Advertisement
ಕುಡಿಯುವ ನೀರು ಒದಗಿಸುವ ಹೇಮಾವತಿನಾಲಾ ಅಭಿವೃದ್ಧಿಗೆ ಒತ್ತು ನೀಡಿರುವುದರ ಜೊತೆಗೆಎತ್ತಿನ ಹೊಳೆ ಯೋಜನೆಯ ಕಾಮಗಾರಿ ವೇಗಕ್ಕೆಹೆಚ್ಚು ಆದ್ಯತೆ ನೀಡಿದೆ. ಅಲ್ಲದೆ ಕೆರೆಗಳಿಗೆ ನೀರುಹರಿಸಲು ವಿಶೇಷ ಗಮನ ಹರಿಸುವ ಮೂಲಕನೀರಾವರಿ ಯೋಜನೆಗೆ ಒತ್ತು ನೀಡಿದೆ. ಜಿಲ್ಲೆಗೆ ಕುಡಿಯುವ ನೀರು ಒದಗಿಸುವ ಹೇಮಾವತಿ ನಾಲೆಯಲ್ಲಿನಿರೀಕ್ಷಿತ ನೀರು ಹರಿಸಲು ನಾಲೆ ಅಗಲೀಕರಣ ಆಗಬೇಕಾಗಿರುವ ಹಿನ್ನೆಲೆನಾಲೆಯನ್ನು ಅಭಿವೃದ್ಧಿಪಡಿಸಲು 550 ಕೋಟಿ ರೂ. ಮತ್ತುಕೆರೆಗಳಿಗೆ ನೀರು ಹರಿಸುವಯೋಜನೆಗೆ 250 ಕೋಟಿ ರೂ.ಗಳ ವಿವಿಧ ಕಾಮಗಾರಿಗಳುವೇಗ ಪಡೆದುಕೊಂಡಿವೆ.
Related Articles
Advertisement
ಭದ್ರಾ ಮೇಲ್ದಂಡೆ ಯೋಜನೆ ಅನುಮೋದನೆ:ಕೊರೊನಾ ಕಠಿಣ ಪರಿಸ್ಥಿತಿಯಲ್ಲೂ ಯಡಿಯೂರಪ್ಪನವರ ನೇತೃತ್ವದ ಸರ್ಕಾರ ಜಿಲ್ಲೆಗೆ ಹಲವು ಯೋಜನೆಘೋಷಿಸಿದೆ. ನಗರದಲ್ಲಿ ಶ್ರೀ ಶಿವಕುಮಾರ ಸ್ವಾಮೀಜಿಗೌರವಾರ್ಥ ಸ್ಮತಿವನವನ್ನು ಎರಡು ಕೋಟಿ ವೆಚ್ಚದಲ್ಲಿ ನಿರ್ಮಿಸುವುದಾಗಿ ಮುಖ್ಯ ಮಂತ್ರಿಗಳು ಘೋಷಿಸಿದ್ದಾರೆ. ಭದ್ರಾ ಮೇಲ್ದಂಡೆ ಯೋಜನೆಯ 21.424ಕೋಟಿ ರೂಪಾಯಿಗಳ ಪರಿಷ್ಕೃತ ಅಂದಾಜು ಮೊತ್ತಕ್ಕೆಆಡಳಿತಾತ್ಮಕ ಅನುಮೋದನೆ ನೀಡಿದ್ದಾರೆ. ಈಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದುಘೋಷಿಸುವ ಪ್ರಸ್ತಾವ ನೆಯು ಕೇಂದ್ರ ಸರ್ಕಾರದಮಟ್ಟದಲ್ಲಿದೆ. ಈ ಯೋಜನೆ ಯನ್ನು ಶೀಘ್ರವಾಗಿಪೂರ್ಣಗೊಳಿಸಲು ನಿರ್ಧರಿಸಲಾಗಿದ್ದು, ಇದರಿಂದನಗರವೂ ಸೇರಿದಂತೆ ನಾಲ್ಕು ಜಿಲ್ಲೆಗಳ ರೈತರಿಗೆ ಅನುಕೂಲವಾಗುತ್ತದೆ.
