Advertisement

Kollywood: ಕಮಲ್‌ ಹಾಸನ್‌ ʼಥಗ್‌ ಲೈಫ್‌ʼ ಅಖಾಡಕ್ಕೆ ಬಾಲಿವುಡ್‌ನ ಖ್ಯಾತ ನಟರು ಎಂಟ್ರಿ?

03:48 PM Apr 30, 2024 | Team Udayavani |

ಚೆನ್ನೈ: ಕಮಲ್‌ ಹಾಸನ್‌ ಅವರ ಬಹು ನಿರೀಕ್ಷಿತ ʼಥಗ್‌ ಲೈಫ್‌ʼ ಸಿನಿಮಾ ಸಟ್ಟೇರಿದ ದಿನದಿಂದ ದೊಡ್ಡಮಟ್ಟದಲ್ಲಿ ಸದ್ದು ಮಾಡುತ್ತಿದೆ. ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಸಿನಿಮಾದ ಹೈಪ್‌ ಹೆಚ್ಚಿದೆ.

Advertisement

ʼವಿಕ್ರಮ್‌ʼ ಸಿನಿಮಾದ ಬಳಿಕ ಕಮಲ್‌ ಹಾಸನ್‌ ಅವರ ಮುಂದಿನ ಸಿನಿಮಾಗಳ ಬಗ್ಗೆ ಕುತೂಹಲ ಹೆಚ್ಚಿದೆ. 36 ವರ್ಷದ ಬಳಿಕ ಕಮಲ್‌ ಹಾಸನ್‌ – ಮಣಿರತ್ನಂ ಜೊತೆಯಾಗುತ್ತಿದ್ದಾರೆ. ಈಗಾಗಲೇ ಫಸ್ಟ್‌ ಲುಕ್‌ ಟೀಸರ್‌ಸಖತ್‌ ಸೌಂಡ್‌ ಮಾಡಿದೆ.

ಸಿನಿಮಾದಲ್ಲಿ ದೊಡ್ಡ ಹಾಗೂ ಖ್ಯಾತ ಕಲಾವಿದರು ನಟಿಸಲಿದ್ದಾರೆ ಎನ್ನಲಾಗಿದೆ. ಈ ಸಾಲಿನಲ್ಲಿ ಜೋಜು ಜಾರ್ಜ್ ಮತ್ತು ಗೌತಮ್ ಕಾರ್ತಿಕ್ , ತ್ರಿಶಾ ಕೃಷ್ಣನ್, ಅಭಿರಾಮಿ, ನಾಸರ್, ಗೌತಮ್ ಕಾರ್ತಿಕ್, ಜೋಜು ಜಾರ್ಜ್, ಐಶ್ವರ್ಯ ಲಕ್ಷ್ಮಿಸೇರಿದ್ದಾರೆ.

ಇದೀಗ ಬಾಲಿವುಡ್‌ ಇಬ್ಬರು ನಟರು ಸಿನಿಮಾದ ಭಾಗವಾಗಲಿದ್ದಾರೆ ಎನ್ನುವ ಸುದ್ದಿಯೊಂದು ಹೊರಬಿದ್ದಿದೆ. ಖ್ಯಾತ ನಟ ಪಂಕಜ್ ತ್ರಿಪಾಠಿ ಮತ್ತು ಅಲಿ ಫಜಲ್ ʼಥಗ್‌ ಲೈಫ್ʼ ನಲ್ಲಿ ನೆಗೆಟಿವ್‌ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

ಮೂಲಗಳ ಪ್ರಕಾರ ಇಬ್ಬರು ಈಗಾಗಲೇ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದ್ದು, ಇವರೊಂದಿಗೆ ಕಮಲ್‌ ಹಾಸನ್‌ ಹಾಗೂ ಸಿಲಂಬರಸನ್ ಟಿಆರ್ ಕೂಡ ಭಾಗಿಯಾಗಿದ್ದಾರೆ ಎನ್ನಲಾಗಿದೆ.

Advertisement

ದುಲ್ಕರ್‌ ಸಲ್ಮಾನ್‌ ಸಿನಿಮಾದಲ್ಲಿ ʼಥಗ್‌ ಲೈಫ್‌ʼ ನಲ್ಲಿ ಕಾಣಿಸಿಕೊಳ್ಳುವವರಿದ್ದರು, ಆದರೆ ಆ ಬಳಿಕ ಅವರು ಶೂಟಿಂಗ್‌ ವಿಳಂಬವಾದ ಕಾರಣಕ್ಕೆ ಅವರು ಸಿನಿಮಾದಿಂದ ಹೊರನಡೆದಿದ್ದಾರೆ.

ಮಣಿರತ್ನಂ – ಕಮಲ್‌ ಹಾಸನ್‌ ʼನಾಯಕನ್‌ʼ(1987) ಬಳಿಕ ಎರಡನೇ ಬಾರಿ ʼಥಗ್‌ ಲೈಫ್‌ʼ ಮೂಲಕ ಜೊತೆಯಾಗುತ್ತಿದ್ದಾರೆ.

ಕಮಲ್‌ ಹಾಸನ್‌ ಈ ಸಿನಿಮಾದಲ್ಲಿ ಮೂರು ಶೇಡ್‌ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next