Advertisement

ಇಂದಿನ ನಾಯಕರಿಗೆ ಬಾಬುಜೀ ಆದರ್ಶ ಅವಶ್ಯ

09:51 PM Jul 08, 2021 | Team Udayavani |

ತುಮಕೂರು: ಸಮಾಜದಲ್ಲಿ ತುಳಿತಕ್ಕೆಒಳಗಾದವರಿಗಾಗಿ, ದೇಶದ ಸ್ವಾತಂತ್ರÂಕ್ಕಾಗಿ ಜೀವನದುದ್ದಕ್ಕೂ ಹೋರಾಡಿದಬಾಬು ಜಗಜೀವನ್‌ರಾಮ್‌ ಅವರಆದರ್ಶ ಗುಣಗಳು ಇಂದಿನ ನಾಯಕರಿಗೆ ಅವಶ್ಯಕ ಎಂದು ನಗರ ಶಾಸಕಜ್ಯೋತಿಗಣೇಶ್‌ ಅಭಿಪ್ರಾಯಪಟ್ಟರು.

Advertisement

ಶಾಸಕರ ಕಚೇರಿಯಲ್ಲಿ ನಡೆದ ಬಾಬುಜಗಜೀವನ್‌ರಾಮ್‌ ಪುಣ್ಯಸ್ಮರಣೆಕಾರ್ಯಕ್ರಮದಲ್ಲಿಮಾತನಾಡಿದಅವರು,ಯುವಕರಾಗಿದ್ದಾಗ ಸ್ವಾತಂತ್ರÂಕ್ಕಾಗಿ,ಸ್ವಾತಂತ್ರ ಪೂರ್ವದಲ್ಲಿಯೂ ಪಾರ್ಲಿಮೆಂಟ್‌ ಸದಸ್ಯರು, ಸ್ವಾತಂತ್ರÂ ಬಂದನಂತರ ಸಂಸದರಾಗಿ, ಸಚಿವರಾಗಿ ಸಂವಿಧಾನವನ್ನು ಅಚ್ಚುಕಟ್ಟಾಗಿ ಜಾರಿಗೊಳಿಸುವಲ್ಲಿ ಬಾಬು ಜಗಜೀವನ್‌ರಾಮ್‌ಅವರ ಪಾತ್ರ ಮಹತ್ವದ್ದು ಎಂದರು.

ಭಾರತ ಸ್ವಾತಂತ್ರದ ಮೊದಲ ಸಚಿವಸಂಪುಟದ ಸದಸ್ಯರಾಗಿದ್ದು, 1986ರಜು.6ರಂದು ಅವರು ದೈವಾಧಿನರಾಗುವವರೆಗೂ ಒಂದಲ್ಲ ಒಂದು ರೀತಿ ಸಂಸತ್ತಿನಲ್ಲಿ ಕಾರ್ಯ ನಿರ್ವಹಿಸಿ, ಭಾರತದಸಂಸತ್ತಿಗೆ ತನ್ನದೇ ಆದ ಹೆಗ್ಗಳಿಕೆಯನ್ನನೀಡಿದವರು. ಬಾಬು ಜೀ ಎಂದೇಖ್ಯಾತರಾಗಿದ್ದ ಅವರು, ಹಸಿರು ಕ್ರಾಂತಿಮಾಡುವ ಮೂಲಕ ಆಹಾರದಲ್ಲಿ ದೇಶಸ್ವಾಯತ್ತೆ ಸಾಧಿಸಲು ಅವರ ಮುಂದಾಲೋಚನೆಯೇ ಕಾರಣ. ಸಮಾಜದಲ್ಲಿರುವ ಅಸಮಾನತೆಯನ್ನು ಹೋಗಲಾಡಿಸಲು ಶ್ರಮಿಸಿದ ಅವರ ಜೀವನ ಇಂದಿನನಾಯಕರಿಗೆ ಮಾದರಿ ಎಂದು ಹೇಳಿದರು.

ಬಿಜೆಪಿ ಎಸ್‌ಸಿ ಮೋರ್ಚಾ ಅಧ್ಯಕ್ಷಕೆ.ವರದಯ್ಯ, ಹನುಮಂತರಾಜು,ಆಶ್ರಯ ಕಮಿಟಿ ಸದಸ್ಯ ಸಿದ್ದಗಂಗಯ್ಯ,ಬಿಜೆಪಿ ನಗರಾಧ್ಯಕ್ಷ ಟಿ.ಎಚ್‌.ಹನುಮಂತರಾಜು, ಪಾಲಿಕೆ ಮಾಜಿಉಪಮೇಯರ್‌ಹನುಮಂತರಾಯಪ್ಪ,ಕಿರಣ್‌ಕುಮಾರ್‌, ಎನ್‌.ರಾಜಣ್ಣ,ಮುಖಂಡ ಮನೋಹರ್‌ಗೌಡ,ಇಂದ್ರಕುಮಾರ್‌, ಮಹೇಶ್‌ಬಾಬು,ಅಣೆತೋಟ ಶ್ರೀನಿವಾಸ್‌ ಹಾಗೂಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next