ಹೈದರಾಬಾದ್: ತನ್ನ ಸಿನಿಮಾಗಳ ಮೂಲಕ ಪ್ಯಾನ್ ಇಂಡಿಯಾದಲ್ಲಿ ಹವಾ ಎಬ್ಬಿಸಿರುವ ನಿರ್ದೇಶಕ ಸುಕುಮಾರ್ (Director Sukumar) ಕಾರ್ಯಕ್ರಮದಲ್ಲಿ ಕೊಟ್ಟ ಹೇಳಿಕೆಯೊಂದು ವೈರಲ್ ಆಗುತ್ತಿದೆ.
ʼಪಷ್ಪʼ, ಪುಷ್ಪ-2ʼ ಸೇರಿದಂತೆ ಬಿಗ್ ಹಿಟ್ ಸಿನಿಮಾಗಳನ್ನು ನೀಡಿರುವ ಸುಕುಮಾರ್ ಟಾಲಿವುಡ್ ಮಾತ್ರವಲ್ಲದೆ ಭಾರತೀಯ ಚಿತ್ರರಂಗದಲ್ಲೇ ಜನಪ್ರಿಯ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ.
ಇತ್ತೀಚೆಗೆ ರಿಲೀಸ್ ಆಗಿರುವ ʼಪುಷ್ಪ-2ʼ (Pushpa 2: The Rule) 1500 ಕೋಟಿ ರೂ. ಗಳಿಕೆ ಕಾಣುವ ಮೂಲಕ ಹಲವು ದಾಖಲೆಗಳನ್ನು ಬ್ರೇಕ್ ಮಾಡಿದೆ. ಈ ಸಂಭ್ರಮದ ನಡುವೆಯೇ ಸುಕುಮಾರ್ ಸಿನಿಮಾರಂಗ ಬಿಡುವ ಬಗ್ಗೆ ಮಾತನಾಡಿರುವ ವಿಡಿಯೋ ವೈರಲ್ ಆಗುತ್ತಿದೆ.
ರಾಮ್ ಚರಣ್ ಅವರ ʼಗೇಮ್ ಚೇಂಜರ್ʼ ಸಿನಿಮಾದ ಪ್ರಚಾರ ಕಾರ್ಯುಕ್ರಮದಲ್ಲಿ ಅವರು ಭಾಗಿಯಾಗಿದ್ದರು. ಅಮೆರಿಕಾದ ಡಲ್ಲಾಸ್‌ನಲ್ಲಿ ನಡೆದ ಈ ಪ್ರಚಾರ ಕಾರ್ಯಕ್ರಮದಲ್ಲಿ ಸುಕುಮಾರ್ ಅವರು ʼಗೇಮ್ ಚೇಂಜರ್ʼ ಸೂಪರ್ ಹಿಟ್ ಆಗುತ್ತದೆ. ರಾಮ್ ಚರಣ್ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ ಎಂದಿದ್ದರು.
ಇದೇ ಕಾರ್ಯಕ್ರಮದಲ್ಲಿ ನಿರೂಪಕಿ ಸುಕುಮಾರ್ ಅವರಿಗೆ ಪ್ರಶ್ನೆಯೊಂದನ್ನು ಕೇಳಿದ್ದು, ಈ ಪ್ರಶ್ನೆಗೆ ಸುಕುಮಾರ್ ಕೊಟ್ಟ ಉತ್ತರ ವೈರಲ್ ಆಗಿದೆ.
“ಜೀವನದಲ್ಲಿ ಏನನ್ನು ಬಿಡಲು ಬಯಸುತ್ತೀರಿ” ಎಂದು ಕೇಳಿದಾಗ, ಸುಕುಮಾರ್ ತಕ್ಷಣವೇ “ಸಿನಿಮಾ” ಎಂದು ಉತ್ತರಿಸಿದ್ದಾರೆ. ಪಕ್ಕದಲ್ಲಿದ್ದ ರಾಮ್ ಚರಣ್ ಅವರು ಸುಕುಮಾರ್ ಅವರಿಂದ “ಮೈಕ್ ತೆಗೆದುಕೊಂಡು ಇಲ್ಲ ಇಲ್ಲ ಅದು ಆಗುವುದಿಲ್ಲ” ಎಂದು ಉತ್ತರಿಸಿದ್ದಾರೆ.
ಕೆಲ ಸೆಕೆಂಡ್‌ಗಳ ಈ ವಿಡಿಯೋ ಟಾಲಿವುಡ್ ವಲಯದಲ್ಲಿ ಹರಿದಾಡುತ್ತಿದೆ. ಸಿನಮಾ ಸಂಬಂಧಿತ ಕೆಲಸಗಳ ಒತ್ತಡದಿಂದಾಗಿ ಅವರು ಈ ರೀತಿ ಉತ್ತರಿಸಿದ್ದಾರೆ ಎಂದು ನೆಟ್ಟಿಗರು ಹೇಳುತ್ತಿದ್ದಾರೆ.
ಮುಂದೆ ಸುಕುಮಾರ್ ʼಪುಷ್ಪ-3ʼ ಹಾಗೂ ರಾಮ್ ಚರಣ್ ಅವರ ಸಿನಿಮಾದಲ್ಲಿ ಕೆಲಸ ಮಾಡಲಿದ್ದಾರೆ ಎನ್ನಲಾಗಿದೆ. ಇನ್ನೊಂದು ಕಡೆ ಸುಕುಮಾರ್ ಕೆಲ ಕಾಲ ಬ್ರೇಕ್ ತೆಗದುಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.