Advertisement

ಚುನಾವಣೆಗೆ ಮುನ್ನವೇ ಸಿಎಂ ಸ್ಥಾನಕ್ಕೆ  ಕಾಂಗ್ರೆಸ್‌ ಕಣ್ಣು !

08:39 PM Jun 26, 2021 | Team Udayavani |

ತುಮಕೂರು: ಕಾಂಗ್ರೆಸ್‌ ನಾಯಕರು ಚುನಾವಣೆಗೆ ಮುನ್ನವೇ ಮುಖ್ಯಮಂತ್ರಿಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಅವರು ಮೊದಲು ಚುನಾವಣೆಯಲ್ಲಿ 113 ಸ್ಥಾನ ಗೆಲ್ಲಲಿ. ತದನಂತರ ಮುಖ್ಯಮಂತ್ರಿಸ್ಥಾನದ ಬಗ್ಗೆ ಚಿಂತನೆ ನಡೆಸಲಿ ಎಂದು ನಗರಾಭಿವೃದ್ದಿ ಸಚಿವ ‌ ಬೈರತಿಬಸವರಾಜು ಹೇಳಿದರು.

Advertisement

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಕಾಂಗ್ರೆಸ್‌ನಲ್ಲಿಭಾರೀಸದ್ದುಮಾಡುತ್ತಿರುವಮುಖ್ಯಮಂತ್ರಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕೂಸು ಹುಟ್ಟುವ ಮೊದಲೇಕುಲಾಯಿ ಹೊಲಿಸಿದಂತೆ ಕಾಂಗ್ರೆಸ್‌ನಾಯಕರು ಚುನಾವಣೆಗೆ ಇನ್ನು2 ವರ್ಷಬಾಕಿ ಇರುವಾಗಲೇ ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿದ್ದಾರೆ ಎಂದುಟೀಕಿಸಿದರು.

ಕಾಂಗ್ರೆಸ್‌ನವರು ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿರುವುದು ಆಪಕ್ಷದ ನಾಯಕರ ಆಂತರಿಕ ವಿಚಾರ. ಆಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ.ನಮ್ಮಪಕ್ಷದಲ್ಲಿಯಾವುದೇ ಗೊಂದಲವಿಲ್ಲ.ಈಗಾಗಲೇ ಮುಖ್ಯಮಂತ್ರಿ ಬದಲಾವಣೆಚರ್ಚೆ ವಿಚಾರಕ್ಕೆ ತೆರೆ ಬಿದ್ದಿದೆ ಎಂದುಸ್ಪಷ್ಟಪಡಿಸಿದರು.ಈಗಾಗಲೇ ಪಕ್ಷದ ರಾಜ್ಯ ಉಸ್ತುವಾರಿಅರುಣ್‌ ಸಿಂಗ್‌ ಭೇಟಿ ನೀಡಿ ಪರಿಸ್ಥಿತಿಅವಲೋಕಿಸಿದ್ದಾರೆ. ಅಲ್ಲದೇ ನಾವೆಲ್ಲರೂಒಗ್ಗಟ್ಟಾಗಿದ್ದೇವೆ.

ಮುಂದಿನ ಚುನಾವಣೆಯನ್ನು ಸಮರ್ಥವಾಗಿ ಎದುರಿಸುತ್ತೇವೆ.ಇದರಲ್ಲಿ ಯಾವುದೇ ಗೊಂದಲವಿಲ್ಲಎಂದು ತಿಳಿಸುವ ಮೂಲಕ ನಾಯಕತ್ವಬದಲಾವಣೆ ವಿಚಾರಕ್ಕೆ ತೆರೆ ಎಳೆದಿದ್ದಾರೆ.ಮಾಜಿ ಸಚಿವ ರಮೇಶ್‌ ಜಾರಕಿಹೊಳಿಸಿಡಿ ವಿಚಾರದಲ್ಲಿ ಕೆಲ ವ್ಯತ್ಯಾಸವಾಗಿದೆ.ಇನ್ನು ಕೆಲವೇ ದಿನದಲ್ಲಿ ಸತ್ಯಾಂಶಹೊರಬರಲಿದೆ ಎಂದ ಅವರು, ಸಿಡಿಪ್ರಕರಣದ ತನಿಖೆ ಪೂರ್ಣಗೊಂಡುಸತ್ಯಾಸತ್ಯತೆ ಬಹಿರಂಗಗೊಂಡು ಕ್ಲೀನ್‌ಚಿಟ್‌ ಆದ ಮೇಲೆ ಸಹಜವಾಗಿಯೇಅವರು ಸಚಿವ ಸ್ಥಾನಕ್ಕೆ ಮತ್ತೆ ಮರಳಿಬರುತ್ತಾರೆ. ನಾವೆಲ್ಲಾ ಒಗ್ಗಟ್ಟಾಗಿದ್ದೇವೆ.ರಮೇಶ್‌ ಜಾರಕಿಹೊಳಿ ಅವರಜತೆಯಲ್ಲಿದ್ದೇವೆ. ಅವರು ರಾಜೀನಾಮೆನೀಡುವ ಪ್ರಸ್ತಾವನ್ನು ಎಲ್ಲೂ ಮಾಡಿಲ್ಲ. ಆಬಗ್ಗೆ ಅವರು ಪ್ರಸ್ತಾಪಿಸುವುದಿಲ್ಲ ಎಂಬಭರವಸೆ ತಮಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next