆ.

Advertisement

ಸರ್ಕಾರ ವಿಶೇಷಅನುದಾನ ನೀಡಿ ಗರಡಿ ಮನೆಗಳನ್ನು ಪುನಶ್ಚೇತನ ಮಾಡಬೇಕೆಂಬುದು ಹಿರಿಯ ಪೈಲ್ವಾನರ ಆಗ್ರಹವಾಗಿದೆ.ಚಿಕ್ಕನಾಯಕನಹಳ್ಳಿಯ ಪಟ್ಟಣದಲ್ಲಿ 1942ರಲ್ಲಿ ಮೊದಲ ಬಾರಿಗೆಪ್ರಾರಂಭವಾದ ಗರಡಿ ಮನೆ, 21 ಸದಸ್ಯರೊಂದಿಗೆ ಅಧಿಕೃತವಾಗಿ ರಿಜಿಸ್ಟರ್‌ಆಗಿದೆ. ಸಾವಿರಾರು ಯುವಕರು ಈ ಗರಡಿ ಮನೆಯಲ್ಲಿ ವ್ಯಾಯಾಮಮಾಡಿಕೊಂಡು ದೇಹವನ್ನು ಸದೃಢಗೊಳಿಸಿಕೊಂಡಿ ದ್ದಾರೆ.

ಗರಡಿ ಮನೆಯಿಂದವರ್ಷಕೊಮ್ಮೆ ಏಕಾದಶಿ ಹಳೇಯೂರು ಆಂಜನೇಯಸ್ವಾಮಿ ಜಾತ್ರೆಯಂದುರಾಜ್ಯಮಟ್ಟದ ಕುಸ್ತಿ ಪಂದ್ಯಾ ವಳಿ ಆಯೋಜಿಸಿ ಬೆಳ್ಳಿ ಗದೆ ಹಾಗೂ ನಗದುಬಹುಮಾನವನ್ನು ಕೊಡುವ ಸಂಪ್ರದಾಯವನ್ನು ನಡೆಸಿಕೊಂಡು ಬರಲಾಗಿದೆ.ಹಿಂದೆ ಕುಸ್ತಿ ಆಡುವುದು ಒಂದು ರೀತಿಯ ಪ್ರತಿಷ್ಠೆಯ ವಿಷಯವಾಗಿತ್ತಲ್ಲದೆ, ದೇಹ ದಂಡನೆ ಮೂಲಕ ಆರೋಗ್ಯ ಕಾಪಾಡಿಕೊಳ್ಳುಲು ಗರಡಿಮನೆಯಗಳು ಪೂರಕವಾಗಿದ್ದವು.

ಆದರೆ, ಇಂದು ಗರಡಿ ಮನೆಗಳಿಗೆಮೂಲಸೌಕರ್ಯ ಹಾಗೂ ಸರಿಯಾದ ಜಾಗದ ವ್ಯವಸ್ಥೆ ಇಲ್ಲದೆ ಗರಡಿಮನೆಯ ಕಡೆ ಯುವಕರು ಹೋಗದಂತಾಗಿದ್ದಾರೆ.ಮನವಿಗೆ ಸ್ಪಂದನೆ ಇಲ್ಲ: ತಾಲೂಕಿನಲ್ಲಿ ಏಕೈಕ ಪಟ್ಟಣದಲ್ಲಿ 79 ವರ್ಷಹಳೇಯದಾಗಿರುವ ಗರಡಿ ಮನೆ ಬೀಳುವ ಸ್ಥಿತಿ ತಲುಪು ತ್ತಿದೆ. ಗೋಡೆಗಳುಶಿಥಿಲಗೊಂಡಿದ್ದು, ಯುವಕರ ಅಭ್ಯಾಸಕ್ಕೆ ಸಲ ಕರಣಿಗಳು ಇಲ್ಲವಾಗಿದೆ.

ಶಿಥಿಲಗೊಂಡ ಮನೆಯಲ್ಲಿ ಉತ್ತಮ ವಾತಾವರಣವಿಲ್ಲವಾಗಿದ್ದು, ಯುವಕರುಇಲ್ಲಿ ಅಭ್ಯಾಸ ನಡೆಸಲು ಕಷ್ಟವಾಗಿದೆ. ಇದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆಹಾಗೂ ಜನ ಪ್ರತಿನಿಧಿಗಳಿಗೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಪ್ರಯೋ ಜನವಾಗಿಲ್ಲ ಎಂದು ಇಲ್ಲಿನ ಪೈಲ್ವಾನ್‌ಗಳು ತಿಳಿಸುತ್ತಾರೆ.

Advertisement

ಅಗತ್ಯ ಸೌಲಭ್ಯ ನೀಡಿ: ತಾಲೂಕಿನಲ್ಲಿ ಏಕೈಕ ಗರಡಿ ಮನೆಯನ್ನು ಉಳಿಸಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ದಾನಿ ಗಳ ಸಹಾಯದಿಂದ ವರ್ಷಕ್ಕೆ ಒಂದು ಬಾರಿ ಕುಸ್ತಿ ಪಂದ್ಯಾವಳಿ ನಡೆಸುವುದು ಬಿಟ್ಟರೆ,ಬೇರೆ ಚಟುವಟಿಕೆಗಳು ಇಲ್ಲವಾಗಿದೆ. ಗರಡಿ ಮನೆಗೆ ಸೂಕ್ತವಾಗುವ ಜಾಗಹಾಗೂ ಕಟ್ಟಡವನ್ನು ತಾಲೂಕು ಆಡಳಿತ ನೀಡಬೇಕು. ಯುವಕರಿಗೆವ್ಯಾಯಾಮ ಮಾಡಲು ಸಲ ಕರಣೆ ಸರ್ಕಾರ ನೀಡಬೇಕು.

ಗರಡಿಮನೆಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಯೋಜನೆಯನ್ನು ರೂಪಿಸಬೇಕುಎಂಬುವುದು ಪೈಲ್ವಾನ್‌ಗಳ ಆಗ್ರಹವಾಗಿದೆ.

ಚೇತನ್‌

Advertisement

Udayavani is now on Telegram. Click here to join our channel and stay updated with the latest news.

Next