ಬೆಂಗಳೂರು ನಗರದ ವೃಷಭಾವತಿಕಣಿವೆಯಿಂದ ದ್ವಿತೀಯ ಹಂತಕ್ಕೆ ಸಂಸ್ಕರಿಸಿದ 308ಎಂಎಲ್‌ಡಿ ನೀರನ್ನು ತುಮಕೂರು ಗ್ರಾಮಾಂತರ ಸೇರಿದಂತೆ ನಾಲ್ಕು ಜಿಲ್ಲೆಗಳ 234 ಕೆರೆಗಳಿಗೆ ತುಂಬಿಸುವಯೋಜನೆಯನ್ನು 500 ಕೋಟಿ ರೂ. ಅಂದಾಜುವೆಚ್ಚದಲ್ಲಿ ಜಾರಿಗೊಳಿಸಲು ಯೋಜಿಸಲಾಗಿದೆ.
ನಗರದಲ್ಲಿ ಅಭಿವೃದ್ಧಿ ಪರ್ವ: ನಗರ ಶಾಸಕರಾಗಿಜಿ.ಬಿ.ಜ್ಯೋತಿಗಣೇಶ್ ಚುನಾವಣೆಯಲ್ಲಿ ಆಯ್ಕೆಯಾದ ಬಳಿಕ ನಗರದಲ್ಲಿ ಸ್ಮಾರ್ಟ್‌ಸಿಟಿ ಅನುದಾನ ಸೇರಿದಂತೆ ಮುಖ್ಯಮಂತ್ರಿ ಬಿಎಸ್‌ವೈ ಹಾಗೂ ಸಚಿವರುಗಳಪೂರಕ ಸಹಕಾರದೊಂದಿಗೆ ರಾಜ್ಯ ಸರ್ಕಾರದ ವಿವಿಧಅನುದಾನಗಳಡಿ ಹಲವು ಅಭಿವೃದ್ಧಿ ಯೋಜನೆಗಳನ್ನುಸಾಕಾರಗೊಳಿಸುತ್ತಿದ್ದು, ನಗರದಲ್ಲಿ ಮುಂದಿನಮೂರ್‍ನಾಲ್ಕು ದಶಕದ ಬೆಳವಣಿಗೆಗಳ ದೂರದೃಷ್ಟಿಯಿರಿಸಿಕೊಂಡು ಅಭಿವೃದ್ಧಿ ಯೋಜನೆಗಳು ಅನುಷ್ಠಾನಗೊಳ್ಳುತ್ತಿವೆ. ಶಾಸಕ ಜಿ.ಬಿ.ಜ್ಯೋತಿಗಣೇಶ್, ಜಿಲ್ಲಾಉಸ್ತುವಾರಿ ಸಚಿವರು, ಪಾಲಿಕೆ ಜನಪ್ರತಿನಿಧಿಗಳುಹೀಗೆ ಎಲ್ಲರನ್ನು ವಿಶ್ವಾಸಕ್ಕೆ ಪಡೆದು ಪûಾತೀತವಾಗಿನಗರದ ನೀರಿನ ಕೊರತೆ ನೀಗಬೇಕೆಂದು ನಗರದಕೆರೆಗಳ ಪುನರುಜ್ಜೀವನ ಗೊಳಿಸಿದ್ದಾರೆ.
ಕಾಮಗಾರಿ ಚುರುಕು: ಶೈಕ್ಷಣಿಕ ಕ್ಷೇತ್ರದಲ್ಲಿ ಬೆಳವಣಿಗೆಆಗುತ್ತಿರುವ ತುಮಕೂರು ನಗರದ ಅಭಿವೃದ್ಧಿಗೆಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿ ಚುರುಕುಗೊಂಡಿದೆ. ಅದಕ್ಕೆ ಪೂರಕವಾಗಿ ರಾಜ್ಯ ಸರ್ಕಾರವೂಅನುದಾನ ಬಿಡುಗಡೆ ಮಾಡಿರುವ ಹಿನ್ನೆಲೆ ಸ್ಮಾರ್ಟ್‌ಸಿಟಿ ಕಾಮಗಾರಿಯಲ್ಲಿ ಇತರೆ ನಗರಗಳಿಗಿಂತತುಮಕೂರು ರಾಜ್ಯದಲ್ಲಿಯೇ ಮೊದಲ ಸ್ಥಾನದಲ್ಲಿದೆ.
ಚಿ.ನಿ.ಪುರುಷೋತ್ತಮ್